ಜನಸ್ಪಂದನ ನ್ಯೂಸ್, ಡೆಸ್ಕ್ : ಗುಜರಾತ್ ರಾಜ್ಯವು ಭೀಕರ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಮಹಾ ಪ್ರವಾಹಕ್ಕೆ ಪ್ರಮುಖ ನಗರಗಳು, ನದಿ ಸಮೀಪದ ಪ್ರದೇಶಗಳು ಜಲಾವೃತಗೊಂಡು ಸಾವಿರಾರು ಜನ ಸಂಕಷ್ಟ ಎದುರಿಸುತ್ತಿದ್ದಾರೆ.
ಈ ನಡುವೆ ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಭೀಕರ ಪ್ರವಾಹಕ್ಕೆ ದಂಪತಿಗಳಿಬ್ಬರು ಕಾರು ಸಮೇತ ಕೊಚ್ಚಿ ಹೋಗಿದ್ದಾರೆ.
ಇದನ್ನು ಓದಿ : ಯೂಟ್ಯೂಬ್ Video ನೋಡಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ; ಮುಂದೆನಾಯ್ತು ಗೊತ್ತಾ.?
ಸತತ ಎರಡು ಗಂಟೆಗಳ ಕಾಲ ಜಲದಿಗ್ಭಂದನದಲ್ಲಿ ಸಿಲುಕಿದ್ದ ದಂಪತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ದಂಪತಿ ತುಂಬಿ ಹರಿಯುತ್ತಿದ್ದ ಕರೋಲ್ ನದಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ವೇಳೆ ಕಾರು ಸಮೇತ ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಹೇಗೊ ಪ್ರಯತ್ನ ಮಾಡಿ ಕಾರಿನ ಟಾಪ್ ಏರಿ ಕುಳಿತ ದಂಪತಿ ಪ್ರಾಣ ರಕ್ಷಣೆಗೆ ಪರದಾಡಿದ್ದಾರೆ.
ಸ್ಥಳೀಯರು ನದಿಯಲ್ಲಿ ಪ್ರವಾಹ ಹರಿವು ಹೆಚ್ಚಿದ್ದರಿಂದ ದಂಪತಿಗಳನ್ನು ರಕ್ಷಿಸಲು ಮುಂದೆ ಬರಲಿಲ್ಲ. ನಂತರ ಪ್ರವಾಹ ಮಟ್ಟ ಸ್ಪಲ್ವ ತಗ್ಗಿದ ಬಳಿಕ ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಎರಡು ಗಂಟೆಗಳ ಕಾಲ ಜಲದಿಗ್ಭಂದನದಲ್ಲಿ ಸಿಲುಕಿದ ದಂಪತಿಯನ್ನು ರಕ್ಷಣೆ ಮಾಡಿದ್ದಾರೆ.
ಇದನ್ನು ಓದಿ : ಬಾಯ್‌ಫ್ರೆಂಡ್ ಜೊತೆ ಓಡಿಹೋಗುತ್ತಿದ್ದ ಯುವತಿಗೆ ನೆನಪಾದ ತಂದೆ ; ಮುಂದೆನಾಯ್ತು? ಈ Video ನೋಡಿ.
NarundarM ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಕಾರು ಸಮೇತ ಪ್ರವಾಹದಲ್ಲಿ ಕೊಚ್ಚಿ ಹೋದ ದಂಪತಿಗಳಿಬ್ಬರು ಪ್ರಾಣ ರಕ್ಷಣೆಗಾಗಿ ಕಾರಿನ ಟಾಪ್ ಏರಿ ಕುಳಿತಿರುವ ದೃಶ್ಯವನ್ನು ವೈರಲ್ ವಿಡಿಯೋದಲ್ಲಿ ನೋಡಬಹುದು.