Sunday, December 8, 2024
HomeInternationalHealth : ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸವಿದೆಯೇ? ಈ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ.!
spot_img

Health : ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸವಿದೆಯೇ? ಈ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಆರೋಗ್ಯ : ಕೆಲ ಜನರಿಗೆ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸವಿರುತ್ತದೆ.

ನಿಮಗೂ ಈ ಅಭ್ಯಾಸವಿದೆಯೇ.? ಹಾಗಿದ್ರೆ ಈ ಅಭ್ಯಾಸವನ್ನು ಇಂದೇ ಬಿಟ್ಟು ಬಿಡಿ. ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ (Sitting cross legged) ಕೆಲವು ಅನಾನುಕೂಲತೆಗಳಿವೆ.

ಇದನ್ನು ಓದಿ : ಆಫೀಸರ್ ಹೆಸರಿನಲ್ಲಿ ರಿಯಲ್ ಪೊಲೀಸ್ ಅಧಿಕಾರಿಗೆ ವಂಚಿಸಲು ಯತ್ನಿಸಿದ ಫೇಕ್ ಪೊಲೀಸ್; ವಿಡಿಯೋ ಸಖತ್ Viral.!

ಬಹಳ ಸಮಯದವರೆಗೆ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ ಮೇಲಿನ ಕಾಲಿನ ಭಾರ (Leg weight) ಕೆಳಗಿನ ಕಾಲಿನ ನರಗಳನ್ನು ಒತ್ತುವುದು (Pressing the nerves). ಇದರಿಂದಾಗಿ ಈ ನರಗಳ ಮೂಲಕ ಹರಿಯಬೇಕಾಗಿರುವ ರಕ್ತವನ್ನು ಹೆಚ್ಚಿನ ಒತ್ತಡದಲ್ಲಿ ದೂಡಿಕೊಡಬೇಕಾಗುತ್ತದೆ. ಪರಿಣಾಮ ತನ್ಮೂಲಕ ದೇಹದ ರಕ್ತದೊತ್ತಡ ಹೆಚ್ಚಾಗುತ್ತದೆ.

ಈ ರೀತಿ ಕುಳಿತುಕೊಳ್ಳುವುದರಿಂದ ಪೆಲ್ವಿಕ್​ ಮೂಳೆಗಳ ಜೋಡಣೆ ಮತ್ತು ಸ್ನಾಯುವಿನ ಉದ್ದದಲ್ಲಿ ದೀರ್ಘಕಾಲೀನ ಬದಲಾವಣೆಗಳಿಗೆ (Long term changes) ಕಾರಣವಾಗಬಹುದು.

ಸ್ನಾಯುಗಳು ಮತ್ತು ಪೃಷ್ಠದ ಮೇಲೆ ದೀರ್ಘಕಾಲದ ಭಾರದಿಂದಾಗಿ ಹೊಟ್ಟೆಯು ಅದರ ಹೊಂದಾಣಿಕೆಯ ಗುಣಗಳನ್ನು ಕಳೆದುಕೊಂಡು ದುರ್ಬಲವಾಗುತ್ತದೆ (weak). ಇದರಿಂದ ದೇಹದ ಭಾಗಗಳು ಅಸಹಜವಾಗಿ ರೂಪುಗೊಳ್ಳುವ ಅಪಾಯವಿದೆ.

ಇದನ್ನು ಓದಿ : BPNL : ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಕಿಬ್ಬೊಟ್ಟೆಯ ಸ್ನಾಯುಗಳು (Abdominal muscles) ಮತ್ತು ಕೆಳ ಬೆನ್ನಿನಲ್ಲಿಯೂ ಬದಲಾವಣೆಗಳು ಆಗಬಹುದು.

ನರಗಳು ಕ್ರಮೇಣ ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಅಲ್ಲದೇ ಮೆದುಳು ಬಳ್ಳಿಯಿಂದ ಬರುವ ಸೂಚನೆಗಳನ್ನು ಪೂರ್ಣವಾಗಿ ಪಡೆಯಲು ಅಸಮರ್ಥವಾಗಿ ಚಲನೆ ಸಾಧ್ಯವಾಗದೇ ಇರಬಹುದು.

ದೇಹದ ಕೆಳಭಾಗಕ್ಕೆ ಹರಿಯಬೇಕಾಗಿದ್ದ ರಕ್ತ ಮುಂದೆ ಹೋಗದೇ ನಿಂತಾಗ ಇದನ್ನು ಆಧರಿಸಿದ ಇತರ ವ್ಯವಸ್ಥೆಗಳೂ ರಕ್ತ ಪರಿಚಲನೆಯ ಮೇಲೆ ಋಣಾತ್ಮಕ ಪರಿಣಾಮ (Negative effect) ಬೀರುತ್ತವೆ.

ಇದನ್ನು ಓದಿ : ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ ಹಾಗೂ ದೈಹಿಕ ಶಿಕ್ಷಕ Suspend.!

ಪುರುಷರು ಬಹಳ ಸಮಯದವರೆಗೆ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಂಡರೆ ಅದರಿಂದ ವೃಷಣಗಳ ಮೇಲೆ ಒತ್ತಡ ಬೀಳುವುದು. ಇದರಿಂದ ಪುರುಷತ್ವ (masculinity) ನಷ್ಟವಾಗುವ ಅಪಾಯವಿದೆ ಎನ್ನಲಾಗಿದೆ.

Disclaimer : ಅಂತರ್ಜಾಲದಲ್ಲಿ (Internet) ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

 

ಹಿಂದಿನ ಸುದ್ದಿ ಓದಿ : ರಾತ್ರಿ 10 ಗಂಟೆಯ ನಂತರ ದೇಹವು ಈ ಸೂಚನೆಯನ್ನು ನೀಡುತ್ತಿದೆಯೇ? ಇದು stroke ಆಗಿರಬಹುದು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚೆಗೆ ಯುವ ಪೀಳಿಗೆಯವರಿಗೆ ಹೃದಯಾಘಾತ (heart attack), ಪಾರ್ಶ್ವವಾಯು, ಕ್ಯಾನ್ಸರ್‌ನಂತಹ ಸಮಸ್ಯೆಗಳು ಕಾಡಿಸುತ್ತೀವೆ.

ಅದರಲ್ಲಿಯೂ ಪಾರ್ಶ್ವವಾಯು (stroke) ಹಿಂದೆ ಹಿರಿಯರಿಗೆ ಕಾಡುವ ಕಾಯಿಲೆ ಎಂಬ ನಂಬಿಕೆ ಇತ್ತು. ಆದರೆ ಚಿಕ್ಕ ವಯಸ್ಸಿನಲ್ಲಿಯೇ ಸ್ಟ್ರೋಕ್ ಸಮಸ್ಯೆ ಹೆಚ್ಚಾಗುತ್ತಿರುವುದು ಕೂಡ ಆತಂಕ ಹೆಚ್ಚಲು ಕಾರಣವಾಗಿದೆ. ಇದಕ್ಕೆ ಹಲವಾರು ರೀತಿಯ ಕಾರಣಗಳಿರಬಹುದು.

ಇದನ್ನು ಓದಿ : Belagavi : ಬೆಳಗಾವಿಯಲ್ಲಿ ಹೀನ ಕೃತ್ಯ ; ಸಾರ್ವಜನಿಕವಾಗಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ.!

ಸಾಮಾನ್ಯವಾಗಿ ನಮ್ಮ ಮೆದುಳಿಗೆ ರಕ್ತ ಸಂಚಾರದಲ್ಲಿ (blood circulation to brain) ಏರುಪೇರಾದಾಗ ಸ್ಟ್ರೋಕ್ ಸಮಸ್ಯೆ ಬರುತ್ತದೆ. ಮೆದುಳಿಗೆ ರಕ್ತ ಸಂಚಾರ ಏರುಪೇರು ಉಂಟಾಗಲು ಹಲವು ಕಾರಣಗಳಿವೆ ಎಂಬುದು ಕೂಡ ಸಾಬೀತಾಗಿದೆ. ಕೊಲೆಸ್ಟ್ರಾಲ್ ಹೆಚ್ಚಾಗಿರುವುದು, ಮೆದುಳಿಗೆ ರಕ್ತ ಸಂಚಾರಕ್ಕೆ ಕಾರಣವಾದ ರಕ್ತನಾಳವು ಅಶಕ್ತ ಆಗಿರುವುದು. ಹೀಗೆ ಇವು ಪ್ರಮುಖ ಕಾರಣಗಳಾಗಿವೆ.

ಆದರೆ ಪಾರ್ಶ್ವವಾಯು ಬರುವ ಮುಂಚೆ ನಮ್ಮ ದೇಹವು ಹಲವು ರೀತಿಯ ಸೂಚನೆಗಳನ್ನು ನೀಡುತ್ತದೆ. ಅದರಲ್ಲಿಯೂ ರಾತ್ರಿ ಮಲಗಿದ ವೇಳೆ ಈ ರೀತಿಯ ಸೂಚನೆಗಳನ್ನು ನಿಮ್ಮ ದೇಹ ನೀಡುತ್ತಿದೆ ಎಂದಾದರೆ ಖಂಡಿತವಾಗಿಯೂ ನೀವು ಅದನ್ನು ನಿರ್ಲಕ್ಷಿಸಬಾರದು (neglected).

ಇದನ್ನು ಓದಿ : Health : ಯಾವುದೇ ಕೆಲಸ ಮಾಡದಿದ್ದರೂ ದಣಿವಾಗುತ್ತಿದೆಯೇ? ನಿಮಗೆ ಈ ಆರೋಗ್ಯ ಸಮಸ್ಯೆ ಇರಬಹುದು.!

ಹೆಚ್ಚಿನ ಜನರು ರಾತ್ರಿ ಮಲಗಿದ್ದಾಗಲೇ ಸ್ಟ್ರೋಕ್‌ಗೆ ಒಳಗಾಗುತ್ತಾರೆ ಎಂದು ಸಂಶೋಧನೆಗಳು ಹೇಳುತ್ತವೆ. ರಾತ್ರಿ 10 ಗಂಟೆಯ ಬಳಿಕ ದೇಹದಲ್ಲಿ ಯಾವ ಬದಲಾವಣೆಗಳು ಪಾರ್ಶ್ವವಾಯುವಿನ ಸೂಚನೆ ನೀಡುತ್ತವೆ ಅಂತ ಮುಂದೆ ಓದಿ.

* ರಾತ್ರಿ ವೇಳೆ ಏಕಾಏಕಿ (suddenly) ತಲೆನೋವು (headache) ಕಾಣಿಸಿಕೊಳ್ಳುವುದು. ಸ್ಟ್ರೋಕ್‌ಗೆ ಕಾರಣವಾಗುವ ತಲೆನೋವು ಸ್ವಲ್ಪ ಭಿನ್ನವಾಗಿರುತ್ತದೆ. ತಲೆ ಸಿಡಿಯುವಂತೆ ನೋವು ಉಂಟಾಗುವುದು, ಗಾಢ ನಿದ್ರೆಯಲ್ಲೂ ತಲೆ ನೋವು ಉಲ್ಬಣಗೊಳ್ಳುವುದು, ಒಮ್ಮೊಮ್ಮೆ ತಲೆನೋವಿನಿಂದ ನರಳುವ (suffering) ಪರಿಸ್ಥಿತಿ ಬರುವುದು.

ಇದನ್ನು ಓದಿ : ಅಪ್ರಾಪ್ತ ಪತ್ನಿ ಜೊತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಸಹ ಅತ್ಯಾಚಾರಕ್ಕೆ ಸಮ; Highcourt.!

* ರಾತ್ರಿ ವೇಳೆ ಮಲಗಿದ ಬಳಿಕ ಎಚ್ಚರವಾದಾಗ ಮಾತನಾಡಲು ನೀವು ಕಷ್ಟಪಡುತ್ತಿದ್ದರೆ ಅಥವಾ ಮಾತನಾಡುವಾಗ ತೊದಲುತ್ತಿದ್ದರೆ ಇದು ಕೂಡ ಸ್ಟ್ರೋಕ್‌ನ ಸೂಚನೆಯಾಗಿದೆ. ಅಂತಹ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.

* ದೇಹದ ಒಂದು ಭಾಗದಲ್ಲಿ ಹಠಾತ್ ಆಗಿ ಮರುಗಟ್ಟುವಂತೆ (recap) ಆಗುವುದು ಅಥವಾ ದೌರ್ಬಲ್ಯ ಉಂಟಾಗಬಹುದು.

ಇದನ್ನು  : ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವರದಾನವಾದ PM ವಿದ್ಯಾಲಕ್ಷ್ಮೀ ಯೋಜನೆ ; 10 ಲಕ್ಷದವರೆಗೆ ಸಾಲ.!

* ಪಾರ್ಶ್ವವಾಯುವಿನ ಮುನ್ಸೂಚನೆಗಳಲ್ಲಿ ಹಠಾತ್ ತಲೆ ತಿರುಗುವಿಕೆ (vertigo) ಒಂದು. ಬಹಳಷ್ಟು ಜನರಲ್ಲಿ ಬೇರೆ ಬೇರೆ ಕಾರಣಕ್ಕೆ ಕಾಣಿಸಿಕೊಳ್ಳಬಹುದು. ಆದರೆ ಎಚ್ಚರಿಕೆ ವಹಿಸುವುದು ಒಳ್ಳೆಯದು.

* ರಾತ್ರಿ ಮಲಗಿದ ಸಮಯದಲ್ಲಿ ದೃಷ್ಟಿ ಸಮಸ್ಯೆ ಎದುರಾಗುವುದು ಕೂಡ ಪಾರ್ಶ್ವವಾಯುವಿನ ಸೂಚನೆಯಾಗಿದೆ. ದೃಷ್ಟಿ ಮಸುಕಾಗುವಂತೆ (Blurred vision) ಆಗುವುದು, ಒಂದು ವಸ್ತು ಎರಡು ಮೂರು ರೀತಿ ಕಾಣಿಸುವುದು.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments