Monday, May 12, 2025
HomeJobCISF : ಹೆಡ್‌ ಕಾನ್ಸ್‌ಟೇಬಲ್‌ ಹುದ್ದೆಗೆ ಅರ್ಜಿ ಆಹ್ವಾನ, ರೂ. 81,100 ವೇತನ.
spot_img
spot_img
spot_img

CISF : ಹೆಡ್‌ ಕಾನ್ಸ್‌ಟೇಬಲ್‌ ಹುದ್ದೆಗೆ ಅರ್ಜಿ ಆಹ್ವಾನ, ರೂ. 81,100 ವೇತನ.

ಜನಸ್ಪಂದನ ನ್ಯೂಸ್‌, ನೌಕರಿ : ನೀವು ಯಾವುದಾದರೂ ಸರ್ಕಾರಿ ಉದ್ಯೋಗಕ್ಕೆ ಸೇರಲು ಬಯಸುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಒಂದು ಸುವರ್ಣಾವಕಾಶ. CISF ನಲ್ಲಿ ಹೆಡ್‌ ಕಾನ್ಸ್‌ಟೇಬಲ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

ಕೈಗಾರಿಕಾ ಭದ್ರತಾ ಪಡೆ (CISF) ಯ ಕ್ರೀಡಾ ಕೋಟಾದಡಿ ಖಾಲಿ ಇರುವ ಹೆಡ್‌ ಕಾನ್ಸ್‌ಟೇಬಲ್‌ (ಜೆನೆರಲ್‌ ಡ್ಯೂಟಿ) ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ.

ಇದನ್ನು ಓದಿ : ಪಾಕ್​ ಪರ ಪೋಸ್ಟ್​​ : ವಿದ್ಯಾರ್ಥಿನಿ ವಿರುದ್ಧ FIR ದಾಖಲು.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇಲ್ಲದೇ ನೋಡಿ ಹುದ್ದೆಗಳ ಕುರಿತು ಹೈಲೈಟ್ಸ್‌ :
  • ನೇಮಕಾತಿ ಸಂಸ್ಥೆ : ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)
  • ಹುದ್ದೆ ಹೆಸರು : ಹೆಡ್‌ ಕಾನ್ಸ್‌ಟೇಬಲ್ (General Duty)
  • ಹುದ್ದೆಗಳ ಸಂಖ್ಯೆ : 30 (Women’s reserve)
  • ಹುದ್ದೆಯ ಕೋಟಾ : ಕ್ರೀಡಾಕೋಟ.
  • ಕ್ರೀಡೆಯ ವಿಷಯ : ಹಾಕಿ (Hockey).
  • ಉದ್ಯೋಗ ಪ್ರಕಾರ : FULL_TIME
ಇದನ್ನು ಓದಿ : AAI : ಏರ್ಪೋರ್ಟ್ಸ್ ಅಥಾರಿಟಿ ಆಪ್ ಇಂಡಿಯಾದಲ್ಲಿ ಉದ್ಯೋಗವಕಾಶ.
ವೇತನ ಶ್ರೇಣಿ :
  • ಸಿಐಎಸ್‌ಎಫ್‌ ಹೆಡ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.25,500/- ರಿಂದ ರೂ.81,100/- ರವರೆಗೆ ವೇತನ ನೀಡಲಾಗುವುದು.
ಅರ್ಹತೆಗಳು :
  • ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ ದ್ವಿತೀಯ ಪಿಯುಸಿ (PUC) ಶಿಕ್ಷಣವನ್ನು ಪಡೆದಿರಬೇಕು.
  • ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ಸ್ಪರ್ಧಿಸಿರಬೇಕು.
  • ಸೀನಿಯರ್, ಜೂನಿಯರ್ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿರಬೇಕು ಅಥವಾ ಪ್ರಸ್ತುತ ಒಂದು ಟೀಮ್‌ನಲ್ಲಿ ಯಾವುದೇ ಹಂತದಲ್ಲಿ ಸ್ಪರ್ಧಿಸುತ್ತಿರಬೇಕು.
  • 153 ಸೆಂ.ಮೀ ಎತ್ತರ ಇರಬೇಕು.
ಇದನ್ನು ಓದಿ : ಮಹಿಳೆಯ ಕಿವಿಯೊಳಗೆ ಸೇರಿದ ಹಾವು ; ಎದೆ ಝಲ್ಲೆನ್ನಿಸುವ Video ವೈರಲ್.!
ವಯೋಮಿತಿ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, (01-08-2025 ಕ್ಕೆ)

  • ಕನಿಷ್ಠ 18 ವರ್ಷ ಆಗಿರಬೇಕು ಮತ್ತು
  • ಗರಿಷ್ಠ 23 ವರ್ಷ ವಯಸ್ಸು ಮೀರಿರಬಾರದು.

Note : ದಿ. 02-08-2002 ಕ್ಕೂ ಮೊದಲು ಜನಿಸಿರಬಾರದು ಹಾಗೂ ದಿನಾಂಕ 01-08-2007 ರ ನಂತರ ಜನಿಸಿರಬಾರದು.

ವಯೋಮಿತಿ ಸಡಿಲಿಕೆ :
  • SC/ST ಅಭ್ಯರ್ಥಿಗಳಿಗೆ 5 ವರ್ಷ.
  • OBC ಅಭ್ಯರ್ಥಿಗಳಿಗೆ 3 ವರ್ಷ.

Note : ಅಂದ್ರೆ SC/ST ಅಭ್ಯರ್ಥಿಗಳು 28 ವರ್ಷದವರೆಗೆ ಮತ್ತು OBC ಅಭ್ಯರ್ಥಿಗಳು 26 ವರ್ಷದವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.

IMP Note : ಎನ್‌ಪಿಎಸ್‌ ಪಿಂಚಣಿ ವ್ಯವಸ್ಥೆ ಸೌಲಭ್ಯ ಸಿಗಲಿದೆ.

ಇದನ್ನು ಓದಿ : IPL – 2025 : ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಿನ್ನಲೆ IPL ಸ್ಥಗಿತ.
ನೇಮಕಾತಿ ವಿಧಾನ :
  • ಟ್ರಯಲ್ ಟೆಸ್ಟ್‌, ಪ್ರೊಫೀಶಿಯನ್ಸಿ ಟೆಸ್ಟ್‌, ದೈಹಿಕ ಸಾಮರ್ಥ್ಯ ಪರೀಕ್ಷೆ,
  • ಮೂಲ ದಾಖಲೆಗಳ ಪರಿಶೀಲನೆ ಮತ್ತು
  • ಮೆಡಿಕಲ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನ :
  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಪೇಜ್‌ನಲ್ಲಿ ‘Login’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಮತ್ತೊಂದು ವೆಬ್‌ಪುಟದಲ್ಲಿ ‘Click Here For New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ತೆರೆದ ವೆಬ್‌ಪುಟದಲ್ಲಿ ಕೇಳಲಾದ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.
  • >>>>> ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್‌,
  • >>>>> ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಅಂಕಪಟ್ಟಿ,
  • >>>>> ಹಾಕಿ ಕ್ರೀಡಾ ಸಾಧನೆಯ ಸರ್ಟಿಫಿಕೇಟ್‌ಗಳು,
  • >>>>> ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ ದಾಖಲೆಗಳು,
  • >>>>> ಜನ್ಮ ದಿನಾಂಕ ಪ್ರಮಾಣಪತ್ರಗಳು,
  • >>>>> ಇಮೇಲ್ ವಿಳಾಸ,
  • >>>>> ಮೊಬೈಲ್ ನಂಬರ್,
  • >>>>> ಮೆಡಿಕಲ್ ಸರ್ಟಿಫಿಕೇಟ್‌ ಮತ್ತು ವಿವರಗಳು.
ಇದನ್ನು ಓದಿ : ಎಚ್ಚರಿಕೆ : ನಿಮ್ಮ ಮನೆಗೆ ತಂದ LPG ಸಿಲಿಂಡರ್ ಮೇಲೆ ಬರೆದಿರುವ ಈ ಕೋಡ್‌ ಖಂಡಿತವಾಗಿ ನೋಡಿ.
ಪ್ರಮುಖ ದಿನಾಂಕಗಳು :
  •  ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : 11 ಮೇ, 2025.
  • ಅರ್ಜಿ ಸ್ವೀಕಾರ ಕೊನೆ ದಿನಾಂಕ : 30 ಮೇ, 2025 ರ ರಾತ್ರಿ 11-59 ಗಂಟೆವರೆಗೆ.
ಪ್ರಮುಖ ಲಿಂಕ್‌ಗಳು:
  • ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ : https://cisfrectt.cisf.gov.in
  • Website URL : https://www.cisf.gov.in/

Disclaimer : The above given information is available On online, candidates should check it properly before applying. This is for information only.

ಹಿಂದಿನ ಸುದ್ದಿ : Health : ನಿಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುವ ಈ ಹಣ್ಣಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಸೀಮೆ ಹುಣಸೆ ಹಣ್ಣು, ಇಲಾಚಿ ಹಣ್ಣು ಎಂದು ಕರೆಯುವ ಈ ಹಣ್ಣು ಜಂಗಲ್ ಜಿಲೇಬಿ (Jungle Jilebi) ಎಂದೇ ಖ್ಯಾತಿ ಪಡೆದಿದೆ. ಪ್ರತಿದಿನ ಇಪ್ಪತ್ತರಿಂದ ಮೂವತ್ತು ಗ್ರಾಂ ಇಲಾಚಿ ಹಣ್ಣು ತಿನ್ನುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರ ಆಗುತ್ತವೆ.

ಪಿಥೆಸೆಲ್ಲೋಬಿಯಂ ಡುಲ್ಸ್ (Pithecellobium dulce) ಎಂದು ಕರೆಯಲ್ಪಡುವ ಸೀಮೆ ಹುಣಸೆ ಹಣ್ಣು, ವಿಶಿಷ್ಟವಾದ ರುಚಿ ಹೊಂದಿದೆ. ಇದರ ಔಷಧೀಯ ಗುಣಗಳು ಆರೋಗ್ಯಕ್ಕೂ ವರದಾನವಿದ್ದಂತೆ.

ಇದನ್ನು ಓದಿ : Revenue Department : ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಜಂಗಲ್ ಜಲೇಬಿಯನ್ನು ಊಟ ಮಾಡುವುದಕ್ಕಿಂತ ಒಂದು ಗಂಟೆ ಮುಂಚೆ ಅಥವಾ ಒಂದು ಗಂಟೆ ನಂತರ ತಿನ್ನಬೇಕು (Eat one hour before or one hour after) ಎನ್ನುತ್ತಾರೆ ಹಿರಿಯರು.

ಈ ಹಣ್ಣು ವಿಟಮಿನ್ ಸಿ, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಥಯಾಮಿನ್, ರಿಬೋಫ್ಲಾವಿನ್ ಮುಂತಾದ ಅನೇಕ ಅಂಶಗಳನ್ನು ಹೊಂದಿದೆ.

ಕಣ್ಣಿನ ಸಮಸ್ಯೆ ಮತ್ತು ಚರ್ಮದ ಕಾಯಿಲೆಗೆ (Eye problems and skin disease) ಈ ಹಣ್ಣು ತುಂಬಾ ಉಪಯೋಗಕರ ಎಂದು ಪರಿಗಣಿಸಲಾಗಿದೆ.

ಇದನ್ನು ಓದಿ : ಅತ್ಯಂತ ದುರ್ಬಲ ಪಾಸ್‌ವರ್ಡ್ ಗಳಿವು; 1 ನಿ‌ಮಿಷ ಸಾಕು ಖಾತೆ ಹ್ಯಾಕ್ ಮಾಡಲು.!

ಇದು ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಈ ಗುಣವು ವಯಸ್ಸಾಗುವುದನ್ನು ತಡೆಯುತ್ತದೆ (Prevents aging) ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.

ಈ ಹಣ್ಣು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವುದು (To strengthen the digestive system).

ಜಂಗಲ್ ಜಲೇಬಿಯನ್ನು ಒಂದು ತಿಂಗಳು ನಿಯಮಿತವಾಗಿ ಸೇವಿಸಿದರೆ, ಸಕ್ಕರೆಯನ್ನು ನಿಯಂತ್ರಿಸಬಹುದಂತೆ.

ಇದನ್ನು ಓದಿ : Pahalgam attack : ಭಾರತದಿಂದ ಪ್ರತಿಕಾರದ ಭಯ ; ಪಾಕಿಸ್ತಾನ ಸೈನಿಕರ ಸಾಮೂಹಿಕ ರಾಜೀನಾಮೆ.?

ಇದರಲ್ಲಿರುವ ಆಂಟಿಆಕ್ಸಿಡೆಂಟ್, ಆಂಟಿಇನ್ಫ್ಲಾಮೇಟರಿ, ಆಂಟಿಡಿಯಾಬೆಟಿಕ್ ಅಂಶಗಳು ಕ್ಯಾನ್ಸರ್ ರೋಗಿಗಳಿಗೆ ಉಪಯುಕ್ತವಾಗಿವೆ (Useful for cancer patients).

ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು (To maintain body temperature) ಮತ್ತು ಶಾಖ ಸಂಬಂಧಿತ ಅಸ್ವಸ್ಥತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ನೈಸರ್ಗಿಕ ನೋವು ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಇದನ್ನು ಓದಿ : Health : ಏಕಾಏಕಿ ಕೈಗಳು ನಡುಗುವುದು ಈ ಗಂಭೀರ ಕಾಯಿಲೆಯಾಗಿರಬಹುದು.!

ಫೈಲೇರಿಯಾಸಿಸ್ ಎಂಬ ಸಾರವನ್ನು ಈ ಹಣ್ಣಿನ ಎಲೆ ಮತ್ತು ಬೀಜಗಳು ಹೊಂದಿದ್ದು, ಇದು ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಉಪಯುಕ್ತವಾಗಿದೆ. ಅಲ್ಲದೇ ಸೊಳ್ಳೆಗಳ ವಿರುದ್ಧ ನೈಸರ್ಗಿಕ ಕೀಟನಾಶಕವಾಗಿಯೂ (Natural insecticide against mosquitoes) ಈ ಹಣ್ಣು ಕೆಲಸ ಮಾಡುತ್ತದೆ.

ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.

ಇದು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ : ಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು.!

ಕೆಮ್ಮು ಮತ್ತು ಅಸ್ತಮಾದಂತಹ ರೋಗಗಳನ್ನು ಗುಣಪಡಿಸಬಹುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರರಲ್ಲ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments