ಜನಸ್ಪಂದನ ನ್ಯೂಸ್, ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಳೆದ 29 ವರ್ಷಗಳ ಹಿಂದೆ ತೆರೆಕಂಡ ಕನ್ನಡ ಸಿನಿಮಾದ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ ಘಟನೆ ನಡೆದಿದೆ.
ಹೌದು, ಮುರ್ಡೇಶ್ವರದ ಸತೀಶ ನಾಯ್ಕ ಅವರು ಕಳೆದ 29 ವರ್ಷಗಳ ಹಿಂದೆ ತೆರೆಕಂಡ ಬೇಟೆಗಾರ ಸಿನೆಮಾದ ದೃಶ್ಯವೊಂದರಲ್ಲಿ ರಾಷ್ಟ್ರಧ್ವಜ ತಲೆಕೆಳಗಾಗಿ ಇರಿಸಿ ಅವಮಾನ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ.
ಇದನ್ನು ಓದಿ : Video : ಮಕ್ಕಳಿಗೆ ಮೊಟ್ಟೆ ಕೊಟ್ಟು ವಾಪಸ್ ಕಿತ್ತುಕೊಂಡ ಅಂಗನವಾಡಿ ಸಿಬ್ಬಂದಿಗಳಿಬ್ಬರು ಸಸ್ಪೆಂಡ್.!
ಅವರ ಮಗಳು ಮಾನ್ಯ ನಾಯ್ಕ ಟಿವಿಯಲ್ಲಿ ಈ ಸಿನಿಮಾ ನೋಡುತ್ತಿದ್ದಳು.
ಈ ವೇಳೆ ಐಜಿಪಿ ಪಾತ್ರಧಾರಿಯ ಟೇಬಲ್ ಮೇಲೆ ರಾಷ್ಟ್ರಧ್ವಜ ತಲೆಕೆಳಗಾಗಿ ಇಟ್ಟಿರುವ ದೃಶ್ಯ ಕಂಡು ಬಂದಿದೆ. ಬಳಿಕ ಪರಿಶೀಲಿಸಿದಾಗ ದೃಶ್ಯ ಸ್ಪಷ್ಟವಾಗಿ ಗೋಚರಿಸಿದೆ.
ನಾವು ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿ ಸಿನೆಮಾ ನೋಡಿದಾಗಲೂ ರಾಷ್ಟ್ರಧ್ವಜ ತಲೆ ಕೆಳಗಾಗಿರುವ 1 ನಿಮಿಷ 13 ಸೆಕೆಂಡ್‌ನ ದೃಶ್ಯ ಕಾಣಿಸುತ್ತಿದೆ ಎಂದು ದೂರಿನಲ್ಲಿ ತಿಳಿಸಿ ವಿವರಿಸಿದ್ದಾರೆ.
ಹೀಗೆ ರಾಷ್ಟ್ರಧ್ವಜ ತಲೆ ಕೆಳಗಾಗಿಟ್ಟು ಚಿತ್ರೀಕರಣ ನಡೆಸಿದ್ದು ಕ್ಷಮಾರ್ಹ ಅಲ್ಲ. ಪದೇ ಪದೇ ಈ ದೃಶ್ಯ ನೋಡಿ ದೇಶದ ರಾಷ್ಟ್ರಧ್ವಜಕ್ಕೆ ಅಪಮಾನ ಆಗಲಿದೆ. ಆದ್ದರಿಂದ ಎಲ್ಲೆಡೆ ಈ ಸಿನೆಮಾ ಪ್ರದರ್ಶನ ನಿಲ್ಲಿಸಬೇಕು.
ಇದನ್ನು ಓದಿ : ನಿಮ್ಮ ಹೃದಯ ರೇಖೆಯಿಂದ ತಿಳಿಯಬಹುದು ನಿಮ್ಮ personality ; ನಿಮ್ಮ ಅಂಗೈ ರೇಖೆ ಯಾವ ರೀತಿ ಇದೆ.!
ಅಲ್ಲದೇ ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿರುವ ಅವರು, ಚಿತ್ರದ ಕ್ಲಿಪ್ ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ.