ಜನಸ್ಪಂದನ ನ್ಯೂಸ್, ಡೆಸ್ಕ್ : ಈ ಡಿಜಿಟಲ್ ಯುಗದಲ್ಲಿ ಸೈಬರ್ ಕ್ರೈಮ್ ಸಂಖ್ಯೆ ಹೆಚ್ಚಾಗುತ್ತಿದೆ. ಕದೀಮರು ನಾನಾ ರೀತಿಯಲ್ಲಿ ಮೊಬೈಲ್ ಬಳಕೆದಾರರನ್ನು ನಂಬಿಸಿ ಮೋಸ ಮಾಡುತ್ತಿದ್ದಾರೆ. ಸೈಬರ್ ಕದೀಮರು ಕೆಲ ನಂಬರ್ ಮೂಲಕ ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ.
ಇದನ್ನು ಓದಿ : 4 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ; ದೃಶ್ಯಂ ಚಿತ್ರವನ್ನೇ ಮೀರಿಸುತ್ತೆ ಈ Case.!
ಜನರನ್ನು ಮೋಸಗೊಳಿಸಲು ಸ್ಕ್ಯಾಮರ್ ಗಳು ಹೊಸ ತಂತ್ರಗಳನ್ನು ರೂಪಿಸುತ್ತಲೇ ಇರುತ್ತಾರೆ. ಸ್ಪಾಮ್ ಕಾಲ್ ಸೇರಿದಂತೆ ಹಲವು ಕರೆಗಳನ್ನು ಟ್ರಾಯ್ ನಿರ್ಬಂಧಿಸುತ್ತದೆ. ಆದರೆ ಹೊಸ ವಿಧಾನದ ಮೂಲಕ ಮೋಸಗಾರರು ಗ್ರಾಹಕರನ್ನು ಮೋಸ ಮಾಡುತ್ತಿದ್ದಾರೆ.
ಹೀಗಾಗಿ ನಾವು ಎಚ್ಚರಿಕೆ ವಹಿಸಬೇಕಾಗುತ್ತದೆ. ಅಪ್ಪಿತಪ್ಪಿ ಕಾಲ್ ಸ್ವೀಕರಿಸಿದರೂ ಕೆಲ ಸೂಚನೆಗಳನ್ನು ಪಾಲಿಸಿದರೆ ವಂಚನೆಯಿಂದ ಪಾರಾಗಬಹುದು.
ಇದನ್ನು ಓದಿ : ಪ್ರಯಾಣಿಕರಿಂದ ಹಣ ಪಡೆದು ಮಹಿಳೆಯರ ಶೂನ್ಯ ಬೆಲೆಯ ಉಚಿತ ಟಿಕೆಟ್ ನೀಡಿದ ಬಸ್ ಕಂಡಕ್ಟರ್; ಮುಂದೆ.?
ಸ್ಕ್ಯಾಮರ್ ಗಳು ಪ್ರಸ್ತುತ ಮೋಸದ ಚಟುವಟಿಕೆಗಾಗಿ ಇಂಟರ್ನೆಟ್ ಆಧಾರಿತ VoIP ಕರೆಗಳನ್ನು ಬಳಕೆ ಮಾಡುತ್ತಿದ್ದಾರೆ. ನಿಮಗೆ +697 ಅಥವಾ +698 ರಿಂದ ಕರೆ ಮಾಡಿದರೆ, ಅದು ಖಂಡಿತವಾಗಿಯೂ ಸ್ಕ್ಯಾಮರ್ ಕರೆಯಾಗಿರುತ್ತದೆ.
ಅಕಸ್ಮಾತ್ ನೀವು ನಂಬರ್ ನಿಂದ ಬಂದ ಕಾಲ್ ನ್ನು ರಿಸೀವ್ ಮಾಡಿದ್ರೆ ನಿಮ್ಮ ವೈಯಕ್ತಿಕ ಮಾಹಿತಿ ಕೇಳಿದರೆ ಕೊಡಬೇಡಿ. ತಕ್ಷಣ ಪೋನ್ ಸ್ವೀಕರಿಸಿದರೆ ಕಟ್ ಮಾಡಿ ಅಥವಾ ಯಾವುದೇ ಉತ್ತರ ನೀಡಬೇಡಿ. ಹತ್ತಾರು ಸೋಗಿನಲ್ಲಿ ಇಂತಹ fraud ಕರೆಗಳು ಬರುತ್ತವೆ.
ಇದನ್ನು ಓದಿ : 16.50 ಲಕ್ಷ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ಆಗಿ ಲೋಕಾಯುಕ್ತ ಬಲೆಗೆ ಬಿದ್ದ BESCOM ಅಧಿಕಾರಿಗಳು.!
ಪೊಲೀಸ್, ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಹಲವು ರೂಪದಲ್ಲಿ ಕರೆ ಮಾಡಿ ಮೋಸಗಾರರು ಮೋಸ ಮಾಡುತ್ತಾರೆ. ವಂಚಕರು ಹೆಚ್ಚಾಗಿ ಬ್ಯಾಂಕ್ ಉದ್ಯೋಗಿಗಳಂತೆ ನಿಮಗೆ ಕಾಲ್ ಮಾಡ್ತಾರೆ.
ಹೀಗಾಗಿ ಅನಾಮಿಕ ಕಾಲ್ ರಿಸೀವ್ ಮಾಡಿ ಮಾತನಾಡುವಾಗ ಎಚ್ಚರ ವಹಿಸಬೇಕು. ನಿಮ್ಮನ್ನು ಈ ಸಂಕಷ್ಟದಿಂದ ಪಾರು ಮಾಡಲು ಬಂದ ಬ್ಯಾಂಕ್ ಉದ್ಯೋಗಿ, ಪೊಲೀಸ್ ಸೇರಿದಂತೆ ಹಲವು ರೂಪದಲ್ಲಿ ಈ ಕರೆಗಳು ಬರುತ್ತವೆ. ಕರೆಗಳು ಪದೇಪದೇ ಬರುತ್ತಿದ್ದರೆ ಕೇಂದ್ರ ಸರ್ಕಾರದ CHASCU ಪೋರ್ಟಲ್ ಗೆ ವರದಿ ಮಾಡಿ. ಆಬಳಿಕ ಸರ್ಕಾರದ ಏಜೆನ್ಸಿಗಳು ಕ್ರಮ ಕೈಗೊಳ್ಳುತ್ತಾರೆ.