ಜನಸ್ಪಂದನ ನ್ಯೂಸ್, ಡೆಸ್ಕ್ : ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯಲು BSNLಕಂಪನಿಯು ದೇಶದಲ್ಲಿ ತನ್ನ 4G ಸೇವೆಗಳನ್ನು ವೇಗವಾಗಿ ವಿಸ್ತರಿಸುತ್ತಿದೆ. ಮುಂದಿನ ವರ್ಷ 5G ಸೇವೆಗಳನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಹಾಗೆಯೇ, BSNL ತನ್ನ ಗ್ರಾಹಕರಿಗೆ 4G ಮತ್ತು 5G ಸಿಮ್ ಕಾರ್ಡ್‌ಗಳ ವಿತರಣೆಯನ್ನು ಈಗಾಗಲೇ ಪ್ರಾರಂಭಿಸಿದೆ.
ಇನ್ನೂ BSNL ಸಿಮ್ ಪಡೆಯಲು ಮಾರುಕಟ್ಟೆ, BSNL ಕಚೇರಿ ಅಥವಾ ಮನೆಯಲ್ಲಿ ಹೋಂ ಡೆಲಿವೆರಿ ಮೂಲಕ ಪಡೆಯಬಹುದು.
ಇದನ್ನು ಓದಿ : Health : ಊಟದ ಬಳಿಕ ಅಥವಾ ಊಟದ ಮಧ್ಯದಲ್ಲಿ ನೀರು ಕುಡಿತೀರಾ? ಹಾಗಿದ್ರೆ ಈ ಸುದ್ದಿ ಓದಿ.!
ಜುಲೈ 2024 ರಲ್ಲಿ ಆಂಧ್ರಪ್ರದೇಶದಲ್ಲಿ 2.17 ಲಕ್ಷ ಹೊಸ ಸಂಪರ್ಕಗಳನ್ನು ಸೇರಿಸುವ ಮೂಲಕ ಕಂಪನಿಯು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. ಹೊಸ ಸಂಪರ್ಕಗಳ ಹೆಚ್ಚಳದಿಂದ ರಾಜ್ಯದಲ್ಲಿ ಬಿಎಸ್‌ಎನ್‌ಎಲ್‌ನ ಒಟ್ಟು ಸಂಪರ್ಕಗಳ ಸಂಖ್ಯೆ 40 ಲಕ್ಷಕ್ಕೆ ತಲುಪಲಿದೆ.
BSNL ಗ್ರಾಹಕರು ತಮ್ಮ ಹೊಸ ಸಿಮ್ ಅನ್ನು ಆಕ್ಟಿವ್ ಮಾಡುವುದು ಕೂಡಾ ಬಹಳ ಸುಲಭ. ಹೊಸ BSNL ಗ್ರಾಹಕರಾಗಿದ್ದರೆ ಮತ್ತು ನಿಮ್ಮ BSNL ಸಿಮ್ ಅನ್ನು ಆಕ್ಟಿವ್ ಮಾಡುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.
ಇದನ್ನು ಓದಿ : ‘ಮನೇಲಿ ಯಾರು ಇಲ್ಲ ಬಾ’ ಅಂತ ಯುವಕನನ್ನು ಕರೆದ ಮಾಯಾಂಗನೆ ; ಮುಂದೆ.?
ಹಂತ 1: ನಿಮ್ಮ BSNL ಸಿಮ್ ಕಾರ್ಡ್ ಅನ್ನು ಮೊಬೈಲ್ ಫೋನ್‌ನಲ್ಲಿ ಹಾಕಿ ಫೋನ್ ಅನ್ನು ರಿಸ್ಟಾರ್ಟ್ ಮಾಡಬೇಕು.
ಹಂತ 2: ನೆಟ್‌ವರ್ಕ್ ಸಿಗ್ನಲ್‌ಗಾಗಿ ನಿರೀಕ್ಷಿಸಬೇಕಾಗುತ್ತದೆ.
ಹಂತ 3: ಫೋನ್ ಪರದೆಯ ಮೇಲೆ ನೆಟ್‌ವರ್ಕ್ ಸಿಗ್ನಲ್ ಕಾಣಿಸಿದಾಗ ಫೋನ್ ಅಪ್ಲಿಕೇಶನ್ ತೆರೆಯಬೇಕು.
ಹಂತ 4: ನಿಮ್ಮ ಫೋನ್‌ನಿಂದ 1507 ಸಂಖ್ಯೆಗೆ ಕರೆ ಮಾಡುವ ಮೂಲಕ ನಿಮ್ಮ ಗುರುತನ್ನು ಪರಿಶೀಲಿಸಬೇಕು.
ಹಂತ 5: ನಿಮ್ಮ ಭಾಷೆ, ಗುರುತು ಮತ್ತು ವಿಳಾಸದ ಬಗ್ಗೆ ನಿಮ್ಮನ್ನು ಕೇಳಲಾಗುತ್ತದೆ.
ಹಂತ 6: ಟೆಲಿ-ಪರಿಶೀಲನೆಗಾಗಿ ನೀಡಲಾದ ಸೂಚನೆಗಳನ್ನು ಅನುಸರಿಸಿ.
ಇದನ್ನು ಓದಿ : Video : ಮಕ್ಕಳಿಗೆ ಮೊಟ್ಟೆ ಕೊಟ್ಟು ವಾಪಸ್ ಕಿತ್ತುಕೊಂಡ ಅಂಗನವಾಡಿ ಸಿಬ್ಬಂದಿಗಳಿಬ್ಬರು ಸಸ್ಪೆಂಡ್.!
ಹಂತ 7: ಪ್ರಕ್ರಿಯೆಯು ಪೂರ್ಣಗೊಂಡ ನಂತರ, ನಿಮ್ಮ BSNL ಸಿಮ್ ಅನ್ನು ಆಕ್ಟಿವ್ ಮಾಡಲಾಗುತ್ತದೆ.
ಹಂತ 8: ನಿಮ್ಮ ಫೋನ್‌ಗೆ ನಿರ್ದಿಷ್ಟ ಇಂಟರ್ನೆಟ್ ಸೆಟ್ಟಿಂಗ್‌ಗಳನ್ನು ನೀಡಲಾಗುತ್ತದೆ.
ಹಂತ 9: ಈ ಸೆಟ್ಟಿಂಗ್‌ಗಳನ್ನು ಸೇವ್ ಮಾಡಿಕೊಳ್ಳಿ. ಇದರಿಂದ ನಿಮ್ಮ ಸಿಮ್ ಕಾರ್ಡ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆ.
ಹಂತ 10: ಈಗ ನೀವು ನಿಮ್ಮ ಸಿಮ್ ಕಾರ್ಡ್‌ನಿಂದ ಫೋನ್ ಮಾಡಬಹುದು ಇಂಟರ್ನೆಟ್ ಬಳಸಬಹುದು.
ಅನೇಕ ಟೆಲಿಕಾಂ ಕಂಪನಿಗಳು ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಹೆಚ್ಚಿಸಿದ ನಂತರ, ಜನರು ಸರ್ಕಾರಿ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL)ನತ್ತ ಮುಖ ಮಾಡಿದ್ದಾರೆ. ಏಕೆಂದರೆ, BSNLನ ರೀಚಾರ್ಜ್ ಯೋಜನೆಗಳು ಇನ್ನು ಕೂಡಾ ಅಗ್ಗವಾಗಿವೆ.