Monday, October 7, 2024
spot_img
spot_img
spot_img
spot_img
spot_img
spot_img
spot_img

Health : ರಾತ್ರಿ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ಗಟ್ಟಿ ಮುಟ್ಟಾಗಿರಲು, ಉತ್ತಮ ಆಹಾರ ಸೇವಿಸುವುದು ಒಳ್ಳೆಯದು. ಕೆಲವು ಆರೋಗ್ಯಕರ ಆಹಾರಗಳು, ಸೂರ್ಯಾಸ್ತವಾದ ಮೇಲೆ ಆರೋಗ್ಯಕ್ಕೆ ಉತ್ತಮವಾಗಿರುವುದಿಲ್ಲ.

ಸೂರ್ಯನ ರಶ್ಮಿ ಇರುವ ವೇಳೆ ನಾವು ಕೆಲವು ಆಹಾರಗಳನ್ನು ಜೀರ್ಣಿಸಿಕೊಳ್ಳಬಹುದು. ಆದರೆ ಇನ್ನು ಕೆಲವು ಆಹಾರಗಳನ್ನು ನಾವು ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಅಂಥ ಆಹಾರಗಳನ್ನು ನಾವು ರಾತ್ರಿ ಹೊತ್ತು ಸೇವಿಸಬಾರದು. ಹಾಗಾದ್ರೆ ನಾವು ರಾತ್ರಿ ಊಟ ಮಾಡುವ ವೇಳೆ ಯಾವ ಆಹಾರ ಸೇವಿಸಬಾರದು ಅಂತ ತಿಳಿಯೋಣ.

* ಒಣ ಹಣ್ಣುಗಳಲ್ಲಿ ಅಧಿಕ ಪ್ರಮಾಣದ ಕಾರ್ಬೋಹೈಡ್ರೇಟ್ಸ್, ವಿಟಮಿನ್ ಗಳು, ಸಕ್ಕರೆ, ಖನಿಜಾಂಶ ಮತ್ತು ಎಲ್ಲಾ ಪೋಷಕಾಂಶಗಳು ಇವೆ. ಹಗಲು ಹೊತ್ತಲ್ಲಿ ಇದನ್ನು ತಿಂದರೆ ಆಗ ಅದು ತುಂಬಾ ಲಾಭಕಾರಿ. ಆದರೆ ರಾತ್ರಿ ಸೇವಿಸಿದರೆ ಆಗ ಇದು ಹೊಟ್ಟೆಯ ಕಿಣ್ವವು ಇದನ್ನು ವಿಘಟಿಸಲು ಸಾಧ್ಯವಾಗದು.

* ಕೊಬ್ಬಿನ ಆಹಾರಗಳ ಸೇವನೆ ಮಾಡಿದರೆ ಆಗ ತಡರಾತ್ರಿ ತನಕ ಜೀರ್ಣಕ್ರಿಯೆ ವ್ಯವಸ್ಥೆಯು ಕೆಲಸ ಮಾಡಬೇಕಾಗುತ್ತದೆ. ಇದರಿಂದ ನಿದ್ರೆಗೆ ತೊಂದರೆ ಆಗಬಹುದು. ಇದರಿಂದ ರಾತ್ರಿ ವೇಳೆ ಕೊಬ್ಬು ಇರುವ ಆಹಾರ ಸೇವಿಸಬಾರದು ಎಂದು ತಜ್ಞರು ಹೇಳಿರುವರು.

* ಪನೀರ್ ಪ್ರೋಟೀನ್‌ನ ಉತ್ತಮ ಮೂಲವಾಗಿದ್ದರೂ, ಈ ಮೇಲೋಗರಗಳು ಹೆಚ್ಚಿನ ಕೊಬ್ಬುಗಳು, ಕೆನೆ ಮತ್ತು ಮಸಾಲೆಗಳನ್ನು ಹೊಂದಿರುತ್ತವೆ. ಇದು ರಾತ್ರಿಯ ಊಟಕ್ಕೆ ತುಂಬಾ ಭಾರವಾಗಿರುತ್ತದೆ. ಇದು ಜೀರ್ಣಕ್ರಿಯೆ, ನಿದ್ರೆಯನ್ನು ಅಡ್ಡಿಪಡಿಸಬಹುದು. ಇದರ ಬದಲಿಗೆ ರಾತ್ರಿಯ ಊಟಕ್ಕೆ ಗ್ರಿಲ್ಡ್ ಅಥವಾ ಸ್ಟಿರ್-ಫ್ರೈಡ್ ಪನೀರ್‌ನಂತಹ ಹಗುರವಾದ ಪನೀರ್ ಭಕ್ಷ್ಯಗಳನ್ನು ಪ್ರಯತ್ನಿಸಿ.

* ಕೋಳಿ ಮಾಂಸದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಅಂಶವಿದ್ದು, ಇದು ಜೀರ್ಣವಾಗಲು ಅಧಿಕ ಸಮಯ ಬೇಕಾಗುತ್ತದೆ ಹಾಗೂ ಶಕ್ತಿಯು ವ್ಯಯವಾಗುವುದು. ರಾತ್ರಿ ಸಮಯದಲ್ಲಿ ಸೇವನೆ ಮಾಡಿದರೆ, ಆಗ ಇದು ಜೀರ್ಣಕ್ರಿಯೆಗೆ ತುಂಬಾ ಪರಿಣಾಮ ಬೀರುವುದು ಮತ್ತು ನಿದ್ರೆಗೆ ತೊಂದರೆ ಉಂಟು ಮಾಡಬಹುದು. ಇದನ್ನು ಸೇವಿಸಲೇಬೇಕಿದ್ದರೆ, ತುಂಬಾ ಕಡಿಮೆ ಪ್ರಮಾಣದಲ್ಲಿ ಸೇವಿಸಿರಿ.

* ದೇಹಕ್ಕೆ ತಂಪಾಗಿರುವ ಆಹಾರವನ್ನ ರಾತ್ರಿ ಹೊತ್ತು ಸೇವಿಸಬಾರದು. ಉದಾಹರಣೆಗೆ, ಬಾಳೆಹಣ್ಣು, ಮೊಸರು, ಕಿತ್ತಳೆ, ದ್ರಾಕ್ಷಿ, ಚಿಕ್ಕು, ಮಸ್ಕ್‌ಮೆಲನ್ ಹೀಗೆ ಇಂಥ ಹಣ್ಣುಗಳ ಸೇವನೆ ಮಾಡಬಾರದು. ಶರ್ಬತ್, ಜ್ಯೂಸ್, ಇವಲ್ಲೆವನ್ನೂ ರಾತ್ರಿ ಸೇವಿಸುವಂತಿಲ್ಲ.

* ಹುರಿದ ಆಹಾರಗಳಾದ ಸಮೋಸಾಗಳು, ಬಜ್ಜಿಯಂಥ ಆಹಾರಗಳಲ್ಲಿ ಅನಾರೋಗ್ಯಕರ ಕೊಬ್ಬುಗಳು ಮತ್ತು ಕ್ಯಾಲೊರಿಗಳಲ್ಲಿ ಅಧಿಕವಾಗಿರುತ್ತವೆ. ಇದು ರಾತ್ರಿಯ ಊಟಕ್ಕೆ ಸೂಕ್ತವಲ್ಲ. ರಾತ್ರಿಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸುವುದರಿಂದ ಎದೆಯುರಿ, ಅಜೀರ್ಣದ ಜೊತೆಗೆ ತೂಕವೂ ಹೆಚ್ಚಾಗಬಹುದು.

* ರಾತ್ರಿ ವೇಳೆ ಮೊಸರು ಸೇವಿಸಿದರೆ, ಆಗ ಇದು ಹಾನಿ ಉಂಟು ಮಾಡಬಹುದು. ರಾತ್ರಿ ವೇಳೆ ಸೇವಿಸುವ ಕಾರಣ ಕಫ ಜಮೆಯಾಗಬಹುದು ಮತ್ತು ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳಬಹುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img