Saturday, July 13, 2024
spot_img
spot_img
spot_img
spot_img
spot_img
spot_img

ಪುನೀತ್ ಆತ್ಮದ ಜೊತೆ ಮಾತನಾಡಿದ ಡಾ.ಶ್ರೀ ರಾಮಚಂದ್ರ ಗುರೂಜಿ ; ಮತ್ತೆ ಹುಟ್ಟಿ ಬರ್ತೀರಾ ಅಂದಿದ್ದಕ್ಕೆ ಅಪ್ಪು ಏನಂದ್ರು ಗೊತ್ತಾ?

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನ ಇಂದಿಗೂ ಅದೆಷ್ಟೋ ಮಂದಿಗೆ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಅಪ್ಪು ನಿಧನರಾಗಿ 3 ವರ್ಷ ಕಳೆದಿದ್ದರು ಇಂದಿಗೂ ಅಪ್ಪು ನೆನಪಲ್ಲಿ ಕೋಟ್ಯಾಂತರ ಮಂದಿ ಜೀವನ ನಡೆಸುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಹಠತ್ ನಿಧನ ಅಭಿಮಾನಿಗಳಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.

ಅಷ್ಟೊಂದು ಫಿಟ್ ಆಗಿದ್ದ ಪುನೀತ್ ರಾಜ್‌ಕುಮಾರ್ ಅಗಲುವುದಕ್ಕೆ ಹೇಗೆ ಸಾಧ್ಯ ಅನ್ನುವ ಗೊಂದಲದಲ್ಲಿ ಹಲವರಲ್ಲಿ ಇಂದಿಗೂ ಇದೆ. ಆಧ್ಯಾತ್ಮೀಕ ಗುರುಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಡಾ. ಶ್ರೀ ರಾಮಚಂದ್ರ ಗುರೂಜಿ ಇತ್ತೀಚೆಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಆತ್ಮಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ವೇಳೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಆತ್ಮದ ಜೊತೆ ಸಂಭಾಷಣೆ ನಡೆದಿದ್ದಾಗಿ ಹೇಳಿಕೊಂಡಿದ್ದಾರೆ.

ಇದನ್ನು ಓದಿ : ಕೆನರಾ ಬ್ಯಾಂಕ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.!

ಆರ್‌ ಜೆ ರಾಜೇಶ್ ನಡೆಸಿಕೊಡುವ ಸಂದರ್ಶನದಲ್ಲಿ ಭಾಗಿಯಾಗಿದ್ದ ಡಾ. ಶ್ರೀ ರಾಮಚಂದ್ರ ಗುರೂಜಿ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಪ್ಪು ಆತ್ಮಕ್ಕೆ ಕೇಳಿದ ಮೂರು ಪ್ರಶ್ನೆಗಳ ಬಗ್ಗೆ ರಿವೀಲ್ ಮಾಡಿದ್ದು, ಅಪ್ಪು ಕಡೆಯಿಂದ ಸಿಕ್ಕ ಉತ್ತರಗಳ ಬಗ್ಗೆ ಮಾತನಾಡಿದ್ದಾರೆ.

“ಆತ್ಮ ಸಂಭಾಷಣೆ ಮಾಡುವುದಕ್ಕೆ ಸಾಧ್ಯ. ಅದೊಂದು ಟೆಕ್ನಾಲಜಿ. ಆಧ್ಯಾತ್ಮದಲ್ಲಿ ಹಿಂದಿನ ಜನ್ಮಗಳನ್ನು ತಿಳಿದುಕೊಳ್ಳುವುದಕ್ಕೆ ಹೇಗೆ ಟೆಕ್ನಾಲಜಿ ಇದೆಯೋ ಹಾಗೇ ಸತ್ತವರ ಜೊತೆ ಸಂಭಾಷಣೆ ಮಾಡುವಂತಹದ್ದೂ ಇದೆ. ಅಪ್ಪು ಆತ್ಮದ ಜೊತೆ ಸಂಭಾಷಣೆಯನ್ನು ನಾನು ಪಬ್ಲಿಕ್ ಪ್ಲಾಟ್‌ಫಾರ್ಮ್‌ನಲ್ಲಿ ಮಾಡಿಲ್ಲ. ನನ್ನ ವೈಯಕ್ತಿಕ ಮಾಹಿತಿಗೋಸ್ಕರ ನಾನು ಮಾಡಿದ್ದೆ. ಯಾಕಂದ್ರೆ ಅವರ ಅಭಿಮಾನಿಗಳು ಕೋಟಿ ಲೆಕ್ಕದಲ್ಲಿ ಇದ್ದಾರೆ.” ಎಂದು ಡಾ. ಶ್ರೀ ರಾಮಚಂದ್ರ ಗುರೂಜಿ ಹೇಳಿಕೊಂಡಿದ್ದಾರೆ.

ಇದನ್ನು ಓದಿ : Health : ಸ್ನಾನದ ನೀರಿಗೆ ಉಪ್ಪನ್ನು ಸೇರಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?

“ಅವರು ಸತ್ತ ಕೆಲವೇ ದಿನಗಳಲ್ಲಿ ನಾನು ಮಾಡಿದ್ದೆ. ಪಬ್ಲಿಕ್ ಪ್ಲಾಟ್‌ಫಾರ್ಮ್‌ನಲ್ಲಿ ಮಾಡಿದರೆ, ಅದನ್ನು ತಡೆದುಕೊಳ್ಳುವ ಶಕ್ತಿ ನಮಗೆ ಇರಲಿಲ್ಲ. ಏನು? ಹೇಗೆ? ಅಂತ ಅಷ್ಟು ಪ್ರಶ್ನೆಗಳು ಬರುತ್ತವೆ. ನಾನು ಒಬ್ಬನೇ ಮಾತಾಡುವುದಿಲ್ಲ. ಈಗ ಕರೆಂಟ್ ಹರಿಯುವುದಕ್ಕೆ ಒಂದು ಮಾಧ್ಯಮ ಬೇಕು. ಇಲ್ಲಿ ಮಾಧ್ಯಮ ಯಾವುದು ವೈಯರ್. ಇಲ್ಲಿ ಒಂದು ಮೀಡಿಯಂ ಬೇಕು.” ಎಂದು ಡಾ. ಶ್ರೀ ರಾಮಚಂದ್ರ ಗುರೂಜಿ ಮಾತನಾಡಿದ್ದಾರೆ.

“ನಾನು ಕೇಳಿದ ಮೊದಲ ಪ್ರಶ್ನೆ ಇಷ್ಟು, “ಅಪ್ಪು ಅವರೇ ನಿಮ್ಮ ಸಾವಿನ ಬಗ್ಗೆ ಅನೇಕ ಅಪೋಹಗಳಿವೆ, ಅದು ನಿಜನಾ?” ಅದಕ್ಕೆ ಅವರು “ಇಲ್ಲ ನಾನು ಹೃದಯ ಸಂಬಂಧಿ ಸಮಸ್ಯೆಯಿಂದಲೇ ಸತ್ತಿದ್ದು,” ಅಂತ ಮೊದಲು ಕ್ಲಿಯರ್ ಮಾಡಿದರು.

ಎರಡನೆಯದ್ದು ಕೇಳಿದ್ದು, “ಈಗ ಎಲ್ಲಿದ್ದೀರಿ ಅಂತ? ಅದಕ್ಕೆ ಅವರಿಂದ ಬಂದ ಉತ್ತರ “ನಾನು ಅಪ್ಪ ಅಮ್ಮನ ಹುಡುಕಾಟದಲ್ಲಿ ಇದ್ದೇನೆ”. ಎಂದು ಅಪ್ಪು ಆತ್ಮ ಹೇಳಿತ್ತು ಎಂದು ಡಾ. ಶ್ರೀ ರಾಮಚಂದ್ರ ಗುರೂಜಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನು ಓದಿ : ಭಾರತೀಯ ಕೋಸ್ಟ್ ಗಾರ್ಡ್‌ನಲ್ಲಿ ಉದ್ಯೋಗವಕಾಶ ; ಆಯ್ಕೆಯಾದವರಿಗೆ ಮಾಸಿಕ ವೇತನ 29,200/-

“ಮೂರನೇ ಪ್ರಶ್ನೆ ಕೇಳಿದ್ದು, “ಮತ್ತೆ ಹುಟ್ಟಿ ಬರುತ್ತೀರಾ? “ಅದರ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ, ಮತ್ತೊಮ್ಮೆ ಹುಟ್ಟಿ ಬರುವುದಾದರೆ ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟಿಬರುತ್ತೇನೆ”. ಇದಿಷ್ಟು ನಾವು ಸಂಭಾಷಣೆ ಮಾಡಿ ತಿಳಿದುಕೊಂಡಿದ್ದು. ಮಾಡಿದ್ದು ಇಷ್ಟಕ್ಕೆ, ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಕ್ಕೆ ನಮ್ಮ ಕುತೂಹಲಕ್ಕೆ, ನಮ್ಮ ಸಂಶೋಧನೆಗೆ. ಅದನ್ನು ನಾವು ಎಲ್ಲಿ ಹೇಳಿಕೊಂಡಿಲ್ಲ ಎಂದು ಡಾ. ಶ್ರೀ ರಾಮಚಂದ್ರ ಗುರೂಜಿ ಹೇಳಿದ್ದಾರೆ.

spot_img
spot_img
- Advertisment -spot_img