ಜನಸ್ಪಂದನ ನ್ಯೂಸ್, ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ (Umarani) ಗ್ರಾಮದ ಹತ್ತಿರ ನಿಪ್ಪಾಣಿ – ಮುಧೋಳ ( Nippani – Mudhol) ರಾಜ್ಯ ಹೆದ್ದಾರಿಯಲ್ಲಿ ಸಾರಿಗೆ ಬಸ್ ಕಾರಿಗೆ ಡಿಕ್ಕಿ ಹೊಡೆದ ಘಟನೆ ಶನಿವಾರ ಮಧ್ಯಾಹ್ನ ನಡೆದಿರುವ ಬಗ್ಗೆ ವರದಿಯಾಗಿದೆ.
ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಮಹಿಳೆಯೋರ್ವಳು ಸ್ಥಳದಲ್ಲಿಯೇ (On spote) ಸಾವಿಗೀಡಾಗಿದ್ದು, ಕಾರ ಚಾಲಕನಿಗೆ ಗಂಭೀರವಾದ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ.
Read it : Health : ಈ ಸೊಪ್ಪನ್ನು ಜಗಿದು ತಿನ್ನುವುದರಿಂದ ದೂರವಾಗುತ್ತೆ ಈ ಸಮಸ್ಯೆ.!
ನಿಪ್ಪಾಣಿ – ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಕಾರು ಚಾಲಕ ಓವರ್ ಟೇಕ್ (Overtake) ಮಾಡುವಾಗ ಎದುರಿಗೆ ಇದ್ದ ರಾಜ್ಯ ಸಾರಿಗೆ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಹೆಸ್ಕಾಂ ಚಿಕ್ಕೋಡಿ ಉಪವಿಭಾಗ ಸಹಾಯಕ ಅಭಿಯಂತ ನೇಮಿನಾಥ ಅವಟೆ ಅವರ ಕಾರು ಎಂದು ಹೇಳಲಾಗುತ್ತಿದೆ. ಕಾರಿನ ಎರಡು ಏರ್ ಬ್ಯಾಗ್ ಗಳು ಅದೃಷ್ಟವಶಾತ Open ಆಗಿದ್ದರಿಂದ ಕಾರಿನಲ್ಲಿರುವ ಹೆಸ್ಕಾಂ ಇಂಜಿನಿಯರ್ ಬದುಕುಳಿದಿದ್ದಾರೆ.
ಡಿಕ್ಕಿ ಹೊಡೆದ ರಬ್ಬಸಕ್ಕೆ i20 ಕಾರಿನ ಮುಂಭಾಗ ನುಜ್ಜು ಗುಜ್ಜಾಗಿದೆ.
ಅಪಘಾತದಲ್ಲಿ ಕಾರಿನಲ್ಲಿದ ನಾಲ್ವರಲ್ಲಿ ಮಹಿಳೆಯೋರ್ವಳು (60) ಸಾವಿಗೀಡಾಗಿದ್ದರೇ, ಓರ್ವರ ಸ್ಥಿತಿ (Serious) ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಉಳಿದಿಬ್ಬರಿಗು ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಸಮೀಪದ ಚಿಕ್ಕೋಡಿ ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನು ಬಸ್ಸಿನಲ್ಲಿದ್ದ ಕೆಲ ಮಹಿಳೆ ಮಕ್ಕಳಿಗೂ ಸಣ್ಣ ಪುಟ್ಟ ಗಾಯಾವಾದ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
Read it : ವೇಗವಾಗಿ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್; ಮುಂದೆನಾಯ್ತು? Video ನೋಡಿ.!
ಗ್ರಾಮದಿಂದ ಚಿಕ್ಕೋಡಿಗೆ ಹೋಗುತ್ತಿತ್ತು, ಕಾರು ಚಿಕ್ಕೋಡಿಯಿಂದ ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.
ಘಟನೆ ಚಿಕ್ಕೋಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.