Saturday, July 13, 2024
spot_img
spot_img
spot_img
spot_img
spot_img
spot_img

ಮತ್ತೇ ದರ್ಶನ್‌ನ್ನ ಮೂರನೇ ಬಾರಿ ಪೊಲೀಸ್ ಕಸ್ಟಡಿಗೆ ಪಡೆದಿದ್ಯಾಕೆ ಗೊತ್ತಾ.?..ಎಕ್ಸ್ ಕ್ಲೂಸಿವ್ ಮಾಹಿತಿ ಇಲ್ಲಿದೆ.!

spot_img

ಜನಸ್ಪಂದನ ನ್ಯೂಸ್‌, ಬೆಂಗಳೂರು : ನಟ ದರ್ಶನ್ ಆ್ಯಂಡ್ ಗ್ಯಾಂಗ್‌ನಿಂದ ಚಿತ್ರದುರ್ಗದ ರೇಣುಕಾಚಾರ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ನಿನ್ನೆಗೆ ಅಂತ್ಯವಾಗಿದೆ. ಆದರೂ ಪೊಲೀಸ್ ಕಸ್ಟಡಿಯಲ್ಲೇ ಇರುವ ಆರೋಪಿ ನಟ ದರ್ಶನ್​ ಇನ್ನೂ ಎರಡು ದಿನಗಳ ಕಾಲ ಕಸ್ಟಡಿ ಮುಂದುವರೆಯಲಿದೆ.

ನಿನ್ನೆ (ದಿ.20) ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಪೊಲೀಸರು ನಾಲ್ಕು ದಿನಗಳ ಕಾಲ ಕೆಲವರನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ಕೋರ್ಟ್ ಆದೇಶ ಹೊರಡಿಸಿದೆ. Health : ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಉಪಯೋಗಿಸ್ತೀರಾ.?

ಅಷ್ಟಕ್ಕೂ ದರ್ಶನ್ ನ ಮೂರನೇ ಬಾರಿ ಕಸ್ಟಡಿಗೆ ಪಡೆದಿದ್ಯಾಕೆ ಗೊತ್ತಾ..? ಯಾವೆಲ್ಲಾ ಕಾರಣ ಹೇಳಿ ದರ್ಶನ್ ನ ಮತ್ತೆ ಕಸ್ಟಡಿಗೆ ಪಡೆದಿದ್ದು..? ರಿಮ್ಯಾಂಡ್ ಅಪ್ಲಿಕೇಶನ್ ನಲ್ಲಿರೋ ಎಕ್ಸ್ ಕ್ಲೂಸಿವ್ ಮಾಹಿತಿ ಇಲ್ಲಿದೆ ನೋಡಿ.

16ಅಂಶಗಳನ್ನ ಉಲ್ಲೇಖಿಸಿ ದರ್ಶನ್ ಸೇರಿ ನಾಲ್ವರನ್ನ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಹಾಗಾದ್ರೆ ರಿಮ್ಯಾಂಡ್ ಅಪ್ಲಿಕೇಶನ್‌ನಲ್ಲಿ ಏನೆಲ್ಲಾ ಅಂಶಗಳು..?

  1. ದರ್ಶನ್ ಸೇರಿ, ಎ9, ಎ10 ಮತ್ತು ಎ14 ಆರೋಪಿಗಳು ಪ್ರಕರಣದಲ್ಲಿ ತನಿಖೆಗೆ ಸರಿಯಾಗಿ ಸ್ಪಂದಿಸ್ತಿಲ್ಲ. ಕೇಸ್‌ಗೆ ಸಂಬಂಧಿಸಿದಂತೆ ವಿಚಾರಗಳನ್ನ ಮರೆ ಮಾಚುತ್ತಿದ್ದು ಈ ವಿಚಾರಗಳನ್ನ ಬಾಯಿ ಬಿಡಿಸಬೇಕಾಗಿದೆ.
  1. ನಿನ್ನೆ ದರ್ಶನ್ ಮನೆಯಲ್ಲಿ ಮತ್ತೆ 37,40,000/- ರೂಗಳ ನಗದು ಹಣವನ್ನು ವಶಕ್ಕೆ ಪಡೆದಿದ್ದು, ದರ್ಶನ್ ತನ್ನ ಹೆಂಡತಿಗೆ ನೀಡಿದ್ದ ರೂ 3,00,000/- ಹಣವನ್ನು ಕೂಡ ವಶ ಪಡಿಸಿಕೊಳ್ಳಲಾಗಿದೆ. ವಶಪಡೆದಿರೋ ಹಣದ ಮೂಲದ ಬಗ್ಗೆ ಎ2 ಆರೋಪಿ ದರ್ಶನ್‌ನಿಂದ ಮಾಹಿತಿ ಪಡೆದುಕೊಂಡು ದಾಖಲಾತಿ ಸಂಗ್ರಹಕ್ಕೆ.
  1. ದರ್ಶನ್ ಆರೋಪಿಯು ಕೃತ್ಯದ ನಂತರ ಹಲವಾರು ವ್ಯಕ್ತಿಗಳನ್ನು ಸಂಪರ್ಕಸಿದ್ದಾನೆ. ಇಲ್ಲಿ ಬೇರೆ ವ್ಯಕ್ತಿಗಳನ್ನ ಸಂಪರ್ಕಿಸಿರೋ ಉದ್ದೇಶ ಮತ್ತು ಕಾರಣದ ಬಗ್ಗೆ ದರ್ಶನ್ ವಿಚಾರಣೆ ಮಾಡ್ಬೇಕು. ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.! 
  1. ಪ್ರಕರಣದಲ್ಲಿ ಎ14 ಆರೋಪಿ ಪ್ರದೂಶ್ ಸಾಕ್ಷ್ಯನಾಶ ಮಾಡುವಲ್ಲಿ ಪ್ರಮುಖ ಪಾತ್ರ. ಪ್ರದೂಶ್ ಕೂಡ ತನಿಖೆಗೆ ಸರಿಯಾಗಿ ಸ್ಪಂದಿಸದೇ ವಿಚಾರಗಳನ್ನು ಮರೆ ಮಾಚುತ್ತಿರೋದು ಬೆಳಕಿಗೆ ಬಂದಿದೆ. ಅಲ್ಲದೇ ಪ್ರದೋಶ್ ಮತ್ತೊಬ್ಬ ಆಸಾಮಿಯನ್ನು ಕೃತ್ಯದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ ಬಗ್ಗೆ ಮಾಹಿತಿ ಇದೆ. ಆದರೆ ಈ ಬಗ್ಗೆ ಆರೋಪಿ ತನಿಖೆಗೆ ಸಹಕರಿಸುತ್ತಿಲ್ಲ,.ಯಾವ ವ್ಯಕ್ತಿ ತನ್ನ ಜೊತೆಯಲ್ಲಿ ಬಂದಿದ್ದ, ವ್ಯಕ್ತಿಯ ಬಗ್ಗೆ ಪ್ರದೋಶ್ ಗೆ ಮಾತ್ರ ತಿಳಿದಿದ್ದು, ಪ್ರದೋಶ್ ನ ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಾಗಿರುತ್ತದೆ.
  1. ಎ9 ಆರೋಪಿಯು ಎಲೆಕ್ಟಿಕ್ ಚಾರ್ಜ್ ಟಾರ್ಚ್‌ನ್ನು ಎಲ್ಲಿ ಖರೀದಿ ಮಾಡಿದ್ದು ಎಂಬ ಮಾಹಿತಿ ಇಲ್ಲ, ಈ ಬಗ್ಗೆ ಸರಿಯಾಗಿ ತಿಳಿಸದೇ ವಿಚಾರಗಳನ್ನು ಮರೆ ಮಾಡುತ್ತಿದ್ದು ಆತನನ್ನು ವಿಚಾರಣೆಗೊಳಪಡಿಸಿ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ.
  1. ಪ್ರಕರಣದಲ್ಲಿನ ಎ9 ಆರೋಪಿಯು ಕೃತ್ಯ ನಡೆದ ಸ್ಥಳಕ್ಕೆ ಬೇರೆ ವ್ಯಕ್ತಿಗಳ ಜೊತೆಯಲ್ಲಿ ಬಂದು ಹೋದ ಬಗ್ಗೆ ಬಂದಿದ್ದ ಬಗ್ಗೆ ವಿಚಾರಣೆ ನಡೆಸಬೇಕಾಗಿರುತ್ತದೆ. ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ 975 ಹುದ್ದೆಗಳಿಗೆ ನೇಮಕಾತಿ.!
  2. ಪ್ರಕರಣದ ಎ10 ಆರೋಪಿ ಮೊಬೈಲ್ ಪೋನ್‌ನಲ್ಲಿ ಅತೀ ಮುಖ್ಯವಾದ ಸಾಕ್ಷ್ಯಾಧಾರ ದೊರೆತಿದ್ದು, ಅದನ್ನು ಕಳುಹಿಸಿದ್ದ ವ್ಯಕ್ತಿ ಯಾರೆಂಬ ಬಗ್ಗೆ ಎ10 ಆರೋಪಿಯ ಉಪಸ್ಥಿತಿಯಲ್ಲಿ ವಿಚಾರಣೆ ಮಾಡಬೇಕಾಗಿರುತ್ತದೆ.
  3. ಕೃತ್ಯ ನಡೆದಿದ್ದ ಸ್ಥಳದ ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಹಲವಾರು ವ್ಯಕ್ತಿಗಳು ಸಾಕ್ಷ್ಯ ನುಡಿಯದಂತೆ ಹಣದ ಆಮಿಷ ನೀಡುತ್ತಿರುವುದು ತಿಳಿದು ಬಂದಿದ್ದು, ಸದರಿ ಆಸಾಮಿಗಳು ಆರೋಪಿಗಳೊಂದಿಗೆ ಹೊಂದಿರುವ ಸಂಪರ್ಕದ ಬಗ್ಗೆ ವಿಚಾರಣೆ ನಡೆಸಬೇಕಾಗಿರುತ್ತದೆ.

ಪ್ರಕರಣದ ಎರಡನೇ ಆರೋಪಿ ದರ್ಶನ್ ನಿಂದ ಕೇಸ್ ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ. ಕೇಸ್ ಮುಚ್ಚಿ ಹಾಕಲು ಎ10 ಮತ್ತು ಎ13 ಆರೋಪಿಗಳ ಮುಖಾಂತರ ಎ16 ಆರೋಪಿಗೆ ರೂ 5,00,000/- ಹಣವನ್ನು ನೀಡಿದ್ದು ಬೆಳಕಿಗೆ ಬಂದಿದೆ. ಈ ಬಗ್ಗೆ ಎ16 ಆರೋಪಿಯು ತನ್ನ ಸ್ನೇಹಿತನಿಗೆ ನೀಡಿದ್ದಾಗಿ ತಿಳಿಸಿದ್ದು ಹಣ ಪಡೆದ ವ್ಯಕ್ರಿ ಪತ್ತೆ ಮಾಡಬೇಕು.

ಈ ಎಲ್ಲಾ ಅಂಶಗಳನ್ನ ಉಲ್ಲೇಖಿಸಿ ದರ್ಶನ್ ಸೇರಿ ನಾಲ್ವರನ್ನ ಕಸ್ಟಡಿಗೆ ಪೊಲೀಸರು ಪಡೆದಿದ್ದಾರೆ. (ಎಜೇನ್ಸಿಸ್)

spot_img
spot_img
- Advertisment -spot_img