ಜನಸ್ಪಂದನ ನ್ಯೂಸ್, ಡೆಸ್ಕ್ : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಣ್ಣು ಒಂದು ಉತ್ತಮ ಆಯ್ಕೆ. ಆದರೆ ರಾತ್ರಿ ವೇಳೆ ಬೇಯಿಸಿದ ತರಕಾರಿಗಳು, ರೊಟ್ಟಿ ಅಥವಾ ಅನ್ನವನ್ನು ಊಟ ಮಾಡುವ ಬದಲು ಬರೀ ಹಣ್ಣುಗಳನ್ನೇ ತಿಂದರೆ ಏನಾಗುತ್ತದೆ.?
ಒಬ್ಬೊಬ್ಬರ ಆರೋಗ್ಯ ಸ್ಥಿತಿ ಒಂದೊಂದು ರೀತಿ ಇರುವ ಹಾಗೆ, ಒಬ್ಬೊಬ್ಬರ ದೇಹವು ಸಹ ಒಂದೊಂದು ರೀತಿಯಲ್ಲಿ ಇರುತ್ತದೆ. ಇನ್ನೂ ರಾತ್ರಿಯ ಊಟವು ಹಗುರವಾಗಿರಬೇಕು ಅಂದರೆ ಲೈಟ್ ಫುಡ್ ಆಗಿರಬೇಕು.
ಇದನ್ನು ಓದಿ : Video : ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಕಿರುಚುತ್ತಾ ಓಡಿದ ಸೇತುವೆ ಮೇಲಿದ್ದ ಜನ.!
ಆದರೆ ತುಪ್ಪವನ್ನು ಹಾಕಿ ಪಲಾವ್, ಬಿಸಿಬೇಳೆ ಬಾತ್, ಖಿಚಡಿ ಮತ್ತು ರಾಗಿ ದೋಸೆಗಳನ್ನು ಮಾಡಿಕೊಂಡು ತಿನ್ನುತ್ತಾರೆ. ಇದರಿಂದಾಗಿ ಸಮಸ್ಯೆ ಆಗುತ್ತದೆ.
ಇನ್ನೂ ರಾತ್ರಿಯ ಊಟದಲ್ಲಿ ಹಣ್ಣುಗಳನ್ನು ಮಾತ್ರ ತಿನ್ನುವುದು ಒಳ್ಳೆಯದಲ್ಲ. ಅದರಲ್ಲೂ ಎಲ್ಲಾ ತರಹದ ಹಣ್ಣುಗಳನ್ನು ಕತ್ತರಿಸಿ ತಿನ್ನುವುದು ಆರೋಗ್ಯಕ್ಕೆ ಇನ್ನೂ ಒಳ್ಳೆಯದಲ್ಲ.
ಹಣ್ಣುಗಳು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ ಮತ್ತು ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಹಣ್ಣುಗಳನ್ನು ಬೆಳಗಿನ ಉಪಾಹಾರದಲ್ಲಿ ಅಥವಾ ಸಂಜೆಯ ಲಘು ಉಪಹಾರವಾಗಿ ಸೇವನೆ ಮಾಡಬಹುದು.
ಇದನ್ನು ಓದಿ : ವಿಡಿಯೋ : ವೈದ್ಯರಲ್ಲ, ನಿಜವಾದ ದೇವರಿವರು; ಉಸಿರು ನಿಂತ ಮಗುವಿಗೆ ಮರುಜನ್ಮ ನೀಡಿದ Doctor.!
ಊಟದಲ್ಲಿ ಸ್ವಲ್ಪ ಪ್ರಮಾಣದ ಹಣ್ಣುಗಳನ್ನು ಸೇವಿಸುವುದು ಉತ್ತಮ. ಆದರೆ ನಿಮ್ಮ ಊಟವೇ ಹಣ್ಣುಗಳಿಂದ ಕೂಡಿರಬಾರದು. ಸಮತೋಲಿತ ಆಹಾರ ಸೇವಿಸಬೇಕು. ಅಂದ್ರೆ ಧಾನ್ಯಗಳು, ದ್ವಿದಳ ಧಾನ್ಯಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ದೈನಂದಿನ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸುತ್ತವೆ. ಹಾಗಾಗಿ ಅವುಗಳನ್ನು ಸೇವಿಸಬಹುದು.