ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಖಾನಾಪುರ (Khanapura in Belagavi district) ಸಿಪಿಐ ಮಂಜುನಾಥ ನಾಯಕ ಅವರನ್ನು ಅಮಾನತು ಮಾಡಿ (suspend) ಐಜಿಪಿ ವಿಕಾಸ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
MLC ಸಿ. ಟಿ. ರವಿ ಅವರನ್ನು ಅರೆಸ್ಟ್ ಮಾಡಿ ತಡರಾತ್ರಿ ಖಾನಾಪೂರ ಪೊಲೀಸ್ ಠಾಣೆಗೆ ಕರೆ ತರಲಾಗಿತ್ತು. ಈ ವೇಳೆ ಸಿಪಿಐ ಮಂಜುನಾಥ ಠಾಣೆಯ ಹೊರಗಡೆ (Outside the station) ಗಲಾಟೆ ಮಾಡಿದ ಬಿಜೆಪಿ ನಾಯಕರನ್ನು ಠಾಣೆಯೊಳಗಡೆ ಬಿಟ್ಟಿದ್ದರು.
ಇದನ್ನು ಓದಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 9,871 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ Green signal.!
ಇದಾದ ನಂತರ ಠಾಣೆಯಲ್ಲಿ ಬಿಜೆಪಿ ನಾಯಕರು ಸಹ ಸಭೆ (meeting) ಸೇರಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಡಿಸಿಪಿ ರೋಹನ ಜಗದೀಶ ಅವರು ಕೂಡ ಅರ್ಧ ಗಂಟೆ ಚರ್ಚೆ ಮಾಡಿದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವರು (Home Minister) ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸದ್ಯ ಐಜಿಪಿ ವಿಕಾಸಕುಮಾರ ವಿಕಾಸ ಅವರು ಸಿಪಿಐ ಮಂಜುನಾಥ ನಾಯಕ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಸಿ ಟಿ ರವಿ ಖಾನಾಪುರ ಠಾಣೆಗೆ ಕರೆತಂದು ನಿಷ್ಕಾಳಜಿತನ, ಕರ್ತವ್ಯ ಲೋಪ, (Negligence, dereliction of duty) ಬೇಜಬ್ದಾರಿತನ ಪ್ರದರ್ಶನ ಆರೋಪ ಹಾಗೂ ಆಪಾದಿತರನ್ನು (Allegedly) ಹೊರತುಪಡಿಸಿ ಠಾಣೆಯೊಳಗೆ ಯಾರನ್ನೂ ಬಿಡದಂತೆ ಆದೇಶ (order) ನೀಡಿದ್ದರೂ ನಿರ್ಲಕ್ಷ್ಯ ವಹಿಸಿದ ಆರೋಪಿಸಲಾಗಿದೆ.
ಇದನ್ನು ಓದಿ : 150 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ ; Chikkodi ಮೂಲದ ಯೋಧ ಸೇರಿ ಐವರು ಹುತಾತ್ಮ.!
ಈ ಅವಧಿಯಲ್ಲಿ ಬಿಜೆಪಿ ನಾಯಕರು ಸೇರಿ ಎಲ್ಲರನ್ನೂ ಠಾಣೆ ಒಳಗಡೆ ಬಿಟ್ಟಿದ್ದರು. ಮೇಲಾಧಿಕಾರಿಗಳ ಆದೇಶ ಉಲ್ಲಂಘನೆ (Violation of order) ಆರೋಪದಡಿ ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ.
ಇತ್ತ ಸಿಪಿಐ ಅಮಾನತು ಖಂಡಿಸಿ ವಿವಿಧ ಸಂಘಟನೆಗಳು ಖಾನಾಪುರ ಬಂದ್ ಗೆ ಕರೆ ನೀಡಿವೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಏಕಾಂತದಲ್ಲಿದ್ದಾಗ ಮನೆಗೆ ಬಂದ ಪತಿ ; ಎದ್ನೋ ಬಿದ್ನೋ ಅಂತ ಅರಬೆತ್ತಲಾಗಿ ಓಡಿದ ಪತ್ನಿಯ Lover ; ವಿಡಿಯೋ ನೋಡಿ.!
ಡಿ.26 ರಂದು ಕನ್ನಡಪರ ಸಂಘಟನೆಗಳು (Pro- Kannada organizations) ಖಾನಾಪುರ ಬಂದ್ ಗೆ ಕರೆ ನೀಡಿವೆ ಎನ್ನಲಾಗಿದೆ. ಬಂದ್ ಕರೆಗೆ ಬಿಜೆಪಿ- ಜೆಡಿಎಸ್ ಪಕ್ಷಗಳು ಸಹ ಬೆಂಬಲ ನೀಡಿವೆ.
ಸಿಪಿಐ ಅಮಾನತು ಮಾಡಿರುವುದನ್ನು ಪ್ರಶ್ನಿಸಿ ಹಾಗೂ ಅಮಾನತು ಆದೇಶ ಹಿಂಪಡೆಯುವಂತೆ (withdraw the order of suspension) ಆಗ್ರಹಿಸಿ ನಾಳೆ ಖಾನಾಪುರದಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ.