Sunday, September 15, 2024
spot_img
spot_img
spot_img
spot_img
spot_img
spot_img
spot_img

ಇದೀಗ ಹೊಸ ಆಫರ್ ಘೋಷಿಸಿದ BSNL ; ಗ್ರಾಹಕರು ಪುಲ್ ಖುಷ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಜಿಯೋ, ಏರ್‌ಟೆಲ್, ವಿಐ ಟೆಲಿಕಾಂ ಸೇವೆ ಒದಗಿಸುತ್ತಿರುವ ಕಂಪನಿಗಳು ಈಗಾಗಲೇ ಗ್ರಾಹಕರಿಗೆ ಅನ್‌ಲಿಮಿಟೆಡ್ ಕಾಲ್, ಡೇಟಾ ಸೇರಿದಂತೆ ಇತರ ಆಫರ್ ನೀಡುತ್ತಿದೆ.

ಇದರ ನಡುವೆ ಬಿಎಸ್‌ಎನ್‌ಎಲ್ ಮಹತ್ವದ ಬದಲಾವಣೆಯೊಂದಿಗೆ ಎಂಟ್ರಿಕೊಟ್ಟಿದೆ. ಇದೀಗ ಹೊಸ ಆಫರ್ ಘೋಷಿಸಿದ್ದು, ಕೇವಲ 397 ರೂಪಾಯಿಗೆ 150 ದಿನಗಳ ವ್ಯಾಲಿಟಿಡಿ ನೀಡಿದೆ. ಇಷ್ಟೇ ಅಲ್ಲ ಅನ್‌ಲಿಮಿಟೆಡ್ ಕಾಲ್ಸ್ ಹಾಗೂ ಡೇಟಾ ಆಫರ್ ಕುರಿತು ಮಹತ್ವದ ಘೋಷಣೆ ಮಾಡಿದೆ.

ಇದನ್ನು ಓದಿ : ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.!

ಬಿಎಸ್‌ಎನ್‌ಎಲ್ ಸದ್ಯ ಘೋಷಿಸಿರುವ 397 ರೂಪಾಯಿ ಪ್ಲಾನ್‌ನಲ್ಲಿ ಹಲವು ವಿಶೇಷತೆಗಳಿವೆ. ಈ ಪ್ಲಾನ್ ರಿಚಾರ್ಜ್ ಮಾಡಿದ್ದಲ್ಲಿ, ಆರಂಭಿಕ 30 ದಿನ ಗ್ರಾಹಕರಿಗೆ ಅನ್‌ಲಿಮಿಟೆಡ್ ಕಾಲ್ಸ್ ಸೌಲಭ್ಯ ಸಿಗಲಿದೆ.

ಆರಂಭಿಕ 30 ದಿನ ಪ್ರತಿ ದಿನ 2 ಜಿಬಿಯಂತೆ ಒಟ್ಟು 60 ಜಿಬಿ ಡೇಟಾ ಸಿಗಲಿದೆ. ಆರಂಭಿಕ 30 ದಿನ ಪ್ರತಿ ದಿನ 100 ಎಸ್‌ಎಂಎಸ್ ಉಚಿತವಾಗಿ ಸಿಗಲಿದೆ.

ಇದನ್ನು ಓದಿ : Health : ಅಮೃತಬಳ್ಳಿಯಿಂದಾಗುವ ಆರೋಗ್ಯ ಪ್ರಯೋಜನಗಳು.!

150 ದಿನ ದೇಶಾದ್ಯಂತ ರೋಮಿಂಗ್ ಶುಲ್ಕ ಇರುವುದಿಲ್ಲ. 150 ದಿನ ವ್ಯಾಲಿಟಿಡಿ ಕಾರಣ, ಇನ್‌ಕಮಿಂಗ್ ಕಾಲ್‌ಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.

ಅನ್‌ಲಿಮಿಟೆಡ್ ಕಾಲ್ಸ್ ಅವಧಿ ಮುಗಿದರೆ ಕಡಿಮೆ ಬೆಲೆಗೆ ಟಾಪ್ ಅಪ್ ಅವಕಾಶವನ್ನು ನೀಡಲಾಗಿದೆ. ಇದು ಡೇಟಾ ರಿಚಾರ್ಜ್‌ಗೂ ಅನ್ವಯಿಸಲಿದೆ.

ಇದನ್ನು ಓದಿ : ನಾಗರ ಹಾವನ್ನು ಪ್ರೀತಿಯಿಂದ ಮುದ್ದಿಸಲು ಬಂದ ಎಮ್ಮೆ ; ಮುಂದೆನಾಯ್ತು.? ಈ ವಿಡಿಯೋ ನೋಡಿ.!

ಐದು (150 ದಿನ) ತಿಂಗಳಿಗೆ 397 ರೂಪಾಯಿ ರಿಚಾರ್ಜ್ ಮಾಡಿದರೆ ಪ್ರತಿ ತಿಂಗಳಿಗೆ ಸರಾಸರಿ 80 ರೂಪಾಯಿ ರೀಚಾರ್ಜ್ ಮಾಡಿದಂತೆ ಆಗಲಿದೆ. ಇದು ಸದ್ಯ ದೇಶದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ ಪ್ಲಾನ್ ಆಗಿದೆ.

ಬಿಎಸ್‌ಎನ್‌ಎಲ್ ಈಗಾಗಲೇ 4ಜಿ ಸೇವೆಯನ್ನು ಜಾರಿಗೊಳಿಸಿದೆ. ಖಾಸಗಿ ಕಂಪನಿಗಳ ಪೈಪೋಟಿಯಿಂದ ಸೊರಗಿದ್ದ ಬಿಎಸ್‌ಎನ್‌ಎಲ್‌ಗೆ ಹೊಸ ಜೀವಕಳೆ ನೀಡಲಾಗಿದೆ.

ಕೇಂದ್ರ ಸರ್ಕಾರ ಭರ್ಜರಿ ಹೂಡಿಕೆ ಮಾಡಿ ಟೆಲಿಕಾಂ ಸೇವೆಯನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಬದಲಿಸಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img