Friday, June 14, 2024
spot_img
spot_img
spot_img
spot_img
spot_img
spot_img

ವೀರಪ್ಪನ್ ಕೊಂದಿದ್ದ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಪೊಲೀಸ್ ಆಫೀಸರ್ suspend.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಕಾಡುಗಳ್ಳ ವೀರಪ್ಪನ್‌ ಕರ್ನಾಟಕ – ತಮಿಳುನಾಡು ರಾಜ್ಯಗಳನ್ನು ಇನ್ನಿಲ್ಲದಂತೆ ಕಾಡಿದ್ದ ಪಾಪಿ. ಇತನನ್ನು ಗುಂಡಿಕ್ಕಿ ಕೊಂದ ‘ಎನ್‌ಕೌಂಟರ್‌ ಸ್ಪೆಷಲಿಸ್ಟ್‌’, ತಮಿಳುನಾಡಿನ ತಿರುವಣ್ಣಾಮಲೈ ಎಡಿಎಸ್ಪಿ ಎಸ್‌. ವೆಲ್ಲದುರೈ ಅವರು ಗುರುವಾರ ಸೇವಾ ನಿವೃತ್ತಿ (Service Retirement) ಹೊಂದಿದ್ದಾರೆ.

ವೆಲ್ಲಾದುರೈ ಅವರು ಎನ್‌ಕೌಂಟರ್ ಸ್ಪೆಷಲಿಸ್ಟ್ (Encounter Specialist) ಎಂದೇ ಖ್ಯಾತರಾಗಿದ್ದು, ಅವರನ್ನು ತಮಿಳುನಾಡು ಗೃಹ ಇಲಾಖೆ ಗುರುವಾರ ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.

ಇದನ್ನು ಓದಿ : ಕುಡಿದ ಮತ್ತಲ್ಲಿ ನಿಂದಿಸಿದ ಆರೋಪ ; ನಟಿ ರವೀನಾ ಟಂಡನ್ ಮೇಲೆ ಹಲ್ಲೆಗೆ ಮುಂದಾದ ಜನ ; Video viral.!

2013ರಲ್ಲಿ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ‘ಕೊಕ್ಕಿ’ ಕುಮಾರ್ ಅಲಿಯಾಸ್ ರಾಮು ಎಂಬಾತನ ಲಾಕಪ್ ಡೆತ್ (Lockup death) ಪ್ರಕರಣದಲ್ಲಿ ವೆಲ್ಲಾದುರೈ ಭಾಗಿಯಾಗಿದ್ದರು ಎಂದು ಆರೋಪಿಸಿ ಗುರುವಾರ ಅಮಾನತುಗೊಳಿಸಲಾಗಿತ್ತು.

ಆದರೆ ಇದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಶುಕ್ರವಾರದ ನಂತರದ ಆದೇಶದಲ್ಲಿ ಇಲಾಖೆ ಕೆಲವು ಷರತ್ತುಗಳಿಗೆ ಒಳಪಟ್ಟು ನಿವೃತ್ತಿಗೆ (ಅಮಾನತು ಹಿಂಪಡೆದು) ಅವಕಾಶ ನೀಡಿದೆ.

ಅಲ್ಲದೇ ವೆಲ್ಲಾದುರೈ ಅವರ ನಿವೃತ್ತಿ ಫಂಡ್‌ನಲ್ಲಿ 5 ಲಕ್ಷ ರೂ. ಕಡಿತಗೊಳಿಸಿ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : Special news : ಇಂತಹ 500 ನೋಟು ನಿಮ್ಮಲ್ಲಿದೆಯಾ.? ಹಾಗಾದ್ರೆ ನೀವಾಗಬಹುದು ಲಕ್ಷಾಧೀಶ.!

ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಎಂದೇ ಖ್ಯಾತರಾಗಿದ್ದ ವೆಲ್ಲದುರೈ, 2003ರಲ್ಲಿ ಹಿಸ್ಟರಿ ಶೀಟರ್‌ ವೀರಮಣಿ ಎಂಬಾತನನ್ನು ಚೆನ್ನೈನಲ್ಲಿ ಗುಂಡಿಕ್ಕಿ (shoot) ಸಾಯಿಸಿ ಪ್ರವರ್ಧಮಾನಕ್ಕೆ ಬಂದಿದ್ದರು. ನಂತರ 2004ರಲ್ಲಿ ವೆಲ್ಲದುರೈ ಗುಂಡಿಗೆ ವೀರಪ್ಪನ್‌ ಬಲಿಯಾಗಿದ್ದ.

ಇನ್ನೂ ವೆಲ್ಲಾದುರೈ ಅವರನ್ನು 2021ರಲ್ಲಿ ಡಿಎಂಕೆ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಕಾಂಚೀಪುರಂ ಜಿಲ್ಲೆಯ ಕೈಗಾರಿಕಾ ಘಟಕಗಳು ಮತ್ತು ಉದ್ಯಮಿಗಳನ್ನು ಗುರಿಯಾಗಿಸಿದ ಸಮಾಜ ವಿರೋಧಿಗಳ ಮೇಲೆ ನಿಗಾ ವಹಿಸಲು ಮತ್ತು ನಿಯಂತ್ರಿಸಲು ತಮಿಳುನಾಡು ಸರ್ಕಾರವು ರಾಜ್ಯ ಪೊಲೀಸ್ ವಿಶೇಷ ವಿಭಾಗದ ವಿಶೇಷ ಅಧಿಕಾರಿಯಾಗಿ (Special Officer of the State Police Special Branch) ನೇಮಕ ಮಾಡಲಾಗಿತ್ತು.

spot_img
spot_img
- Advertisment -spot_img