ಜನಸ್ಪಂದನ ನ್ಯೂಸ್, ಬೆಂಗಳೂರು : ಸೋಶಿಯಲ್ ಮೀಡಿಯಾದಲ್ಲಿ ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವೊಂದು ತಮಾಷೆಯಾಗಿ ಕಂಡು ಬರುತ್ತವೆ. ಇನ್ನೂ ಕೆಲವು ಬೇಸರ ತರಿಸುತ್ತವೆ. ಕೆಲವೊಂದು ವಿಡಿಯೋ ನೋಡಿದ್ರೆ ಅಳು ಬರುತ್ತದೆ.
ಇದನ್ನು ಓದಿ : ತಂದೆ ಆಸ್ತಿ ಮಾರುವುದನ್ನು ಮಗ ತಡೆಯಲು ಸಾಧ್ಯವಿಲ್ಲ ; Supreme Court ಮಹತ್ವದ ತೀರ್ಪು.!
ಸದ್ಯ ಉತ್ತರ ಕರ್ನಾಟಕ ಭಾಗದ ತಮಾಷೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಡ್ರೈವರ್ ಬಸ್‌ನಿಂದ ಇಳಿದು ನಿಂತಿದ್ದಾರೆ. ಮಾರಪ್ಪನಹಳ್ಳಿಗೆ ಹೋಗುವ ಬಸ್ ಎಂದು ಬೋರ್ಡ್ ಕಾಣಿಸುತ್ತದೆ. ಎಲ್ಲಿಂದ ಮಾರಪ್ಪನಹಳ್ಳಿಗೆ ಹೋಗುತ್ತಿತ್ತು ಎನ್ನುವುದು ಸ್ಪಷ್ಟವಾಗಿ ಕಂಡುಬಂದಿಲ್ಲ.
ಸರ್ಕಾರಿ ಬಸ್‌ನ ಡ್ರೈವರ್ ಬಸ್‌ನಿಂದ ಇಳಿದು ಬಂದು ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸುತ್ತಿದ್ದಾರೆ. ಬಸ್‌ನ ಮುಂಭಾಗದ ತುಂಬಾ ಯುವಕರು ಕುಳಿತಿರುವುದು ಇದೆ. ಆದರೆ, ಬಸ್ ಡ್ರೈವರ್ ಏನು ಹೇಳುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ರೆಕಾರ್ಡ್ ಆಗಿಲ್ಲ.
ವಿಡಿಯೋವನ್ನು ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿ ನೋಡ್ರಿ ಎಂಥ ಪರಿಸ್ಥಿತಿ ಬಂದೈತಿ ಅಂದ್ರ. ಪಾಪ ಡ್ರೈವರ್ ಸೀಟ್ ಬಿಟ್ಟು ಕೊಟ್ಟಾನ. ಡ್ರೈವರ್ ಕುಂದ್ರಾಕ ಜಾಗ ಇಲ್ಲ. ಆ ಪರಿ ಮಂದಿ ಬಸ್‌ನಾಗ ಕುಂತಾರ, ಫುಲ್ಲು ಫ್ಯಾಕ್ ಆಗೈತಿ. ಡ್ರೈವರ್ ಇಳಿದು ಹೊರಗ ಬಂದಾನ ನೋಡ್ರಿ ಎಂದು ಹೇಳಿದ್ದಾರೆ.
ಇದನ್ನು ಓದಿ : Health : ಬೆಳಿಗ್ಗೆ ಅಂಗೈ ಉಜ್ಜಿ ಕಣ್ಣಿಗೆ ಹಚ್ಚಿಕೊಳ್ಳುತ್ತೀರಾ? ಹಾಗಿದ್ರೆ ಈ ಸುದ್ದಿ ಓದಿ.
ರವಿ – ಎಸ್‌ಆರ್ (ravi – sr) ಎನ್ನುವ ಖಾತೆಯಿಂದ ಈ ವಿಡಿಯೋ ಅಪ್ಲೋಡ್ ಆಗಿದ್ದು, ಭಾರೀ ವೈರಲ್ ಆಗಿದೆ.
ಇದೆಲ್ಲ ಫ್ರೀ ಬಸ್‌ನ ಎಫೆಕ್ಟ್, ಉಚಿತ ಬಸ್‌ನಿಂದ ಈ ರೀತಿ ಆಗಿದೆ. ಬಸ್ ತುಂಬಿ ತುಳುಕುತ್ತಿದೆ. ಕೊನೆಗೆ ಬಸ್ ಡ್ರೈವರ್ ಅನ್ನೇ ಹೊರಗೆ ದಬ್ಬಿದ್ದಾರೆ. ಈಗ ಬಸ್‌ನ ಯಾರು ಓಡಿಸ್ತಾರೆ, ಅದು ಹೆಂಗೆ ಮುಂದಕ್ಕೆ ಹೋಗುತ್ತೆ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.
View this post on Instagram