ಜನಸ್ಪಂದನ ನ್ಯೂಸ್, ನೌಕರಿ : ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (DUAS) ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : Food : ಈ ಆಹಾರ ಪದಾರ್ಥಗಳನ್ನು ಅತಿಯಾಗಿ ತಿನ್ನಲೇಬೇಡಿ.!
ಅರ್ಹ ಅಭ್ಯರ್ಥಿಗಳು ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (DUAS) ದ ಅಧಿಕೃತ ವೆಬ್‌ಸೈಟ್ (uasd.edu) ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ಆಯ್ಕೆ ವಿಧಾನ, ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ ಮತ್ತು ಇತರ ಪ್ರಮುಖ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ.
ನೇಮಕಾತಿ ವಿವರಗಳು :
- ವಿಭಾಗದ ಹೆಸರು : ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (DUAS).
- ಹುದ್ದೆಗಳ ಸಂಖ್ಯೆ : 09.
- ಹುದ್ದೆಗಳ ಹೆಸರು : ಎಂಜಿನಿಯರ್ (ಸಹಾಯಕ ಮತ್ತು ಜೂನಿಯರ್).
- ಉದ್ಯೋಗ ಸ್ಥಳ : ಧಾರವಾಡ, (ಕರ್ನಾಟಕ).
- ಉದ್ಯೋಗ ಪ್ರಕಾರ : ಸರ್ಕಾರಿ ಉದ್ಯೋಗ.
- ಅಪ್ಲಿಕೇಶನ್ ವಿಧಾನ : ಆನ್‌ಲೈನ್ ಮೋಡ್.
ಹುದ್ದೆಗಳ ವಿವರ ಮತ್ತು ಶೈಕ್ಷಣಿಕ ಅರ್ಹತೆ :
ಹುದ್ದೆಯ ಹೆಸರು | ಶೈಕ್ಷಣಿಕ ಅರ್ಹತೆ |
---|---|
ಸಹಾಯಕ ಎಂಜಿನಿಯರ್ (ಸಿವಿಲ್) : | ಸಿವಿಲ್ ಎಂಜಿನಿಯರಿಂಗ್ ಪದವಿ |
ಸಹಾಯಕ ಎಂಜಿನಿಯರ್ (ಎಲೆಕ್ಟ್ರಿಕಲ್) : | ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ |
ಜೂನಿಯರ್ ಎಂಜಿನಿಯರ್ (ಸಿವಿಲ್) : | ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ |
ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್) : | ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ |
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 06 ರ ದ್ವಾದಶ ರಾಶಿಗಳ ಫಲಾಫಲ.!
ವೇತನ ಶ್ರೇಣಿ :
- ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.24,590/- ರಿಂದ ರೂ.30,255/- ರವರೆಗೆ ಪ್ರತಿ ತಿಂಗಳು ವೇತನ ನೀಡಲಾಗುವುದು. (DUAS ಅಧಿಸೂಚನೆಯ ಪ್ರಕಾರ)
ವಯೋಮಿತಿ :
- ಅಧಿಸೂಚನೆಯಲ್ಲಿ ನೀಡಿರುವ ಪ್ರಕಾರ (ದಯವಿಟ್ಟು DUAS ಅಧಿಸೂಚನೆಯನ್ನು ಓದಿ)
ಅರ್ಜಿಶುಲ್ಕ :
- ಧಾರವಾಡ ಕೃಷಿ ವಿಶ್ವವಿದ್ಯಾಲಯ (DUAS) ದ ನಿಯಮಗಳಂತೆ ವಿಧಿಸಲಾಗುತ್ತದೆ.
ಆಯ್ಕೆ ವಿಧಾನ :
- ಅಭ್ಯರ್ಥಿಗಳ ಆಯ್ಕೆ ನೇರ ಸಂದರ್ಶನದ ಮೂಲಕ ನಡೆಯುತ್ತದೆ.
ಸಂದರ್ಶನದ ಸ್ಥಳ :
ಅಸೋಸಿಯೇಟ್ ರಿಸರ್ಚ್ ಡೈರೆಕ್ಟರ್ ಕಚೇರಿ,
ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಧಾರವಾಡ, ಕರ್ನಾಟಕ. (Office of the Associate Research Director, University of Agricultural Sciences, Dharwad, Karnataka).
ಇದನ್ನು ಓದಿ : Petrol worth Rs.120 : ಕೈ ಮಾಡಿದ ಪಿಎಸ್‌ಐ : ಮರಳಿ ಕೊಟ್ಟ ಸಿಬ್ಬಂದಿ.!
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್ uasd.edu ಗೆ ಭೇಟಿ ನೀಡಿ.
- ಅಧಿಸೂಚನೆ ಡೌನ್‌ಲೋಡ್ ಮಾಡಿ ಮತ್ತು ಸಂಪೂರ್ಣವಾಗಿ ಓದಿ.
- ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ.
- ಪಾಸ್‌ಪೋರ್ಟ್ ಅಳತೆದ ಫೋಟೋ ಮತ್ತು ಸಹಿ ಲಗತ್ತಿಸಿ.
- ಅರ್ಜಿಯನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
- ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
- ಅಧಿಸೂಚನೆ ಬಿಡುಗಡೆ : 03-07-2025.
- ಸಂದರ್ಶನ ದಿನಾಂಕ : 18-07-2025, ಬೆಳಿಗ್ಗೆ 10:00 ಗಂಟೆಗೆ.
ಪ್ರಮುಖ ಲಿಂಕ್‌ಗಳು :
- ಅಧಿಕೃತ ಅಧಿಸೂಚನೆ & ಅರ್ಜಿ ನಮೂನೆ (PDF) : ಇಲ್ಲಿ ಕ್ಲಿಕ್ ಮಾಡಿ.
- ವಿಶ್ವವಿದ್ಯಾಲಯದ (DUAS) ಅಧಿಕೃತ ವೆಬ್‌ಸೈಟ್ : uasd.edu
ಟಿಪ್ಪಣಿ : ಉದ್ಯೋಗದ ಆಸಕ್ತರು ಸಮಯಮಿತಿಯಲ್ಲಿ ಅರ್ಜಿ ಸಲ್ಲಿಸಿ ಮತ್ತು ಸಂದರ್ಶನಕ್ಕೆ ತಯಾರಾಗಿರಿ.
Disclaimer : The above given information is available On online, candidates should check it properly before applying. This is for information only.
ವಯಕ್ತಿಕ ಕಾರಣ : Councilor ಪತ್ನಿಯನ್ನೇ ಕೊಚ್ಚಿ ಕೊಂದ ಪತಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ವಿಸಿಕೆ ಮಹಿಳಾ ಕೌನ್ಸಿಲರ್ (Councilor) ಓರ್ವರನ್ನು ಅವರ ಪತಿಯೇ ಕೊಚ್ಚಿ ಕೊಂದಿರುವ ಆಘಾತಕಾರಿ ಘಟನೆಯೊಂದು ತಮಿಳುನಾಡಿನ ಅವಡಿ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಪತಿಯಿಂದ ಹತ್ಯೆಗೊಳಗಾದ ವಿಸಿಕೆ ಮಹಿಳಾ ಕೌನ್ಸಿಲರ್ (Councilor) ಗೋಮತಿ ಎಂದು ಗುರುತಿಸಲಾಗಿದ್ದು, ಕೌನ್ಸಿಲರ್ (Councilor) ಗೋಮತಿ ಹತ್ಯೆಯ ಆರೋಪಿತ ಪತಿ ಸ್ಟೀಫನ್ ರಾಜ್ ಎಂದು ತಿಳಿದು ಬಂದಿದೆ. ಸ್ಟೀಫನ್ ರಾಜ್ ಚೆನ್ನೈ ಬಳಿಯ ತಿರುನಿರುವೂರು ಪ್ರದೇಶದವರಾಗಿದ್ದು, ಅವರು ವಿಸಿಕೆ ತಿರುನಿರುವೂರು ನಗರ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.
ಹತ್ಯೆಯದ ಅವರ ಪತ್ನಿ ಗೋಮತಿ ವಿಸಿಕೆ ಕೌನ್ಸಿಲರ್ (Councilor) ಮತ್ತು ತಿರುನಿರುವೂರು ಪುರಸಭೆಯ ತೆರಿಗೆ ವಿಧಿಸುವ ಅಧ್ಯಕ್ಷರಾಗಿದ್ದಾರೆ. ಸ್ಟೀಫನ್ ರಾಜ್ ಮತ್ತು ಗೋಮತಿ 10 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರೆಂದು ಮತ್ತು ಈಗ ಅವರಿಗೆ 4 ಗಂಡು ಮಕ್ಕಳಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : Food : ಈ ಆಹಾರ ಪದಾರ್ಥಗಳನ್ನು ಅತಿಯಾಗಿ ತಿನ್ನಲೇಬೇಡಿ.!
ಕೌನ್ಸಿಲರ್ (Councilor) ಗೋಮತಿ ಹಾಗೂ ಅವರ ಪತಿ ಸ್ಟೀಫನ್ ರಾಜ್ ನಡುವೆ ವಯಕ್ತಿಕ ಕಾರಣದಿಂದ ಜಗಳ ಪ್ರಾರಂಭವಾಗಿದೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ಗಾದ ನಡೆದಿದ್ದು, ಸಿಟ್ಟಿನ ಭರದಲ್ಲಿ ಕೌನ್ಸಿಲರ್ ಗೋಮತಿ ಮೇಲೆ ಅವರ ಪತಿ ಚಾಕುವಿನಿಂದ ಸರಣಿ ಹಲ್ಲೆ ನಡೆಸಿದ್ದಾರೆ.
ರಸ್ತೆ ಮಧ್ಯದಲ್ಲಿ ನಡೆದ ದಾಳಿಯಲ್ಲಿ ಕೌನ್ಸಿಲರ್ (Councilor) ಗೋಮತಿ ಅವರ ತಲೆ, ಮುಖ ಮತ್ತು ಕುತ್ತಿಗೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತೀವ್ರ ಗಾಯಗಳಾಗಿದ್ದು, ಗೋಮತಿ ರಕ್ತದ ಮಡುವಿನಲ್ಲಿ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ನಂತರ ಸ್ಟೀಫನ್ ರಾಜ್ ಹತ್ತಿರದ ತಿರುನಿನ್ರವೂರ್ ಪೊಲೀಸ್ ಠಾಣೆಗೆ ಹೋಗಿ ಶರಣಾದರು. ಘಟನಾ ಸ್ಥಳಕ್ಕೆ ಹೋದ ಪೊಲೀಸರು Councilor ಗೋಮತಿ ಅವರ ಶವವನ್ನು ಶವಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದರು. ಈ ಮಧ್ಯೆ, ಸ್ಟೀಫನ್ ಅವರನ್ನು ಬಂಧಿಸಿದ ಪೊಲೀಸರು ಕೊಲೆಯ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. (ಏಜೇನ್ಸಿಸ್)
5 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ : ನಾಲ್ವರಿಗೆ ಜೀವಾವಧಿ ಶಿಕ್ಷೆ.!
ಜನಸ್ಪಂದನ ನ್ಯೂಸ್, ಬೆಳಗಾವಿ : 2020ರಲ್ಲಿ ನಡೆದಿದ್ದ ಕೊಲೆ (Murder) ಪ್ರಕರಣಕ್ಕೆ ಸಂಬಂಧಿಸಿ ನಾಲ್ವರಿಗೆ ಜೀವಾವಧಿ ಶಿಕ್ಷೆ ಹಾಗೂ ರೂ.1.40 ಲಕ್ಷ ದಂಡ ವಿಧಿಸಿ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ನಿಪ್ಪಾಣಿ ತಾಲೂಕು ಹಂಚಿನಾಳ ಕೆ.ಎಸ್. ಗ್ರಾಮದಲ್ಲಿ ನಡೆದಿದ್ದ ಸಚಿನ ಭೋಪಳೆ (37) ಹತ್ಯೆ (Murder) ಪ್ರಕರಣದಲ್ಲಿ ಮೃತನ ಪತ್ನಿ ಅನಿತಾ ಭೋಪಳೆ (35), ಪತ್ನಿ ಸಹೋದರ ಕೃಷ್ಣಾತ ಘಾಟಗೆ (32), ವನಿತಾ ಚವ್ಹಾಣ (29), ಗಣೇಶ ರೇಡೆಕರ (21) ಶಿಕ್ಷೆಗೆ ಒಳಗಾಗಿದ್ದಾರೆ.
ಇದನ್ನು ಓದಿ : Forest guard Missing : 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಫಾರೆಸ್ಟ್ ಗಾರ್ಡ್.!
ಸಚಿನ ಭೋಪಳೆ ತನ್ನ ಪತ್ನಿ ಅನಿತಾ ಭೋಪಳ ಮೇಲೆ ಹಲ್ಲೆ ನಡೆಸಿ, ಹಿಂಸೆ ನೀಡುತ್ತಿದ್ದ. ಇದೇ ಕಾರಣಕ್ಕೆ ಅವನನ್ನು ಬಡಿಗೆಯಿಂದ ಹೊಡೆದು, ಕೈಕಾಲು ಕಟ್ಟಿ, ಕುತ್ತಿಗೆಗೆ ಉರುಳು ಹಾಕಿ ಕೊಲೆ (Murder) ಮಾಡಲಾಗಿತ್ತು.
ಜೆಸಿಬಿ ಮೂಲಕ ಗುಂಡಿ ತೋಡಿ, ಕೊಲೆ (Murder) ಮಾಡಿದ ನಂತರ ಶವ ಹೂಳಲು ಯತ್ನಿಸಿ ಸಾಕ್ಷ್ಯ ನಾಶ ಮಾಡಲು ಯತ್ನಿಸಲಾಗಿತ್ತು. ಜೆಸಿಬಿ ಚಾಲಕ ಸುನೀಲ ರಾಠೋಡ ಇದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದರು.
ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ (Murder) ಪ್ರಕರಣ ದಾಖಲಾಗಿತ್ತು. ಸಾಕ್ಷ್ಯಾಧಾರ ಪರಿಗಣಿಸಿ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ ಅವರು ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ವೈ.ಜಿ. ತುಂಗಳ ವಾದ ಮಂಡಿಸಿದ್ದರು.