Saturday, November 9, 2024
spot_imgspot_img
spot_img
spot_img
spot_img
spot_img
spot_img

ತುಂಬೆ ಗಿಡದಿಂದ ಎಷ್ಟೊಂದು ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.?

WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮನೆಯ ಹಿತ್ತಲಿನಲ್ಲಿ ತನ್ನ ಪಾಡಿಗೆ ಹೂ ಬಿಟ್ಟು ಬೀಜವಾಗಿ ಉದುರಿ ಮತ್ತೆ ಹೂ ಬಿಡುವ ಗಿಡ ಯಾವುದೆಂದರೆ ಅದು ತುಂಬೆ ಗಿಡ. ಈ ತುಂಬೆ ಗಿಡದ ತುಂಬೆಲ್ಲಾ ಆರೋಗ್ಯ ಪ್ರಯೋಜನಗಳಿವೆ.

ಈ ಗಿಡದ ಕಾಂಡಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ನಂತರ ಒಂದು ಬಟ್ಟೆಯನ್ನು ತೆಗೆದುಕೊಂಡು ಕುದಿಸಿ ಇಳಿಸಿಕೊಂಡ ನೀರಿನಲ್ಲಿ ಅದ್ದಿ ನೋವು ಇರುವ ಜಾಗಕ್ಕೆ ಒತ್ತಿಕೊಳ್ಳಬೇಕು. ಇದರಿಂದ ನೋವು ನಿವಾರಣೆಯಾಗಿ ಆರಾಮ ಎನಿಸುತ್ತದೆ.

ಇದನ್ನು ಓದಿ : ಭಾರತೀಯ ಅಂಚೆ Payments ಬ್ಯಾಂಕ್​​ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಉದರದ ಸಮಸ್ಯೆಗಳನ್ನೂ ಪರಿಹರಿಸುತ್ತದೆ. ಇದರಿಂದ ಪಚನಕ್ರಿಯೆಯನ್ನು ಸುಧಾರಿಸಲು ತುಂಬೆ ಗಿಡದ ಬಳಕೆ ಸುಲಭದ ಮಾರ್ಗವಾಗಿದೆ.

ಋತುಚಕ್ರದ ವೇಳೆ ಅತಿಯಾಗಿ ರಕ್ತಸ್ರಾವವಾಗುತ್ತಿದ್ದರೆ ಸ್ವಲ್ಪ ತುಂಬೆ ರಸದ ಜೊತೆ ಸ್ವಲ್ಪ ಎಳ್ಳೆಣ್ಣೆ ಹಾಗೂ ನಿಂಬೆರಸವನ್ನು ಸೇರಿಸಿ ಕುಡಿಯುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ.

ಇದನ್ನು ಓದಿ : Mobile ಬಿಸಿಯಾಗಿ ಏಕಾಏಕಿ ಸ್ಪೋಟಗೊಳ್ಳಲು ಕಾರಣಗಳು ಇಲ್ಲಿವೆ.!

ಇದನ್ನು ಫೇಸ್‌ಪ್ಯಾಕ್‌ ರೀತಿಯಲ್ಲಿ ಬಳಸಿದರೆ ಡಾರ್ಕ್‌ ಸರ್ಕಲ್ಸ್‌ ಕೂಡ ಕಡಿಮೆಯಾಗುತ್ತದೆ.

ತಲೆನೋವು ಬಹುಬೇಗನೆ ವಾಸಿಯಾಗಲು ಈ ಗಿಡದ ಬೇರು, ಕಾಂಡ, ಎಲೆಯನ್ನು ಸೇರಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಅದರ ಹಬೆಯನ್ನು ತೆಗೆದುಕೊಳ್ಳಬೇಕು.

ತುಂಬೆ ಗಿಡದ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ನೀರು ಅಥವಾ ಹಾಲನ್ನು ಹಾಕಿ ಮುಖವನ್ನು ತೊಳೆಯಬೇಕು. ಇದರಿಂದ ಮುಖಕ್ಕೆ ತಂಪಿನ ಅನುಭವವಾಗುತ್ತದೆ.

ತುಂಬೆ ಗಿಡವನ್ನು ಚೆನ್ನಾಗಿ ತೊಳೆದು ಬಿಸಿ ನೀರಿನಲ್ಲಿ ಹಾಕಿ ಕುದಿಸಿ ನಂತರ ಚಿಟಿಕೆ ಉಪ್ಪು ಸೇರಿಸಿ ಕುಡಿದರೆ ಜೀರ್ಣಶಕ್ತಿ ಉತ್ತಮವಾಗುತ್ತದೆ.

ಇದನ್ನು ಓದಿ : ಬಸ್ಸಿನಲ್ಲಿ ಸೀಟ್ ವಿಚಾರವಾಗಿ ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಮಹಿಳೆಯರು.!

ತುಂಬೆ ಗಿಡದ ಎಲೆಯ ರಸವನ್ನು ತೆಗೆದು ಕರಿಮೆಣಸಿಕಾಳು ಅಥವಾ ಪುಡಿ ಸೇರಿಸಿ ಕುದಿಸಿ ಕಷಾಯ ಮಾಡಿಕೊಂಡು ಕುಡಿದರೆ ದೇಹದಲ್ಲಿ ಜ್ವರದ ತಾಪಮಾನ ನಿಯಂತ್ರಣಕ್ಕೆ ಬರುತ್ತದೆ.

ತುಂಬೆ ಹೂ ಹಾಗೂ ಎಲೆಯನ್ನು ಜನವರಿ ಅದರ ರಸಕ್ಕೆ 2 ಹನಿ ಜೇನುತುಪ್ಪ ಬೆರೆಸಿ ಕುಡಿಸಿದರೆ ಮಕ್ಕಳಿಗೆ ಹೊಟ್ಟೆ ನೋವು ಕಾಡುವುದಿಲ್ಲ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img