Saturday, November 9, 2024
spot_imgspot_img
spot_img
spot_img
spot_img
spot_img
spot_img

ಪ್ಲಾಸ್ಟಿಕ್ ಪ್ಯಾಕೆಟ್​​​ನಲ್ಲಿರುವ ಆಹಾರ ಸೇವಿಸುತ್ತಿದ್ದೀರಾ? ಹಾಗಿದ್ರೆ ಈ ಸುದ್ದಿ ಓದಿ.

WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಚಿಪ್ಸ್ ನಿಂದ ಹಿಡಿದು ಹಾಲಿನ ಪ್ಯಾಕೆಟ್, ಬ್ರೆಡ್ ಹೀಗೆ ವಿವಿಧ ರೀತಿಯ ಆಹಾರಗಳು ಪ್ಲಾಸ್ಟಿಕ್ ಕವರ್ ಗಳಲ್ಲಿ ಸಿಗುತ್ತವೆ.

ಇತ್ತೀಚಿಗೆ ನಡೆದ ಒಂದು ಸಂಶೋಧನೆಯ ಪ್ರಕಾರ, ಪ್ಲಾಸ್ಟಿಕ್ ನಲ್ಲಿ ಬರುವ ಆಹಾರಗಳಲ್ಲಿ ಅನೇಕ ರೀತಿಯ ರಾಸಾಯನಿಕಗಳಿವೆ. ಅವು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂಬ ಆಘಾತಕಾರಿ ಸುದ್ದಿಯನ್ನು ಬಹಿರಂಗಪಡಿಸಿದೆ.

ಇದನ್ನು ಓದಿ : Astrology : ಸಂತರಂತೆಯೇ ಶಾಂತ ಗುಣವನ್ನು ಹೊಂದಿರುತ್ತಾರೆ ಈ ರಾಶಿಯವರು.!

ಸಂಶೋಧನೆಯು ಪ್ಲಾಸ್ಟಿಕ್ ಪ್ಯಾಕೆಟ್ ನಲ್ಲಿ ಬರುವ ಆಹಾರಗಳಲ್ಲಿ 200 ರೀತಿಯ ರಾಸಾಯನಿಕಗಳು ಕಂಡು ಬಂದಿದ್ದು, ಅವು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದೆ.

ಈ ಹಾನಿಕಾರಕ ರಾಸಾಯನಿಕಗಳು ಹತ್ತಾರು ಆಹಾರದ ಮೂಲಕ ನಮ್ಮ ದೇಹವನ್ನು ಪ್ರವೇಶಿಸುತ್ತಿವೆ. ಆರೋಗ್ಯದ ದೃಷ್ಟಿಯಿಂದ ಇವುಗಳನ್ನು ನಿಮ್ಮ ಆಹಾರಗಳಲ್ಲಿ ಸೇರಿಸಿಕೊಳ್ಳದಿರುವುದು ಉತ್ತಮ ಎಂದು ಫುಡ್ ಪ್ಯಾಕೇಜಿಂಗ್ ಫೋರಂನ ಸಂಶೋಧಕರು ನಡೆಸಿದ ಈ ಅಧ್ಯಯನಗಳು ಆಹಾರಗಳ ಪ್ಯಾಕೇಜಿಂಗ್ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

ಇದನ್ನು ಓದಿ : Health : ಈ ಸಸ್ಯ ಕಂಡರೆ ಬಿಡಬೇಡಿ; ಎಲ್ಲಾ ರೋಗಗಳಿಗೆ ಇದು ಬ್ರಹ್ಮಾಸ್ತ್ರ ಇದ್ದಂಗೆ.!

ಸ್ತನ ಕ್ಯಾನ್ಸರ್ ಗೆ ಕಾರಣವಾಗುವ 76 ರೀತಿಯ ರಾಸಾಯನಿಕಗಳು ಇರುವುದು ಕಂಡು ಬಂದಿದೆ. ಈ ಕ್ಯಾನ್ಸರ್ ಪ್ರಕರಣಗಳನ್ನು ತಡೆಗಟ್ಟಲು ಆಹಾರ ಪ್ಯಾಕೆಟ್ ಗಳಿಂದ ಅಂತಹ ಹಾನಿಕಾರಕ ರಾಸಾಯನಿಕಗಳನ್ನು ತೆಗೆಯಲು ಸೂಚಿಸಲಾಗಿದೆ ಎಂದು ಅಧ್ಯಯನದ ಲೇಖಕ ಜೇನ್ ಮುಂಕೆ ಅವರು ತಿಳಿಸಿದ್ದಾರೆ.

ಹೆಚ್ಚಿನ ಕೊಲೆಸ್ಟ್ರಾಲ್, ಕ್ಯಾನ್ಸರ್ ಮತ್ತು ಹೃದ್ರೋಗಕ್ಕೆ ಕಾರಣವಾಗುವ ಪರ್ಫ್ಲೋರೋಸಿಲ್ ಮತ್ತು ಪಾಲಿಫ್ಲೋರೋಸಿಲ್ ಎಂಬ ರಾಸಾಯನಿಕ ಅಂಶಗಳು ಆಹಾರ ಪ್ಯಾಕೆಟ್ ನಲ್ಲಿ ಕಂಡು ಬರುವ ರಾಸಾಯನಿಕಗಳಾಗಿವೆ. ಪ್ಲಾಸ್ಟಿಕ್ ಪ್ಯಾಕೆಟ್ ಅಗ್ಗವಾಗಿದ್ದು ಬಾಳಿಕೆ ಬರುತ್ತದೆ, ಆದರೆ ಇದು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುತ್ತದೆ. ಅದಕ್ಕಾಗಿಯೇ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಗಾಜು ಅಥವಾ ಸ್ಟೀಲ್ ಪಾತ್ರೆಗಳನ್ನು ಮಾತ್ರ ಬಳಸಿ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಇದನ್ನು ಓದಿ : Lokayukta raid : ಆರೋಗ್ಯ ಇಲಾಖೆಯ ಮಹಿಳಾ ಅಧಿಕಾರಿ ಲೋಕಾಯುಕ್ತ ಬಲೆಗೆ.!

ಆಲ್ಕೋಹಾಲ್, ಬೊಜ್ಜು, ಸಿಗರೇಟ್ ಬಳಕೆ, ದೈಹಿಕ ಚಟುವಟಿಕೆಯ ಕೊರತೆ, ಅನಾರೋಗ್ಯಕರ ಜೀವನಶೈಲಿ ಮುಂತಾದ ಅನೇಕ ಅಂಶಗಳು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತಿವೆ. ಇಂದು ಸ್ತನ ಕ್ಯಾನ್ಸರ್ ಮಹಿಳೆಯರ ಸಾವಿಗೆ ಎರಡನೇ ಅತಿದೊಡ್ಡ ಕಾರಣವಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img