ಜನಸ್ಪಂದನ ನ್ಯೂಸ್, ಡೆಸ್ಕ್ : ಬೊರುಗುಲು, ಮುರುಮುರುಲು, ಮುರಿಲು, ಕಡಲೆಪುರಿ, ಪಫ್ಡ್ ರೈಸ್ ಎಂದು ಕರೆಯಲ್ಪಡುವ ಮಂಡಕ್ಕಿಯನ್ನು ಎಲ್ಲ ವಯಸ್ಸಿನವರು ಇಷ್ಟಪಟ್ಟು ತಿನ್ನುತ್ತಾರೆ.
ಇದು ಮಕ್ಕಳು ಮತ್ತು ದೊಡ್ಡವರು ಎಲ್ಲರಿಗೂ ಇಷ್ಟವಾಗುವ ಮುಖ್ಯ ಆಹಾರಗಳಲ್ಲಿ ಒಂದಾಗಿದೆ. ಪುರಿ ಬಹಳ ಹಗುರವಾಗಿದ್ದು, ತಿಂದರೂ ತಿಂದಿಲ್ಲವೇನೋ ಎನ್ನಿಸುವ ಆಹಾರ. ಇದರಲ್ಲಿ ಕೊಬ್ಬಿನ ಅಂಶ, ಕ್ಯಾಲೋರಿ ಬಹಳ ಕಡಿಮೆ.
ಇದನ್ನು ಓದಿ : Video : ಹೋಟೆಲ್‌ನಲ್ಲಿ ಇಬ್ಬರು ಯುವತಿಯರ ಜೊತೆ ಪತಿಯ ಸರಸ; ರೆಡ್ ಹ್ಯಾಂಡ್ಆಗಿ ಹಿಡಿದ ಪತ್ನಿ.!
ಇನ್ನೂ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಹಿಡಿದು ರಕ್ತದೊತ್ತಡವನ್ನು ಸಹ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
* ಮಂಡಕ್ಕಿಯಲ್ಲಿ ಕಾಬೋಹೈಡ್ರೇಟ್ಸ್ ಹೆಚ್ಚಾಗಿದೆ. ಆದ್ದರಿಂದ ಸ್ವಲ್ಪವೇ ತಿಂದರೂ ದೇಹವು ಹಗುರವಾಗಿರುವುದೇ ಅಲ್ಲದೆ ಹೆಚ್ಚು ಶಕ್ತಿ ಸಿಗುವಂತೆ ಮಾಡುತ್ತದೆ.
* ಒಳ್ಳೆಯ ಜೀರ್ಣಕಾರಿಯಾಗಿರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ.
* ಮಂಡಕ್ಕಿ ಮೆದುಳಿಗೆ ಚುರುಕುತನವನ್ನು ಕೊಡುತ್ತದೆ.
* ನರ ಮಂಡಲವನ್ನು ಉತ್ತೇಜನಗೊಳಿಸುತ್ತದೆ.
* ಮಂಡಕ್ಕಿಯಲ್ಲಿ ನಾರಿನಂಶ ಹೆಚ್ಚಾಗಿದೆ. ಹಾಗಾಗಿಯೇ ಜೀರ್ಣಿಸಿಕೊಳ್ಳಲು ತುಂಬ ಸುಲಭ.
ಇದನ್ನು ಓದಿ : Health : ಶೇಂಗಾವನ್ನು ನೆನಸಿಟ್ಟು ತಿನ್ನವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು.?
* ಕರುಳಿನ ಕ್ರಿಯೆಯನ್ನು ಚುರುಕುಗೊಳಿಸುತ್ತದೆ.
* ಪುರಿಯಲ್ಲಿ ವಿಟಮಿನ್ “ಡಿ’, ವಿಟಮಿನ್ “ಬಿ’ ಕಾಂಪ್ಲೆಕ್ಸ್ ನಲ್ಲಿರುವ ರೈಬೋ ಪ್ಲೇವಿನ್, ಥಯಾಮಿನ್ ಹೆಚ್ಚಾಗಿದೆ.
* ಕ್ಯಾಲ್ಸಿಯಂ, ಐರನ್ ಕೂಡ ಹೆಚ್ಚಾಗಿ ಇದೆ. ಹಾಗಾಗಿ ಇವು ಮೂಳೆ, ಹಲ್ಲುಗಳನ್ನು ಬಲಶಾಲಿಯಾಗಿರುವಂತೆ ಮಾಡುತ್ತದೆ. ಇದು ಆಸ್ಟಿಯೋಪೋರೋಸಿಸ್ಸನ್ನು ನಿವಾರಿಸುತ್ತದೆ.
* ಇದು ಚರ್ಮಕ್ಕೆ ಒಳ್ಳೆಯದು. ಚರ್ಮವು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.
* ಮಂಡಕ್ಕಿ ಬುದ್ಧಿಶಕ್ತಿಯನ್ನು, ಕಲಿಯುವ ಶಕ್ತಿಯನ್ನೂ ಬೆಳೆಸುತ್ತದೆ.
* ಮಂಡಕ್ಕಿಯಲ್ಲಿರುವ ಶಕ್ತಿಯುತವಾದ ಆ್ಯಂಟಿ ಆಕ್ಸಿಡೆಂಟ್ಸ್‌ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕು ಬಾರದಂತೆ ತಡೆಯುತ್ತದೆ.
* ಕ್ಯಾನ್ಸರ್‌ಗೆ ಕಾರಣವಾಗುವ ಪ್ರೀರ್ಯಾಡಿಕಲ್ಲನ್ನು ನಿವಾರಿಸುತ್ತದೆ.
* ಇದರಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಿಗೆ ಇರುವುದರಿಂದ ಡಯಾಬಿಟಿಸ್ ಇರುವವರು ಇದನ್ನು ಮಿತವಾಗಿ ತಿನ್ನಬೇಕು.
ಇದನ್ನು ಓದಿ : Health : ಖಾಲಿ ಹೊಟ್ಟೆಯಲ್ಲಿ ಚಹಾದೊಂದಿಗೆ ಬ್ರೆಡ್ ತಿಂತೀರಾ.?
* ತೂಕ ಇಳಿಸಬೇಕು ಅಂತ ಅನ್ಕೊಂಡಿರುವವರಿಗೆ ಈ ಪುರಿಯಿಂದ ಮಾಡಿದ ಸ್ನ್ಯಾಕ್ಸ್ ಒಳ್ಳೆಯದು.
ಹೀಗಾಗಿ ಮಂಡಕ್ಕಿ ತಿನ್ನುವುದು ಒಳ್ಳೆಯದು.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.