ಜನಸ್ಪಂದನ ನ್ಯೂಸ್, ತುಮಕೂರು : ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಹ ಘಟನೆ ನಡೆದಿದ್ದು, ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಮಹಿಳೆಯನ್ನು ಪುಸಲಾಯಿಸಿ ತನ್ನ ಕಚೇರಿಯಲ್ಲೇ ಡಿವೈಎಸ್ಪಿ ರಾಮಚಂದ್ರಪ್ಪ ಲೈಂಗಿಕ ದೌರ್ಜನ್ಯ ನಡೆಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತುಮಕೂರು ಜಿಲ್ಲೆಯ ಮಧುಗಿರಿ ಡಿವೈಎಸ್ಪಿ (Madhugiri Dysp of Tumkur District) ರಾಮಚಂದ್ರಪ್ಪ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ (Sexual assault) ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಗೋಕಾಕ : ಸ್ಕೂಲ್ ಬ್ಯಾಗ್ ತರಲು ನಿರಾಕರಿಸಿದ್ದಕ್ಕೆ SSLC ವಿದ್ಯಾರ್ಥಿಗೆ ಚಾಕು ಇರಿತ.!
ಮಹಿಳೆಯೊಬ್ಬರು ಜಮೀನು ವಿವಾದಕ್ಕೆ (Land dispute) ಸಂಬಂಧಿಸಿದಂತೆ ದೂರು ನೀಡಲು ಬಂದ ವೇಳೆ ಮಧುಗಿರಿ ಉಪವಿಭಾಗದ ಡಿವೈಎಸ್‌ಪಿ ರಾಮಚಂದ್ರಪ್ಪ ರಾಸಲೀಲೆ ನಡೆಸಿದ್ದಾರೆ.
ಹೀನಕೃತ್ಯದ ವಿಡಿಯೋ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಡಿವೈಎಸ್‌ಪಿ ತಲೆಮರೆಸಿಕೊಂಡಿದ್ದಾರೆ (Hiding) ಎಂದು ತಿಳಿದು ಬಂದಿದೆ.
ಇದನ್ನು ಓದಿ : ಅವನಿಗಾಗಿ ನಡುರಸ್ತೆಯಲ್ಲಿ ಯುವತಿಯರ ಬಿಗ್ ಫೈಟಿಂಗ್ ; Video ನೋಡಿ.!
ಇನ್ನೂ ಮಹಿಳೆಯು ಪಾವಗಡ ಮೂಲದವರಾಗಿದ್ದು, ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ವಿಚಾರಣೆ ಸಲುವಾಗಿ ಮಹಿಳೆಯನ್ನು ಡಿವೈಎಸ್‌ಪಿ ಕಚೇರಿಗೆ ಕರೆಸಲಾಗಿತ್ತು.
ಡಿವೈಎಸ್‌ಪಿ ರಾಮಚಂದ್ರಪ್ಪ ಈ ವೇಳೆ ಮಹಿಳೆಯನ್ನು ಪುಸಲಾಯಿಸಿ ಆಕೆಯನ್ನು ಕಚೇರಿಯ ಶೌಚಾಲಯದ ಬಳಿ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆ ಶುರು ಮಾಡಿದ್ದಾರೆ. ಮಹಿಳೆಯೊಂದಿಗೆ ಡಿವೈಎಸ್‌ಪಿ ರಾಮಚಂದ್ರಪ್ಪ ಬಲವಂತವಾಗಿ ನಡೆದುಕೊಳ್ಳುತ್ತಿರುವ ದೃಶ್ಯವನ್ನು ಸೆರೆ ಹಿಡಿದ ವ್ಯಕ್ತಿಯೊಬ್ಬರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹಿಂದಿನ ಸುದ್ದಿ : Health : ಕಡಿಮೆ ಮಾತ್ರವಲ್ಲ, ನೀರು ಹೆಚ್ಚು ಕುಡಿಯುವುದು ಒಳ್ಳೆಯದಲ್ಲ; ಯಾಕೆ ಗೊತ್ತಾ?
ಜನಸ್ಪಂದನ ನ್ಯೂಸ್, ಡೆಸ್ಕ್ : ನಮ್ಮ ದೇಹಕ್ಕೆ ನೀರು ಅತ್ಯಗತ್ಯವಾಗಿದೆ. ಪ್ರತಿ ದಿನವೂ ಕನಿಷ್ಠ ಎರಡರಿಂದ ಮೂರು ಲೀಟರ್ ನೀರು ಕುಡಿಯಬೇಕು (Drink at least 2-3 liters of water). ಆದರೆ ಮಳೆಗಾಲ, ಚಳಿಗಾಲದಲ್ಲಿ ಅಷ್ಟು ನೀರು ಕುಡಿಯಲು ಕಷ್ಟಸಾಧ್ಯ. ಇದರಿಂದ ದೇಹದಲ್ಲಿ ನೀರಿನ ಕೊರತೆ ಕಾಡುತ್ತದೆ.
ಇದನ್ನು ಓದಿ : ಕೋಣದ DNA ಪರೀಕ್ಷೆಗೆ ಮುಂದಾದ ಕರ್ನಾಟಕ- ಆಂಧ್ರಪ್ರದೇಶ ಗ್ರಾಮಸ್ಥರು ; ಅಂತದ್ದೇನಾಯ್ತು ಗೊತ್ತಾ.?
ಇನ್ನೂ ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಡೀಹೈಡ್ರೇಷನ್ ಸಮಸ್ಯೆ (Dehydration is a problem) ಉಂಟಾಗುತ್ತದೆ. ಆದರೆ ನಿಮಗ ಗೊತ್ತಾ.? ಹೆಚ್ಚು ನೀರು ಕುಡಿದರೂ ಸಹ ಜೀವಕ್ಕೆ ಕುತ್ತು ತರುತ್ತದೆ ಅಂತ.
ಹೌದು, ನೀರು ಕಡಿಮೆ ಕುಡಿಯುವ ಅಭ್ಯಾಸ ಎಷ್ಟು ಒಳ್ಳೆಯದಲ್ಲವೋ? ನೀರು ಜಾಸ್ತಿ ಕುಡಿಯುವುದು ಸಹ ಅಷ್ಟೇ ಒಳ್ಳೆಯದಲ್ಲ.
ಇದನ್ನು ಓದಿ : ಖಾಲಿ ಇರುವ Anganwadi ಕಾರ್ಯಕರ್ತೆ/ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ವಾಟರ್ ಇನ್‌ಟಾಕ್ಸಿಕೇಷನ್ ಅಂದರೆ ನೀರಿನ ವಿಷ ಅಥವಾ Hyper Hydration ಎಂದರ್ಥ. ಕನ್ನಡದಲ್ಲಿ ಹೇಳಬೇಕೆಂದರೆ ನೀರಿನ ಅಮಲು (Water intoxication) ಎಂದರ್ಥ. ನಾವು ಕಡಿಮೆ ಟೈಮ್ ನಲ್ಲಿ ಹೆಚ್ಚಿನ ಪ್ರಮಾಣದ ನೀರು ಕುಡಿದರೆ, ಶರೀರದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ (Electrolyte imbalance) ಕಾರಣವಾಗುತ್ತದೆ.
ಇದರಿಂದಾಗಿ ನಮ್ಮ ಸಾಮಾನ್ಯ ಶಾರೀರಿಕ ಕ್ರಿಯೆಗಳಿಗೆ ಅಡ್ಡಿಯಾಗಿ (Impairment of physiological functions), ಜೀವಕ್ಕೆ ಮಾರಕವಾಗಬಹುದು. ದೇಹಕ್ಕೆ ನೀರು ಅಗತ್ಯವಿದೆ ಎಂದು ಹೆಚ್ಚು ನೀರು ಕುಡಿಯುವುದು ಕೂಡ ಸರಿಯಲ್ಲ ಎಂಬುದನ್ನು ತಿಳಿದಿರಬೇಕು.
ಇದನ್ನು ಓದಿ : ಠಾಣೆಯಲ್ಲೇ Police ಮೇಲೆ ಹಲ್ಲೆ ಮಾಡಿದ ಭೂಪ.!
ನಾವು ಮೂತ್ರ ಹಾಗೂ ಬೆವರಿನ ಮೂಲಕ ದೇಹದಿಂದ ಹೆಚ್ಚುವರಿ ನೀರನ್ನು (Excess water from the body through urine and sweat) ಹೊರಹಾಕಲಾಗುತ್ತದೆ. ಒಂದು ದಿನಕ್ಕೆ ಇದು ಸುಮಾರು 1-2 ಲೀಟರ್‌ಗಳಿಗೆ ಸಮ. ಆದರೆ, ಕೆಲ ಜನರು ಒಂದು ಅಥವಾ ಎರಡು ಗಂಟೆಯೊಳಗಡೆ 3 ರಿಂದ 4 ಲೀಟರ್ ನೀರು ಸೇವಿಸುತ್ತಾರೆ. ಈ ವೇಳೆ ವಾಟರ್ ಇನ್‌ಟಾಕ್ಸಿಕೇಷನ್ ಸಮಸ್ಯೆ ಕಾಡಿಸುತ್ತದೆ
ಹೈಪರ್ ಹೈಡ್ರೇಷನ್ ಲಕ್ಷಣಗಳು :
* ತಲೆನೋವು
* ವಾಂತಿ
* ಹೊಟ್ಟೆಯುಬ್ಬರ
* ತೂಕಡಿಕೆ
* ಕೈಗಳು, ಪಾದಗಳು ಮತ್ತು ಹೊಟ್ಟೆಯಲ್ಲಿ ತೀವ್ರವಾದ ಊತ
* ಸ್ನಾಯುವಿನ ನೋವು, ದೌರ್ಬಲ್ಯ (Muscle weakness) ಮತ್ತು ಸೆಳೆತ
* ಗೊಂದಲ ಮತ್ತು ತಲೆತಿರುಗುವಿಕೆ.
ಇದನ್ನು ಓದಿ : ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನ ಹಿನ್ನಲೆ : ನಾಳೆ (ಡಿ.27) ಶಾಲಾ ಕಾಲೇಜುಗಳಿಗೆ ರಜೆ.!
ಮುನ್ನೆಚ್ಚರಿಕೆ ಕ್ರಮಗಳು :
ಬಾಯಾರಿಕೆ ನೀಗಿದ ನಂತರ ನೀರು ಕುಡಿಯುವುದನ್ನು ನಿಲ್ಲಿಸುವುದು ಉತ್ತಮ.
ವಾಕರಿಕೆ, ವಾಂತಿ, ಹೊಟ್ಟೆಯುಬ್ಬರವಿದ್ದರೆ (Stomach bloating) ನೀರು ಕುಡಿಯುವುದನ್ನು ನಿಲ್ಲಿಸಬೇಕು.
ಬಾಯಾರಿಕೆಯಾದ್ರೆ ಮಾತ್ರ ನೀರು ಕುಡಿಯಬೇಕು.
ನಿಮ್ಮನ್ನು ನೀವು ನೀರು ಕುಡಿಯುವಂತೆ ಒತ್ತಾಯಿಸುವುದನ್ನು ತಡೆಯುವುದು.