ಜನಸ್ಪಂದನ ನ್ಯೂಸ್, ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ವಿರುದ್ಧ ಕಾಲೇಜು ವಿದ್ಯಾರ್ಥಿನಿಯನ್ನು ಪ್ರೀತಿಸಿ, ದೈಹಿಕ ಸಂರ್ಪಕ ಬೆಳೆಸಿ, ಮದುವೆಯಾಗುವುದಾಗಿ ಹೇಳಿ ವಂಚಿಸಿದ ಆರೋಪ ಕೇಳಿ ಬಂದಿದೆ.
ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪೇದೆ ತಿಮ್ಮಣ್ಣ ರಾಮಪ್ಪ ಭೂಸರೆಡ್ಡಿ ಎಂದು, ವಂಚನೆಗೊಳಗಾಗಿರುವ ಸಂತ್ರಸ್ತೆಯನ್ನು ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ನಿವಾಸಿ ಎಂದು ಗುರುತಿಸಲಾಗಿದೆ.
ಇದನ್ನು ಓದಿ : ಸೀಮಂತದ ದಿನವೇ ಪತ್ನಿಯ ಅನೈತಿಕ ಸಂಬಂಧದ ವಿಡಿಯೋ ಅತಿಥಿಗಳ ಮುಂದೆ Leak ಮಾಡಿದ ಪತಿ.!
ಮುನಿಸಿಪಾಲ್ ಕಾಲೇಜಿನಲ್ಲಿ ಕರೆಸ್ಪಾಂಡೆನ್ಸ್ ಮೂಲಕ ಪದವಿ ಓದುತ್ತಿದ್ದರು, ಅಲ್ಲಿಂದ ಸ್ನೇಹ ಪ್ರೀತಿಗೆ ತಿರುಗಿ, ನಂತರ ದೈಹಿಕ ಸಂರ್ಪಕಕ್ಕೂ ಕಾರಣವಾಗಿತ್ತು ಎಂದು ಹೇಳಲಾಗಿದೆ.
ದೈಹಿಕ ಸಂರ್ಪಕದ ನಂತರ ಸಂತ್ರಸ್ತೆಯ ಜಾತಿ ಬೇರೆಯದೆಂದು ತಿಳಿದ ಕಾನ್ಸ್‌ಟೇಬಲ್ ತಿಮ್ಮಣ್ಣ ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಮನ ನೊಂದ ಸಂತ್ರಸ್ತೆ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಇನ್ನೊಂದೆಡೆ ಈ ವಿಷಯ ತಿಳಿದು ಪೊಲೀಸ್ ಕಾನ್ಸ್‌ಟೇಬಲ್ ತಿಮ್ಮಣ್ಣ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
ಇದನ್ನು ಓದಿ : Strange ಸಂಪ್ರದಾಯ : ಭಾರತದ ಈ ಗ್ರಾಮದಲ್ಲಿ ಹೆಣ್ಣು ಮಕ್ಕಳು ಬೆತ್ತಲೆಯಾಗಿರ್ತಾರೆ.!
ಘಟನಾ ಸ್ಥಳದಲ್ಲಿದ್ದ ಜನ ಇಬ್ಬರನ್ನೂ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿದು, ಜಿಲ್ಲಾ ಆಸ್ಪತ್ರೆಗೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಭೇಟಿ ನೀಡಿದರು ಎಂದು ತಿಳಿದು ಬಂದಿದೆ.