ಜನಸ್ಪಂದನ ನ್ಯೂಸ್, ಡೆಸ್ಕ್ : ಪಿಟ್ ಬುಲ್ ನಾಯಿಯೊಂದು ಹಾವನ್ನು ಕಚ್ಚಿ ಕೊಲ್ಲುವ ಮೂಲಕ ಮಗುವನ್ನು ರಕ್ಷಿಸಿರುವ ಘಟನೆ ಉತ್ತರಪ್ರದೇಶದ ಜಾನ್ಸಿಯ ಶಿವ ಗಣೇಶ್ ಕಾಲೋನಿಯಲ್ಲಿ ನಡೆದಿದೆ ರುವುದಾಗಿ ವರದಿ ತಿಳಿಸಿದೆ.
ಇನ್ನೂ ಘಟನೆಯ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನು ಓದಿ : Health : ಈ ಎಲೆಯನ್ನು ಮೂಸಿದರೆ ಸಾಕು; ಕ್ಷಣದಲ್ಲೇ ಕೆಮ್ಮು, ನೆಗಡಿ ಗುಣವಾಗುತ್ತದೆ.!
ಮನೆಯ ತೋಟಕ್ಕೆ ಹಾವು ನುಗ್ಗಿದ್ದು, ಮನೆಗೆಲಸದವರ ಮಕ್ಕಳು ಆಟವಾಡುತ್ತಿದ್ದರು. ಹಾವನ್ನು ನೋಡಿದ ಮಕ್ಕಳು ಕಿರುಚಲು ಪ್ರಾರಂಭಿಸಿದ್ದಾರೆ. ಇದನ್ನು ಕಂಡ ಪಿಟ್ ಬುಲ್ ನಾಯಿ ಹಾವಿನ ಮೇಲೆ ದಾಳಿ ನಡೆಸಿ ಮಕ್ಕಳನ್ನು ರಕ್ಷಿಸಿದೆ.
ಪಿಟ್ ಬುಲ್ ನಾಯಿ ಬಾಯಿಯಲ್ಲಿ ಕಾಳಿಂಗ ಸರ್ಪವನ್ನು ಬಿಗಿಯಾಗಿ ಹಿಡಿದುಕೊಂಡು ಪದೇ ಪದೇ ನೆಲಕ್ಕೆ ಬಡಿದು ಕೊಂದಿದೆ. ನಾಯಿ ಹಾವಿನ ಜತೆಗಿನ ಹೋರಾಟವನ್ನು ಸುಮಾರು ಐದು ನಿಮಿಷಗಳ ಕಾಲ ಮುಂದುವರೆಸಿ ಕೊನೆಗೆ ಅದನ್ನು ಕೊಂದಿದೆ.
ನಾಯಿಯನ್ನು ಸಾಕಿದ ಮಾಲೀಕ ಪಂಜಾಬ್ ಸಿಂಗ್ ಪ್ರಕಾರ, ಈ ನಾಯಿ ಹಾವು ಕೊಂದು ಜೀವ ಉಳಿಸಿರುವುದು ಇದೇ ಮೊದಲಲ್ಲ. ಇಲ್ಲಿಯವರೆಗೆ, ಜೆನ್ನಿ ಸುಮಾರು ಎಂಟರಿಂದ ಹತ್ತು ಹಾವುಗಳನ್ನು ಕೊಂದು ಮನುಷ್ಯರನ್ನು ಕಾಪಾಡಿದೆ.
ಇದನ್ನು ಓದಿ : ತಂದೆ ಆಸ್ತಿ ಮಾರುವುದನ್ನು ಮಗ ತಡೆಯಲು ಸಾಧ್ಯವಿಲ್ಲ ; Supreme Court ಮಹತ್ವದ ತೀರ್ಪು.!
ನಾನು ಮನೆಯಲ್ಲಿ ಇರಲಿಲ್ಲ. ಆದರೆ ನನ್ನ ಮಗ ಮತ್ತು ಕೆಲಸದವರ ಮಕ್ಕಳು ಇದ್ದಿದ್ದರು. ನಮ್ಮ ಮನೆಯ ಸಮೀಪ ಗದ್ದೆಗಳು ಇರುವುದರಿಂದ ಹಲವಾರು ಹಾವುಗಳು ಮಳೆಗಾಲದ ಸಂದರ್ಭದಲ್ಲಿ ನಮ್ಮ ಮನೆ ಗಾರ್ಡ್ ನಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಜೆನ್ನಿ 8-10 ಹಾವನ್ನು ಕೊಂದಿರುವುದಾಗಿ ಸಿಂಗ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
झांसी से एक हैरान करदेने वाला एक वीडियो सामने आया है.. जहां पिटबुल ने जहरीले सांप से बच्चों की जान बचाई.. सांप को दांतों से चबाकर मार डाला..शिवगणेश बिहार कॉलोनी के मकान में घुसा था सांप..#Jhansi #PitBull pic.twitter.com/n31fdyG6bU
— Vinit Tyagi(Journalist) (@tyagivinit7) September 24, 2024