Monday, October 7, 2024
spot_img
spot_img
spot_img
spot_img
spot_img
spot_img
spot_img

Special news : ರಾತ್ರಿ ಮೊಸರಿಗೆ ಈರುಳ್ಳಿ ಸೇರಿಸಿ ತಿನ್ನಬಹುದೇ.? ತಿಂದರೆ ಏನಾಗಬಹುದು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ತಿಂಡಿ ಅಥವಾ ಊಟ ಮಾಡುವಾಗ ಕೆಲವೊಂದು ಆಹಾರ ಪದಾರ್ಥಗಳನ್ನು ಸೇರಿಸಿ ತಿನ್ನಬಾರದು. ಅನೇಕರು ಮೊಸರಿಗೆ ಈರುಳ್ಳಿ ಸೇರಿಸಿ, ತಿನ್ನಲು ಅನೇಕರು ಇಷ್ಟಪಡುತ್ತಾರೆ. ಆದರೆ, ಆ ರೀತಿ ತಿನ್ನುವುದು ಒಳ್ಳೆಯದೇ? ಆರೋಗ್ಯಕ್ಕೆ ಏನಾದರೂ ತೊಂದರೆಯಾಗುತ್ತದೆಯೇ? ಅಂತ ತಿಳಿಯೋಣ.

ಇದನ್ನು ಓದಿ : 70 ವರ್ಷದ ಮುದುಕನನ್ನು ಮದುವೆಯಾದ 20 ರ ತರುಣಿ; ವಿಡಿಯೋ Viral.!

ಇನ್ನು ಯಾವ ವೇಳೆಯಾದರೂ ಈರುಳ್ಳಿಯನ್ನು ಮೊಸರಿನೊಂದಿಗೆ ತಿನ್ನಬಾರದು ಎಂದು ಆಯುರ್ವೇದ ಹೇಳುತ್ತದೆ. ಏಕೆಂದರೆ, ಹೀಗೆ ಎರಡು ಪದಾರ್ಥಗಳನ್ನು ಸೇರಿಸಿ ತಿಂದರೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ವಿಶೇಷವಾಗಿ ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈರುಳ್ಳಿ ಮತ್ತು ಮೊಸರು ಎರಡೂ ವಿಭಿನ್ನ ಪರಿಣಾಮವನ್ನು ಬೀರುತ್ತವೆ.

ಮೊಸರು ವಿರೇಚಕ ಗುಣಗಳನ್ನು ಹೊಂದಿದೆ, ಈರುಳ್ಳಿ ಬೆಚ್ಚನೆಯ ಪರಿಣಾಮವನ್ನು ಹೊಂದಿದೆ. ಈರುಳ್ಳಿಯಲ್ಲಿ ಸಲ್ಫರ್ ಸಂಯುಕ್ತಗಳಿದ್ದು, ಇವು ಮೊಸರಿನಲ್ಲಿರುವ ಕ್ಯಾಲ್ಸಿಯಂನಂತಹ ಪೋಷಕಾಂಶಗಳನ್ನು ದೇಹವು ಹೀರಿಕೊಳ್ಳುವಲ್ಲಿ ಅಡ್ಡಿಪಡಿಸುತ್ತವೆ.

ಹೀಗಾಗಿ ಆರೋಗ್ಯ ತಜ್ಞರು ಮೊಸರು ಮತ್ತು ಈರುಳ್ಳಿ ಮಿಶ್ರಣ ಮಾಡುವುದರಿಂದ ಸಮಸ್ಯೆಗಳು ಉಂಟಾಗುತ್ತವೆ ಎನ್ನುತ್ತಾರೆ.

ಇದನ್ನು ಓದಿ : ರಾಜ್ಯದ ಮತ್ತೋರ್ವ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ; ಶ್ರೀಗಳಿಂದ ಸ್ಪಷ್ಟೀಕರಣ.!

ಎರಡನ್ನೂ ತಿನ್ನುವುದರಿಂದ ದದ್ದುಗಳು ಹಾಗೂ ಸೋರಿಯಾಸಿಸ್‌ನಂತಹ ಚರ್ಮದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಲ್ಲದೆ ಆಹಾರ ವಿಷದಂತಹ ಸಮಸ್ಯೆಗಳೂ ಎದುರಾಗಬಹುದು.

ದೇಹದಲ್ಲಿ ಉಬ್ಬುವುದು, ಗ್ಯಾಸ್ಟಿಕ್ ಮತ್ತು ಅತಿಯಾದ ಶಾಖ ಉತ್ಪಾದನೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ಟಾಕ್ಸಿನ್ ಮಟ್ಟವನ್ನು ಹೆಚ್ಚಿಸುತ್ತದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img