ಜನಸ್ಪಂದನ ನ್ಯೂಸ್, ಡೆಸ್ಕ್ : ಕಾಗೆಯೊಂದು ಎಣ್ಣೆ ಕುಡಿದ ಬಳಿಕ ಹಾರುವುದನ್ನು ಮರೆತ ಘಟನೆ ನಡೆದಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಗೆಯೊಂದು ಟೇಬಲ್ ಮೇಲೆ ಬಂದು ಕುಳಿತುಕೊಳ್ಳುವುದನ್ನು ವೈರಲ್ ಆಗಿರುವ ಎಡಿಟೆಡ್ ವಿಡಿಯೋದಲ್ಲಿ ಕಾಣಬಹುದು. ಅದಕ್ಕೆ ಓರ್ವ ವ್ಯಕ್ತಿ ಗ್ಲಾಸ್‌ನಲ್ಲಿ ಮದ್ಯ ಹಾಕುತ್ತಾನೆ. ಕಾಗೆ ಸಹ ಮದ್ಯವನ್ನು ಕುಡಿಯುತ್ತದೆ. ನಂತರ ಕಾಗೆ ಹಾರುತ್ತಾ ಗೋಡೆಗೆ ಡಿಕ್ಕಿ ಹೊಡೆಯುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಇದನ್ನು ಓದಿ : Video : ಪ್ರೇಯಸಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದು ಸಿಕ್ಕಾಕೊಂಡ ಯುವಕ; ಮುಂದೆನಾಯ್ತು?
ಈ ವಿಡಿಯೋವನ್ನು aaky_don ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋಗೆ 50 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ನೂರಾರು ಕಮೆಂಟ್‌ಗಳು ಬಂದಿವೆ.
ಕಾಗೆ ಮದ್ಯ ಸೇವಿಸುವ ವಿಡಿಯೋ ತುಂಬಾ ಹಳೆಯದು ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಈ ವಿಡಿಯೋ ಮೂಲಕ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದುಕೊಳ್ಳಬಹುದು ಎಂದಿದ್ದಾರೆ. ಕೆಲವರು ಇದು ಎಡಿಟ್ ವಿಡಿಯೋ ಆಗಿದೆ ಅಂದಿದ್ದಾರೆ ಇನ್ನೊಬ್ಬರು.
ಇದನ್ನು ಓದಿ : ಬ್ಯೂಟಿ ಪಾರ್ಲರ್ ಬಂದ್ ಮಾಡಿಸಿ ಎಂದು ಪ್ರತಿಭಟನೆ ನಡೆಸಿದ ಯುವಕರು; ವಿಡಿಯೋ Viral.!
ನಾವು ಹಿಂದೆ ಕೇಳಿದ ಕಥೆಯಲ್ಲಿ ಕಾಗೆಯು ದಣಿದು ಬಹಳ ನೀರಡಿಕೆಯಾಗಿರುತ್ತದೆ. ಆಗ ಆ ಕಾಗೆ ಒಂದು ಹೂಜಿಯಲ್ಲಿ ಇಣುಕಿ ನೋಡುತ್ತದೆ.
ನೀರು ತುಂಬಾ ಕೆಳಗೆ ಇದ್ದ ಕಾರಣ ಕಾಗೆಯ ಬಾಯಿಗೆ ನೀರು ಸಿಗುವುದಿಲ್ಲ. ಆದರೆ ಕಾಗೆ ಹೂಜಿಗೆ ಒಂದೊಂದೆ ಕಲ್ಲು ಹಾಕಿ ನೀರು ಮೇಲೆ ಬರುವಂತೆ ಮಾಡುತ್ತದೆ.
ಇದನ್ನು ಓದಿ : ಗಂಡನನ್ನು ಫಾರಿನ್ ಗೆ ಕಳುಹಿಸಿ ಮಾವನೊಂದಿಗೆ ರೊಮ್ಯಾನ್ಸ್; YouTubeನಲ್ಲಿದೆ ಈ ಮೂವಿ.!
ನೀರು ಬಂದ ಮೇಲೆ ಖುಷಿಯಲ್ಲಿ ಆ ಕಾಗೆ ನೀರು ಕುಡಿದು ತನ್ನ ಬಾಯಾರಿಕೆಯನ್ನು ಕಡಿಮೆ ಮಾಡಿಕೊಳ್ಳುತ್ತದೆ.
ಆದರೆ ಇಂದಿನ ಕಾಗೆ ಬದಲಾಗಿದೆ. ಅದು ನೀರು ಕುಡಿಯುವ ಬದಲು ಎಣ್ಣೆ ಹೊಡೆಯುತ್ತಿದೆ.
View this post on Instagram