Friday, September 13, 2024
spot_img
spot_img
spot_img
spot_img
spot_img
spot_img
spot_img

ಟೆಟ್ರಾ ಪ್ಯಾಕ್​ನಲ್ಲಿರುವ ಜ್ಯೂಸ್ ಕುಡಿತೀರಾ.? ಹಾಗಿದ್ರೆ ನೀವು ಈ Video ನೋಡಲೆಬೇಕು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಈಗ ಮಾರ್ಕೆಟ್ ಗಳಲ್ಲಿ ಎಲ್ಲ ರೀತಿಯ ಹಣ್ಣಿನ ಜ್ಯೂಸ್​ಗಳು ಲಭ್ಯವಾಗುವಂತೆ ಮಾವಿನಹಣ್ಣಿನ ಜ್ಯೂಸ್​ ಕೂಡ ಸಿಗುತ್ತದೆ. ನೀವು ಎಷ್ಟು ಚೆನ್ನಾಗಿದೆ,​​ ಎಷ್ಟು ಟೇಸ್ಟಿಯಾಗಿದೆ ಅಂತ ಬಾಟಲ್​ ಅಥವಾ ಟೆಟ್ರಾಪ್ಯಾಕ್​ನಲ್ಲಿರುವ ಮಾವಿನ ಹಣ್ಣಿನ ಜ್ಯೂಸ್​ ಕುಡಿತೀರಾ.?

ಇದನ್ನು ಓದಿ : ಡ್ಯಾನ್ಸ್ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಪೊಲೀಸ್ ಕಾನ್ಸ್‌ಟೇಬಲ್ ಸಾವು ; ವಿಡಿಯೋ Viral.!

ಹಾಗಾದ್ರೆ ಮಾವಿನ ಹಣ್ಣಿನ ಜ್ಯೂಸ್​​ ಹೇಗೆ ತಯಾರಿಸುತ್ತಾರೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಏಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾವಿನಹಣ್ಣಿನ ಜ್ಯೂಸ್ ಹೇಗೆ ತಯಾರಿಸ್ತಾರೆ ಎಂಬುದರ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್​ ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿರುವ ದೃಶ್ಯ :
ವಿಡಿಯೋದಲ್ಲಿ ಮೆಷಿನ್​ನಲ್ಲಿರುವ ಹಳದಿ ಬಣ್ಣದ ನೀರಿಗೆ ಕೆಂಪು ಬಣ್ಣ ಸೇರಿಸಿ, ಅದಕ್ಕೆ ಬಿಳಿಯ ಬಣ್ಣದ ವಸ್ತುಗಳನ್ನು ಸೇರಿಸಲಾಗುತ್ತದೆ. ಆ ವಸ್ತುಗಳು ಏನೆಂದು ತಿಳಿಯುವುದಿಲ್ಲ. ಬಳಿಕ ಅದನ್ನು ಗಟ್ಟಿಯಾಗಿಸಲು ಬಿಳಿ ಬಣ್ಣದ ದ್ರವವನ್ನು ಸೇರಿಸುವುದನ್ನು ನೋಡಬಹುದು. ಇನ್ನೂ ಆ ಜಾಗ ಗಲೀಜಿಂದ ಕೂಡಿದೆ.

ಇದನ್ನು ಓದಿ : Health : ಕಾಲಿನಲ್ಲಿ ಈ ಲಕ್ಷಣ ಕಾಣಿಸಿಕೊಳ್ಳುತ್ತಿವೆಯೇ? ಇವು ಈ ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು.?

ಜ್ಯೂಸ್, ಮಾವಿನ ಹಣ್ಣಿನ ರೀತಿ ಟೇಸ್ಟಿಯಾಗಿರಲಿ ಅಂತ ಸಕ್ಕರೆಯೊಂದಿಗೆ ಯಾವುದೋ ವಸ್ತುವನ್ನು ಸೇರಿಸಿ ತಯಾರಿಸಲಾಗುತ್ತಿದೆ. ಅದು ಘನೀಕೃತವಾದ ಬಳಿಕ ಟೆಟ್ರಾ ಪ್ಯಾಕ್​ ಆಗಿ ಹೊರ ಬರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ. ಸದ್ಯ ನಾನು ದೇವರಿಗೆ ಧನ್ಯವಾದ ಹೇಳಬೇಕು. ಕೆಲವು ದಿನಗಳಿಂದ ಈ ರೀತಿಯ ಜ್ಯೂಸ್​ ಕುಡಿಯುವುದನ್ನು ಬಿಟ್ಟಿದ್ದೇನೆ, ಇದರಲ್ಲಿ ಮಾವಿನಹಣ್ಣು ಎಲ್ಲಿದೆ, ಮಾವು ಹೊರತುಪಡಿಸಿ ಬೇರೆಲ್ಲಾ ಇದೆ, ಸ್ಲೋ ಪಾಯ್ಸನ್​ ಇದು ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ಇದನ್ನು ಓದಿ : ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್​​ 30 ಕೊನೆಯ ದಿನಾಂಕ.!

ಸೆಲಿಬ್ರಿಟಿಗಳಿಂದ ನೀಡುವ ಜಾಹೀರಾತು ನೋಡಿ ಮಾವಿನಹಣ್ಣಿನ ರುಚಿಗೆ ಮನಸೋತು ಬಾಟಲ್​ ಅಥವಾ ಟೆಟ್ರಾ ಪ್ಯಾಕ್​ನಲ್ಲಿರುವ ಜ್ಯೂಸ್​ ಕುಡಿಯುತ್ತಿದ್ರೆ ಅಪಾಯ ತಪ್ಪಿದಲ್ಲ. ದಿನನಿತ್ಯ ವಿಷ ಸೇವಿಸುತ್ತಿದ್ದೀವಿ ಎಂದು ಅರ್ಥ.

 

View this post on Instagram

 

A post shared by YOUR BROWN ASMR (@yourbrownasmr)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img