Monday, October 7, 2024
spot_img
spot_img
spot_img
spot_img
spot_img
spot_img
spot_img

BSNL ಸಖತ್ ಆಫರ್ : ದಿನಕ್ಕೆ 6 ರೂ.ಗೆ 1.5 GB ಡೇಟಾ, ಅನ್ ಲಿಮಿಟೆಡ್ ಕರೆ & 100 SMS.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬಿಎಸ್ಎನ್ಎಲ್ ಭಾರತದ ಅತಿದೊಡ್ಡ ದೂರಸಂಪರ್ಕ ಸೇವಾ ಸಂಸ್ಥೆ ಆಗಿದೆ. ದೇಶದ ಮೂಲೆಮೂಲೆಗಳಲ್ಲಿ ಜನರಿಗೆ ದೂರವಾಣಿ ಸಂಪರ್ಕ ಹಾಗೂ ಇಂಟರ್ನೆಟ್ ಮತ್ತು ಇತರ ಸಂವಹನ ಸೇವೆಗಳನ್ನು ಒದಗಿಸುತ್ತಿದೆ.

ಇದನ್ನು ಓದಿ : ಹೆಡ್ ಕಾನ್ಸ್‌ಟೇಬಲ್ ನಿಂದ ಮೊಬೈಲ್ ನಂಬರ್, ಟವರ್ ಲೋಕೇಶನ್ ಮಾಹಿತಿ ಸೋರಿಕೆ.!

ಈಗ ಎಲ್ಲ ಪ್ರೈವೇಟ್ ಟೆಲಿಕಾಂ ಕಂಪನಿಗಳು ರೀಚಾರ್ಜ್ ದರವನ್ನು ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಈಗ ಜನಸಾಮಾನ್ಯರು ಬಿಎಸ್ಎನ್ಎಲ್ ನತ್ತ ಮುಖ ಮಾಡಿದ್ದಾರೆ.

ದುಬಾರಿ ರೀಚಾರ್ಜ್ ಪ್ಲಾನ್, ಕಾಲ್ ಡ್ರಾಪ್ ಸೇರಿದಂತೆ ಇತರ ಸಮಸ್ಯೆಗಳಿಂದ ರೋಸಿ ಹೋದ ಗ್ರಾಹಕರು ಬಿಎಸ್‌ಎನ್ಎಲ್‌ನತ್ತ ಆಗಮಿಸುತ್ತಿದ್ದಾರೆ. ಶೀಘ್ರದಲ್ಲೇ ಬಿಎಸ್‌ಎನ್ಎಲ್ 5ಜಿ ಸೇವೆಯನ್ನು ಸಾರ್ವಜನಿಕರಿಗೆ ಮುಕ್ತ ಮಾಡಲಿದೆ. ಇದರಿಂದ ಇತರ ಟೆಲಿಕಾಂ ಸರ್ವೀಸ್ ಕಂಪನಿಗಳಿಗೆ ನಡುಕ ಶುರುವಾಗಿದೆ.

ಇದನ್ನು ಓದಿ : Health : ತಾಮ್ರದ ಬಾಟಲಿಯಲ್ಲಿ ನೀರು ಕುಡಿಯುವವರೇ ಈ ಸುದ್ದಿಯನ್ನೊಮ್ಮೆ ಓದಿ.

BSNL ಸಹ ತನ್ನ ಗ್ರಾಹಕರಿಗೆ ಬಂಪರ್ ಕೊಡುಗೆಗಳನ್ನು ನೀಡುತ್ತಿದೆ. ದಿನಕ್ಕೆ 6 ರೂಪಾಯಿಗೆ 1.5 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್, 100 SMS ಸೇವೆ ನೀಡುತ್ತಿದೆ.

82 ದಿನಗಳನ್ನು ಲೆಕ್ಕಹಾಕಿದರೆ ಪ್ರತಿ ದಿನ 5.91 ರೂಪಾಯಿ ಪ್ಲಾನ್ ಇದಾಗಿದೆ. 82 ದಿನದ ವ್ಯಾಲಿಟಿಡಿಯ ಹೊಸ ಪ್ಲಾನ್ ಬೆಲೆ 485 ರೂಪಾಯಿ. ಬೆಲೆ ದುಬಾರಿ ಎಂದು ಎನಿಸಿದರೂ ಲೆಕ್ಕ ಹಾಕಿದರೆ ಸದ್ಯ ಇರುವ ಪ್ಲಾನ್‌ಗಳ ಪೈಕಿ ಇದು ಕಡಿಮೆ ಬೆಲೆಯ ಪ್ಲಾನ್ ಆಗಿದೆ. ಕಾರಣ ಸರಿಸುಮಾರು 3 ತಿಂಗಳ ಪ್ಲಾನ್ ಇದು.

ಇದನ್ನು ಓದಿ : Special news : ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?

ಒಮ್ಮೆ ರೀಚಾರ್ಜ್ ಮಾಡಿದರೆ 82 ದಿನಗಳವರೆಗೆ ಯಾವುದೇ ಟೆನ್ಶನ್ ಇರುವುದಿಲ್ಲ. ಆ್ಯಪ್ ಡೌನ್ಲೋಡ್ ಮಾಡಿಕೊಂಡು, ಬಿಎಸ್‌ಎನ್ಎಲ್ ಮೊಬೈಲ್ ನಂಬರ್ ಮೂಲಕ ರಿಜಿಸ್ಚ್ರೇಶನ್ ಮಾಡಿಕೊಳ್ಳಬೇಕು. ಒಟಿಪಿ ನಮೂದಿಸಿ ಹೊಸ ಪ್ಲಾನ್ ಆಯ್ಕೆ ಮಾಡಿಕೊಂಡರೆ 82 ದಿನ ಟೆನ್ಶನ್ ಫ್ರೀ. ಈ ಪ್ಲಾನ್ ಆಯ್ಕೆ ಮಾಡಿಕೊಂಡರೆ ರೋಮಿಂಗ್ ಫ್ರೀ. ಬಿಎಸ್‌ಎನ್ಎಲ್ ಗ್ರಾಹಕರು ಅಧಿಕೃತ ಸೆಲ್ಫ್ ಕೇರ್ ಆ್ಯಪ್ ಮೂಲಕ ಈ ಪ್ಲಾನ್ ರೀಚಾರ್ಜ್ ಮಾಡಿಕೊಳ್ಳಲು ಅವಕಾಶವಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img