Saturday, July 13, 2024
spot_img
spot_img
spot_img
spot_img
spot_img
spot_img

Dangerous Reels : ಚಲಿಸುತ್ತಿರುವ ಬಸ್ಸಿನ ಕೆಳಗೆ ಮಲಗಿದ ಯುವಕ ; ಹುಚ್ಚಾಟದ ವಿಡಿಯೋ ವೈರಲ್.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇಂದಿನ ಯಾಂತ್ರಿಕ ಯುಗದಲ್ಲಿ ದಿಢೀರ್ ಖ್ಯಾತಿಯನ್ನು ಪಡೆಯಬೇಕೆಂದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್‌ಗಳನ್ನು ಪಡೆಯಲ್ಲೋ ಯುವ ಜನತೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಡೇಂಜರಸ್ ರೀಲ್ಸ್ ವಿಡಿಯೋ ಮಾಡುತ್ತಿದ್ದಾರೆ. ಅಷ್ಟೆ ಅಲ್ಲಾ ರೀಲ್ಸ್ ಹುಚ್ಚಿನಿಂದ ಪ್ರಾಣವನ್ನು ಕಳೆದುಕೊಂಡವರು ಹಲವರಿದ್ದಾರೆ.

ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ್ದು, ರಸ್ತೆ ಮಧ್ಯೆ ಚಲಿಸುತ್ತಿರುವ ಬಸ್ಸಿನ ಕೆಳಗೆ ಮಲಗಿ ರೀಲ್ಸ್ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಯುವಕನ ದುಸ್ಸಾಹಸಕ್ಕೆ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ : ಚಲಿಸುತ್ತಿರುವ ಶಾಲಾ ವ್ಯಾನ್‌ನಿಂದ ಹೊರಬಿದ್ದ ಇಬ್ಬರು ಬಾಲಕಿಯರು ; ಮೈ ಜುಮ್ಮ್‌ ಎನ್ನುವ ವಿಡಿಯೋ Viral.!

ಈ ವಿಡಿಯೋವನ್ನು @tweet_aneri ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹೈದರಾಬಾದ್ ನಗರದ ಮುಖ್ಯ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ವೇಳೆ ಬಸ್ಸಿನ ಕೆಳಗೆ ಮಲಗಿ ಅಪಾಯಕಾರಿ ಸಾಹಸ ಮಾಡಲು ಯುವಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಈ ವಿಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸಿತ್ತು. ಆದರೆ ಸತ್ಯಾ ಸತ್ಯತೆಯನ್ನು ಪರಿಶೀಲಿಸಿದಾಗ ಇದು ನೈಜ್ಯ ಘಟನೆಯಲ್ಲ, ಬದಲಿಗೆ VFX ಮತ್ತು ಎಡಿಟಿಂಗ್ ತಂತ್ರಜ್ಞಾನ ಬಳಸಿ ಈ ವಿಡಿಯೋ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : Car ತಡೆದ ಟ್ರಾಫಿಕ್‌ ಪೊಲೀಸ್‌ಗೆ ಕ್ಯಾಬ್‌ ಡ್ರೈವರ್‌ ಮಾಡಿದ್ದನ್ನು ನೋಡಿದ್ರೆ ಭಯ ಬೀಳತ್ತೀರಾ.!

ಜೂನ್ 21 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 166K Views ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ತುಣುಕು ವೈರಲ್ ಆಗುತ್ತಿದ್ದಂತೆ, ಇದಕ್ಕೆ ಪ್ರತಿಕ್ರಿಯಿಸಿದ ತೆಲಂಗಾಣ ರಾಜ್ಯ ರಸ್ತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ವಿಸಿ ಸಜ್ಜನರ್ ಇದು VFX ಮತ್ತು ಎಡಿಟಿಂಗ್ ತಂತ್ರಜ್ಞಾನ ಬಳಸಿ ತಯಾರಿಸಲಾದ ವಿಡಿಯೋ ಆಗಿದ್ದು, ಲೈಕ್ಸ್ ಮತ್ತು ಕಾಮೆಂಟ್ಸ್ ಪಡೆಯಲು ಕೆಲವರು ಈ ರೀತಿ ಹುಚ್ಚಾಟ ಮಾಡುತ್ತಾರೆ. ಅವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

spot_img
spot_img
- Advertisment -spot_img