ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ರಾತ್ರಿ ಒಂದೊಂದು ಬದಿ ತಿರುಗಿ ಮಲಗಿ ನಿದ್ರಿಸುವುದರಿಂದ ಒಂದೊಂದು ತರಹದ ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು.
ಆದರೆ ನಮ್ಮ ಹಿರಿಯರು ಅನುಸರಿಸಿ ಕೊಂಡು ಬಂದಿರುವ ಪದ್ಧತಿಯ ಪ್ರಕಾರ ಮಲಗುವ ಭಂಗಿ ಎಂದರೆ ಅದು ಎಡಗಡೆಗೆ ತಿರುಗಿ ಮಲಗುವುದು.
ಇದನ್ನು ಓದಿ : Health : ಹೊಕ್ಕಳಿಗೆ ಕೊಬ್ಬರಿ ಎಣ್ಣೆ ಹಾಕುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?
ಹಾಗಾದ್ರೆ ಎಡಗಡೆ ತಿರುಗಿಕೊಂಡು ಮಲಗಿ ನಿದ್ರಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು
ಗರ್ಭಿಣಿ ಮಹಿಳೆಯರಿಗೆ ಎಡಗಡೆ ತಿರುಗಿ ಮಲಗುವುದು ಉತ್ತಮ. ಏಕೆಂದರೆ ಭ್ರೂಣದ ಭಾಗಕ್ಕೆ ಮತ್ತು ಗರ್ಭಕೋಶಕ್ಕೆ ಉತ್ತಮವಾದ ರಕ್ತ ಸಂಚಾರ ಸಿಗುತ್ತದೆ ಎನ್ನುವ ಕಾರಣಕ್ಕೆ. ಗರ್ಭಿಣಿ ಮಹಿಳೆಯರು ಇದನ್ನು ಅನುಸರಿಸಿ ಗರ್ಭಪಾತವಾಗುವ ಸಾಧ್ಯತೆಯಿಂದ ತಪ್ಪಿಸಿಕೊಳ್ಳುವುದು.
ಯಾವುದೇ ಕಾರಣಕ್ಕೂ ಊಟ ಆದ ನಂತರದಲ್ಲಿ ನಾವು ಎಡಗಡೆಗೆ ತಿರುಗಿ ಮಲಗುವ ಅಭ್ಯಾಸ ಮಾಡಿಕೊಳ್ಳಬೇಕು. ಇದ ರಿಂದ ಹೊಟ್ಟೆಯ ದಿನ ಆಮ್ಲ ಎದೆಯ ಭಾಗಕ್ಕೆ ವಾಪಸ್ ಬರುವ ಸಾಧ್ಯತೆ ತಪ್ಪುತ್ತದೆ.
ಹೀಗೆ ಮಾಡಿ, ನಂತರ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ.
ಎಡಗಡೆ ತಿರುಗಿ ಮಲಗುವುದರಿಂದ ನಮ್ಮ ಹೃದಯದ ಕಾರ್ಯ ಚಟು ವಟಿಕೆ ಉತ್ತಮ ಗೊಳ್ಳುತ್ತದೆ. ರಕ್ತದ ಒತ್ತಡ ಕಡಿಮೆಯಾ ಗುತ್ತದೆ. ಹೃದ ಯದ ಮೇಲಿನ ಒತ್ತಡವು ಸಹ ಕಡಿಮೆ ಆಗುತ್ತದೆ. ಮೊದಲಿಗಿಂತ ಚೆನ್ನಾಗಿ ನಮ್ಮ ಹೃದಯ ರಕ್ತವನ್ನು ಪಂಪ್ ಮಾಡುತ್ತದೆ.
ಇದನ್ನು ಓದಿ : ಕರ್ನಾಟಕ ಪಶುಸಂಗೋಪನೆ & ಮೀನುಗಾರಿಕೆ ಇಲಾಖೆಯಿಂದ 400 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಎಡಗಡೆಗೆ ತಿರುಗಿ ಮಲಗುವುದರಿಂದ ನಮ್ಮ ಕಿಡ್ನಿಗಳಿಗೆ ರಕ್ತ ಸಂಚಾರ ಚೆನ್ನಾಗಿ ನಡೆಯುತ್ತದೆ ಮತ್ತು ಕಿಡ್ನಿಗಳು ತಮ್ಮ ಕಾರ್ಯ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯ ವಾಗುತ್ತದೆ.
ನಾವು ಎಡಗಡೆ ತಿರುಗಿಕೊಂಡು ಮಲಗಿದರೆ ನಾವು ಸೇವಿಸಿದ ಆಹಾರ ನಮ್ಮ ಜೀರ್ಣಾಂಗ ವ್ಯವಸ್ಥೆಯ ಪ್ರಕ್ರಿಯೆಗೆ ಸಾಕಷ್ಟು ಸಹಕಾರ ಕೊಡುತ್ತದೆ ಮತ್ತು ನಾವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ ಎಂದು ಹೇಳಲಾಗುತ್ತದೆ. ವೈಜ್ಞಾನಿ ಕವಾಗಿ ಸಹ ಇದು ಸಾಬೀತಾಗಿದೆ.
ಯಾವುದೇ ಔಷಧಿ ಇಲ್ಲದೆ ಹೀಗೆ ಬಂದ ಕುತ್ತಿಗೆ ನೋವು ಮತ್ತು ಬೆನ್ನು ನೋವನ್ನು ಸುಲಭವಾಗಿ ನಿವಾರಿಸಿಕೊಳ್ಳ ಬಹುದು. ಒಂದು ವಾರದ ತನಕ ಎಡಗಡೆಗೆ ತಿರುಗಿ ಮಲಗುವ ಅಭ್ಯಾಸ ನಿಮ್ಮದಾದರೆ ಸಾಕು. ನೋವು ಕ್ರಮೇಣವಾಗಿ ಮಾಯವಾಗುತ್ತದೆ.
ನಗರ ಪ್ರದೇಶಗಳಲ್ಲಿ ವಾಸ ಮಾಡುವವರು ಮತ್ತು ಧೂಮಪಾನ ಅಭ್ಯಾಸ ಇರುವವರಿಗೆ ಉಸಿರಾಟದ ತೊಂದರೆ ಯಾವುದೇ ಸಮಯದಲ್ಲಿ ಎದುರಾಗಬಹುದು. ಜೊತೆಗೆ ಉಬ್ಬಸ ಬರಬಹುದು. ಆದರೆ ನಮ್ಮ ಶ್ವಾಸಕೋಶದ ಈ ಸಮಸ್ಯೆಯನ್ನು ನಾವು ರಾತ್ರಿಯಲ್ಲಿ ಎಡಗಡೆಗೆ ತಿರುಗಿ ಮಲಗಿ ಸರಿಪಡಿಸಿಕೊಳ್ಳಬಹುದು.
ಇದನ್ನು ಓದಿ : Special news : ಇಲ್ಲಿ ಮದುವೆಗೂ ಮುಂಚೆಯೇ ತಾಯಿ ಆಗ್ತಾರೆ ಹೆಣ್ಣು ಮಕ್ಕಳು ; ಭಾರತದ ಈ ಜನಾಂಗದಲ್ಲಿದೆ ವಿಚಿತ್ರ ಸಂಪ್ರದಾಯ.!
ಇನ್ನೂ ರಾತ್ರಿ ಮಲಗುವ ರೀತಿಗೂ ಚರ್ಮದ ಆರೋಗ್ಯಕ್ಕೂ ಸಂಬಂಧವಿದೆ ಎಂದು ತಜ್ಞರು ಹೇಳುತ್ತಾರೆ. ಮಲಗುವ ಭಂಗಿ ಸರಿಯಾಗಿಲ್ಲದಿದ್ದರೆ ಚರ್ಮದ ಗ್ರಂಥಿಗಳಿಗೆ ಆಮ್ಲಜನಕ ಸರಿಯಾಗಿ ಸಿಗುವುದಿಲ್ಲ.