ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವು ಜನರಿಗೆ ದೇಹದ ತೂಕ ನಿಜಕ್ಕೂ ಒಂದು ರೀತಿಯ ಶಾಪ ಎಂದು ಹೇಳಬಹುದು. ಬಿಡುವಿಲ್ಲದ ಕೆಲಸ ಮತ್ತು ಒತ್ತಡದ ಜೀವನದಿಂದ ಜಡ ಜೀವನಶೈಲಿ ವಿಧಾನದಿಂದ ದೇಹಕ್ಕೆ ವ್ಯಾಯಾಮ ಮತ್ತು ಕಸರತ್ತು ಸಿಗುವುದಿಲ್ಲ. ಜೊತೆಗೆ ಜಂಕ್ ಫುಡ್ ಸೇವನೆ ಬೇರೆ. ಇದರಲ್ಲಿ ದೇಹದ ತೂಕ ಹೆಚ್ಚಾಗುವುದು ಆಶ್ಚರ್ಯವೇನಲ್ಲ.
ಹೀಗಾಗಿ ಬೊಜ್ಜು ಇರುವವರು ತಮ್ಮ ಅಡುಗೆ ಮನೆಯಲ್ಲಿ ಕೆಲವು ಆಹಾರಗಳನ್ನ ಬಳಸುವುದರಿಂದ ತಮ್ಮ ಅಧಿಕ ತೂಕವನ್ನ ಕಡಿಮೆ ಮಾಡಿಕೊಳ್ಳಬಹುದು.
ಸ್ಥೂಲ ಕಾಯದ ಸಮಸ್ಯೆ ಇರುವವರು ಮಲಗುವ ಮುನ್ನ ನೀರಿನಲ್ಲಿ ಈ ಕಾಳುಗಳನ್ನು ಕುದಿಸಿ ಕುಡಿದರೆ ಒಂದೇ ವಾರದಲ್ಲಿ ತೂಕ ಕಡಿಮೆಯಾಗುತ್ತದೆ ಎಂದು ಹೇಳಿಕೊಳ್ಳುತ್ತಾರೆ.
ಇದನ್ನು ಓದಿ : ಡ್ಯಾನ್ಸ್ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಪೊಲೀಸ್ ಕಾನ್ಸ್‌ಟೇಬಲ್ ಸಾವು ; ವಿಡಿಯೋ Viral.!
ಓಂಕಾಳನ್ನು ಆಹಾರದ ರುಚಿಯನ್ನು ಇಮ್ಮಡಿಗೊಳಿಸಲು ಮಾತ್ರ ಬಳಸುವುದಿಲ್ಲ, ಬದಲಾಗಿ ಅದು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಕೂಡ ಗುಣಮಾಡುತ್ತದೆ. ಚಳಿಗಾಲದಲ್ಲಿ ಇದರ ಬಳಕೆ ಹೆಚ್ಚು ಸೂಕ್ತವಾಗಿದೆ.
ಓಂಕಾಳು ನೀರು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತದೆ. ಕ್ಯಾಲೊರಿಗಳನ್ನ ಸುಡುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಬಿಸಿ ನೀರಿನಲ್ಲಿ ಓಂಕಾಳು ಕುದಿಸುವುದು ತುಂಬಾ ಪ್ರಯೋಜನಕಾರಿ. ಇದು ಹೊಟ್ಟೆಯನ್ನ ಶುದ್ಧೀಕರಿಸುವುದು ಮಾತ್ರವಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳನ್ನ ಗುಣಪಡಿಸಲು ಸಹಾಯ ಮಾಡುತ್ತದೆ.
ಇದನ್ನು ಓದಿ : ನಾಗರ ಹಾವನ್ನು ಪ್ರೀತಿಯಿಂದ ಮುದ್ದಿಸಲು ಬಂದ ಎಮ್ಮೆ ; ಮುಂದೆನಾಯ್ತು.? ಈ ವಿಡಿಯೋ ನೋಡಿ.!
ಕುದಿಸಿದ ಓಂಕಾಳು ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಆಹಾರ ಬೇಗ ಜೀರ್ಣವಾಗುತ್ತದೆ.
ದೇಹವು ನಿರ್ವಿಶೀಕರಣಗೊಂಡಾಗ ಚರ್ಮವು ಹೊಳೆಯುತ್ತದೆ. ಇದು ಮೊಡವೆಗಳು ಮತ್ತು ದದ್ದುಗಳನ್ನು ಕಡಿಮೆ ಮಾಡುವ ಮೂಲಕ ಚರ್ಮವನ್ನ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ದೇಹವು ನಿರ್ವಿಷಗೊಳಿಸುತ್ತದೆ. ನೀರು ತ್ಯಾಜ್ಯವನ್ನು ಹೊರಹಾಕುತ್ತದೆ.
ಇದನ್ನು ಓದಿ : Police ಪರೀಕ್ಷೆ ಬರೆಯಲು ಹೋದ ಪತಿ : ಬಾಯ್ ಫ್ರೆಂಡ್ ನನ್ನು ಮನೆಗೆ ಕರೆದ ಪತ್ನಿ; ಮುಂದೆನಾಯ್ತು ಗೊತ್ತಾ.?
ಇದು ನಿಮ್ಮ ನಿದ್ರೆಗೆ ಭಂಗ ತರುವುದಿಲ್ಲ. ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಇದು ಉತ್ತಮ ಮನೆಮದ್ದು ಎಂದು ಹೇಳಲಾಗುತ್ತದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.