ಜನಸ್ಪಂದನ ನ್ಯೂಸ್, ಡೆಸ್ಕ್ : BSNL ಗ್ರಾಹಕರಿಗೆ ಹಲವು ಸಂತಸದ ಸುದ್ದಿಗಳನ್ನು ನೀಡುತ್ತಿದೆ. ಬಿಎಸ್ಎನ್ಎಲ್ ಕಂಪನಿಯು ತನ್ನ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ಅವರಿಗೆ ಪ್ರಯೋಜನ ಆಗುವಂತಹ ರೀತಿಯ ರೀಚಾರ್ಜ್ ಪ್ಲಾನ್ ಗಳನ್ನು ಜಾರಿಗೆ ತರುತ್ತಿದೆ.
ಅದೇ ರೀತಿಯಲ್ಲಿ ಬಿಎಸ್ಎನ್ಎಲ್ BSNL ಕಂಪನಿಯು ಅತೀ ಅಗ್ಗದ ರೀಚಾರ್ಜ್ ಪ್ಲಾನ್ ಗಳನ್ನು ಜಾರಿಗೊಳಿಸಿದೆ. ಹಾಗಾದರೆ BSNL ನ ಈ ಪ್ರಯೋಜನಗಳನ್ನು ಈಗ ನೀವು ಸಹ ಪಡೆಯಲು ಬಯಸುವಿರಾ.?
ಇದನ್ನು ಓದಿ : Video : ಪ್ರಿಯಕರನಿಗೆ ಜಾಮೀನು ನೀಡಲಿಲ್ಲ ಅಂತ ಜಡ್ಜ್ ಗೆ ಮನಸೋಇಚ್ಛೆ ಥಳಿಸಿದ ವಕೀಲೆ.!
ಹೊಸ SIM ಕಾರ್ಡ್ ತೆಗೆದುಕೊಳ್ಳಬೇಕಾ ಅಥವಾ ಬೇರೆ ಸಿಮ್ ಅನ್ನು ನೀವು BSNL ಗೆ ಪೋರ್ಟ್ ಮಾಡಬೇಕು ಎಂಬ ಆಲೋಚನೆ ನಿಮಗೆ ಇದ್ದರೆ ನೀವು ಈಗ ಮನೆಯಲ್ಲಿಯೇ ಸುಲಭವಾಗಿ ಬಿಎಸ್ಎನ್ಎಲ್ ಕಾರ್ಡ್ ಪಡೆಯುವ ಅವಕಾಶ ಇದೆ.
ತನ್ನ ಬಳಕೆದಾರರ ಅನುಕೂಲಕ್ಕಾಗಿ BSNL, SIM ಕಾರ್ಡ್ ವಿತರಣೆ ಸೇವೆಯನ್ನು ಪ್ರಾರಂಭಿಸಿದೆ. ಹೊಸ SIM ಕಾರ್ಡ್ ಬೇಕಾದರೆ ಅಥವಾ ಹಳೆಯ ನಂಬರ್ ಅನ್ನು BSNL ಗೆ ಪೋರ್ಟ್ ಮಾಡಬೇಕಾದರೆ, ನೀವು ಎಲ್ಲಿಗೂ ಹೋಗುವ ಅಗತ್ಯವಿಲ್ಲ. ಯಾಕೆಂದರೆ BSNL, SIM ಕಾರ್ಡ್ ಅನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೆ.
ಈ ಸುಲಭ ಹಂತಗಳನ್ನು ಅನುಸರಿಸಿ ನೀವು ಬಿಎಸ್ಎನ್ಎಲ್ ಸಿಮ್ ಪಡೆಯಬಹುದು.
ಇದನ್ನು ಓದಿ : Special news : ಇಲ್ಲಿ ಮದುವೆಗೂ ಮುಂಚೆಯೇ ತಾಯಿ ಆಗ್ತಾರೆ ಹೆಣ್ಣು ಮಕ್ಕಳು ; ಭಾರತದ ಈ ಜನಾಂಗದಲ್ಲಿದೆ ವಿಚಿತ್ರ ಸಂಪ್ರದಾಯ.!
ನೀವು BSNL ಗೆ ಪೋರ್ಟ್ ಮಾಡಬೇಕು ಅಥವಾ ಹೊಸ SIM ಕಾರ್ಡ್ ಅನ್ನು ಖರೀದಿಸಬೇಕು ಅಂದರೆ, Prune ಆಪ್ ಅನ್ನು ಬಳಸಿ, ಅಥವಾ BSNL ವೆಬ್‌ಸೈಟ್ ಮೂಲಕ SIM ಕಾರ್ಡ್ ಅನ್ನು ಬುಕಿಂಗ್ ಮಾಡಬಹುದು.
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪ್ರೂನ್ ಆಪ್ ಅನ್ನು ಡೌನ್‌ಲೋಡ್ ಮಾಡಿ ಅಥವಾ https://prune.co.in/mno-bsnl/ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಬ್ರೌಸರ್ನಲ್ಲಿ ಹೋಗಿ.
ನಿಮ್ಮ ಮೊಬೈಲ್ ನಂಬರ್ ಟೈಪ್ ಮಾಡಿ, OTP ಅನ್ನು ದೃಢೀಕರಿಸಿ. ಇದು ನಿಮ್ಮನ್ನು ಪ್ಲಾಟ್‌ಫಾರ್ಮ್‌ಗೆ ನೋಂದಾಯಿಸುತ್ತದೆ.
ಇದನ್ನು ಓದಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ 215 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ನೀವು ನಿಮ್ಮ ಹೆಸರು, ವಿಳಾಸ ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಸರಿಯಾಗಿ ಟೈಪ್ ಮಾಡಿ. ನೀವು ಹೊಸ ಸಿಮ್ ಕಾರ್ಡ್ ಬೇಕೋ ಅಥವಾ ಹಳೆಯ ನಂಬರ್ ಅನ್ನು ಪೋರ್ಟ್ ಮಾಡಬೇಕೋ ಆಯ್ಕೆ ಮಾಡಿ. ನಿಮಗೆ ಬೇಕಾದ ಟ್ಯಾರಿಫ್ ಪ್ಲಾನ್ ಅನ್ನು ಆಯ್ಕೆ ಮಾಡಿ.
ಆನ್‌ಲೈನ್ ಪಾವತಿ ವಿಧಾನಗಳಾದ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಇತರ ಡಿಜಿಟಲ್ ವಾಲೆಟ್‌ಗಳನ್ನು ಬಳಸಿ ಪಾವತಿ ಮಾಡಿ.
ನಿಮ್ಮ ಆರ್ಡರ್ ಅನ್ನು ಪರಿಶೀಲಿಸಿ ಮತ್ತು ದೃಢೀಕರಿಸಿ. ನಿಮ್ಮ ಆರ್ಡರ್ ಸಂಖ್ಯೆಯನ್ನು ನೋಟ್ ಮಾಡಿ. ಕೆಲವು ದಿನಗಳಲ್ಲಿ, ನಿಮ್ಮ ಹೊಸ BSNL ಸಿಮ್ ಕಾರ್ಡ್ ನಿಮ್ಮ ಮನೆಗೆ ತಲುಪುತ್ತದೆ.
ಇದನ್ನು ಓದಿ : ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ : ಕೊನೆಯ ದಿನಾಂಕ ಯಾವತ್ತು.? ಡೈರೆಕ್ಟ್ link ಇಲ್ಲಿದೆ.
ಗಾಜಿಯಾಬಾದ್, ಗುರುಗ್ರಾಮ್ ಮತ್ತು ತಿರುವನಂತಪುರಂ ಈ ನಗರಗಳಲ್ಲಿ ನೀವು ಉಚಿತವಾಗಿ ಬಿಎಸ್ಎನ್ಎಲ್ ಕಾರ್ಡ್ ವಿತರಣೆ ಸಿಗಲಿದೆ.
ಗಾಜಿಯಾಬಾದ್ ಮತ್ತು ಗುರುಗ್ರಾಮ್ ನಗರಗಳಲ್ಲಿರುವವರು Prune ಆಪ್ ಬಳಸಿ SIM ಕಾರ್ಡ್ ಪಡೆಯಬಹುದು ಹಾಗೂ ತಿರುವನಂತಪುರಂ ನಲ್ಲಿರುವವರು LILO ಆಪ್ ಬಳಸಿ SIM ಕಾರ್ಡ್ ಪಡೆಯಬಹುದು.