Wednesday, November 6, 2024
spot_img

Health : ಎಳನೀರಿನ ಜೊತೆ ಈ ಸೊಪ್ಪನ್ನು ಸೇವಿಸಿ ; ಒಂದೇ ದಿನದಲ್ಲಿ ಕಿಡ್ನಿಯಲ್ಲಿರುವ ನೋವು ಮಾಯ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮಾನವ ಆರೋಗ್ಯವಾಗಿರಲು ತರಕಾರಿ, ಹಣ್ಣು, ಧಾನ್ಯಗಳು ಎಷ್ಟು ಮುಖ್ಯವೋ ಅಂತೆಯೇ ಸೊಪ್ಪುಗಳು ಸಹ ಅಷ್ಟೇ ಮುಖ್ಯ. ಸೊಪ್ಪನ್ನು ಸೇವಿಸಿದರೆ ಅನಾರೋಗ್ಯ ಭಾದಿಸುವುದಿಲ್ಲ.

ಅದರಲ್ಲಿಯೂ ಕಾಡು ಬಸಳೆ ಸೊಪ್ಪಿನಿಂದ 150ಕ್ಕೂ ಹೆಚ್ಚು ಕಾಯಿಲೆಗಳು ಗುಣವಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಇದು ಎಲ್ಲೆಡೆ ಸಿಗುವ ಬಸಳೆ ಸೊಪ್ಪಿಗಿಂತ ಭಿನ್ನವಾಗಿದೆ. ಬಸಳೆ ಸೊಪ್ಪಿನಂತೆ ತೀರಾ ನಾರಿನ‌ ಗುಣವನ್ನು ಈ ಸೊಪ್ಪು ಹೊಂದಿರುವುದಿಲ್ಲ.

ಇದನ್ನು ಓದಿ : Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

ಕಾಡು ಬಸಳೆ ಎಲೆ ದಪ್ಪವಾಗಿದ್ದು, ರುಚಿ ಹುಳಿಯಾಗಿರುತ್ತೆ. ಈ ಸಸ್ಯವು ಆಂಟಿಬ್ಯಾಕ್ಟೀರಿಯಲ್, ಆಂಟಿವೈರಲ್, ಆಂಟಿಮೈಕ್ರೊಬಿಯಲ್, ಆಂಟಿಫಂಗಲ್, ಆಂಟಿಹಿಸ್ಟಮೈನ್ ಮತ್ತು ಅನಾಫಿಲ್ಯಾಕ್ಟಿಕ್ ಗುಣಲಕ್ಷಣಗಳನ್ನ ಹೊಂದಿದೆ.

ಕಾಡು ಬಸಳೆ ಗಿಡದ ಒಂದೇ ಒಂದು ಎಲೆಯನ್ನು ಹಿಂಡಿದರೆ ಬರೋಬ್ಬರಿ ನಾಲ್ಕು ಚಮಚ ನೀರು ಒಸರುತ್ತದೆ. ಇನ್ನೂ ಇದನ್ನು ಇಂಗ್ಲೀಷಿನಲ್ಲಿ ಬ್ರಿಯೋಫಿಲ್ಲಂ ಅಂತ ಕರೆಯುತ್ತಾರೆ.

ಸ್ವಲ್ಪ ನೀರಿದ್ದರೂ ಸಾಕು ಚೆನ್ನಾಗಿ ಹರಡಿಕೊಂಡು ಬೆಳೆಯುತ್ತದೆ. ಇದರ ಚಟ್ನಿ, ಪಲ್ಯಗಳೂ ಸಹ ಬಹಳ ಆರೋಗ್ಯಕರ. ಅದರ ಎಲೆಗಳಿಗಿರುವ ಶಕ್ತಿಯೂ ಸಹ ಅಪಾರ. ಸಾವೇ ಇಲ್ಲದ ಸಸ್ಯ ಎಂದು ಇದನ್ನು ಕರೆಯುತ್ತಾರೆ.

ನೆನಪಿರಲಿ, ಈ ಸೊಪ್ಪನ್ನು ಬಳಸುವಾಗ ಹಾಲು ಅಥವಾ ಹಾಲಿನ ಯಾವುದೇ ಉತ್ಪನ್ನಗಳನ್ನೂ ಅಂದರೆ ಮೊಸರು, ಮಜ್ಜಿಗೆ, ಬೆಣ್ಣೆ ತುಪ್ಪದಂತಹ ಯಾವುದೇ ಉತ್ಪನ್ನಗಳನ್ನೂ ಬಳಸುವಂತಿಲ್ಲ.

ವೈದ್ಯಕೀಯ ತಜ್ಞರು ಕಾಡು ಬಸಳೆ ಎಲೆಗಳನ್ನ ತಿಂದರೆ 150ಕ್ಕೂ ಹೆಚ್ಚು ಕಾಯಿಲೆಗಳು ಗುಣವಾಗುತ್ತವೆ ಎಂದು ಬಹಿರಂಗಪಡಿಸಿದ್ದಾರೆ.

ಇದನ್ನು ಓದಿ : ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

* ಎಳನೀರಿನ ಜೊತೆ ಸೇವಿಸಿದರೆ ಒಂದೇ ದಿನದಲ್ಲಿ ಕಿಡ್ನಿಯಲ್ಲಿರುವ ನೋವು ಮಾಯವಾಗುತ್ತದೆ ಎನ್ನುತ್ತದೆ ನಾಟೀ ವೈದ್ಯ ಪದ್ಧತಿ.

* ಅಲ್ಲದೇ ಕಾಡು ಬಸಳೆ ಸೊಪ್ಪು ಎಲೆಗಳು ಕಿಡ್ನಿ ಸಮಸ್ಯೆಗಳನ್ನು ತಡೆಯುತ್ತದೆ. ಮೂತ್ರಕೋಶದಲ್ಲಿನ ಕಲ್ಲುಗಳು ಕರಗುತ್ತವೆ. ಡಯಾಲಿಸಿಸ್ ರೋಗಿಗಳಿಗೆ ಒಳ್ಳೆಯದು. ಮೂತ್ರಪಿಂಡದ ಕಾರ್ಯವನ್ನ ಸುಧಾರಿಸುತ್ತದೆ.

* ಎರಡು ದಿನಕ್ಕೊಮ್ಮೆ 15 ದಿನಗಳ ಕಾಲ ಸೇವಿಸಿದರೆ ಎಷ್ಟು ದೊಡ್ಡ ಕಿಡ್ನಿ ಸ್ಟೋನ್ ಆದರೂ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ. ಅಲ್ಲದೇ ಇನ್ನೊಮ್ಮೆ ಕಿಡ್ನಿ ಸ್ಟೋನ್ ಬರದಂತೆ ಶಾಶ್ವತ ಪರಿಹಾರ ದೊರಕಿಸುವ ಶಕ್ತಿಯೂ ಈ ಕಾಡು ಬಸಳೆ ಸೊಪ್ಪಿನ ಎಲೆಗಳಿಗಿವೆ.

ಇದನ್ನು ಓದಿ : ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್‌ ಯೋಜನೆಯಡಿ 300 ಯುನಿಟ್‌ ವಿದ್ಯುತ್‌ ಫ್ರೀ ; ಡೈರೆಕ್ಟ್ Link ಇಲ್ಲಿದೆ.!

* ಕಾಡು ಬಸಳೆ ಎಲೆಗಳನ್ನ ತಿನ್ನುವುದರಿಂದ ಅಧಿಕ ರಕ್ತದೊತ್ತಡವನ್ನ ಕಡಿಮೆ ಮಾಡಬಹುದು.

* ಇದರ ಎಲೆಗಳನ್ನ ಬಿಸಿ ಮಾಡಿ ಗಾಯಗಳ ಮೇಲೆ ಇಡುವುದರಿಂದ ಗಾಯಗಳು ಬೇಗ ವಾಸಿಯಾಗುತ್ತದೆ.

* ಇನ್ನೂ ಈ ಸೊಪ್ಪಿನಿಂದ ಜೀರ್ಣಾಂಗದಲ್ಲಿ ಹುಣ್ಣುಗಳು ಕಡಿಮೆಯಾಗುತ್ತವೆ.

* ಮೂತ್ರದಲ್ಲಿ ರಕ್ತ ಮತ್ತು ಕೀವು ಮುಂತಾದ ಸಮಸ್ಯೆಗಳನ್ನು ತಡೆಯುತ್ತದೆ.

* ಕಾಮಾಲೆ ಪೀಡಿತರು ಬೆಳಿಗ್ಗೆ ಮತ್ತು ಸಂಜೆ ಈ ಎಲೆಗಳ ರಸವನ್ನ 30 ಮಿಲಿ ಸೇವಿಸಿದರೆ ಗುಣವಾಗುತ್ತದೆ.

* ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಗಳನ್ನ ತಡೆಯುತ್ತದೆ.

* ಕಾಡು ಬಸಳೆಯಲ್ಲಿ ಶೀತ, ಕೆಮ್ಮು ಮತ್ತು ಭೇದಿಗಳನ್ನ ಗುಣಪಡಿಸುವ ಗುಣವಿದೆ.

ಇದನ್ನು ಓದಿ : BSNL : 197 ರೂ.ನಲ್ಲಿ ಪಡೆಯಿರಿ 70 ದಿನಗಳ ರೀಚಾರ್ಜ್, ದಿನಕ್ಕೆ 2GB ಡೇಟಾ ಪ್ಲ್ಯಾನ್.!

* ಈ ಎಲೆಗಳನ್ನ ಪುಡಿಮಾಡಿ ತಲೆಯ ಮೇಲೆ ಇಟ್ಟುಕೊಂಡರೆ ತಲೆನೋವು ಕಡಿಮೆಯಾಗುತ್ತದೆ.

* ಕೂದಲು ಉದುರುವುದನ್ನ ಕಡಿಮೆ ಮಾಡುತ್ತದೆ. ಬಿಳಿ ಕೂದಲು ತಡೆಯುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ  .

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img