ಜನಸ್ಪಂದನ ನ್ಯೂಸ್, ಡೆಸ್ಕ್ : BSNL ಗ್ರಾಹಕರಿಗೆಲ್ಲಾ ಕೂಡ ಇದೊಂದು ರೀತಿಯ ಸಂತಸದ ಸುದ್ದಿಯೇ ಸರಿ. ಬಿಎಸ್ಎನ್ಎಲ್ BSNL ಕಂಪನಿಯು ತನ್ನ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ಅವರಿಗೆ ಪ್ರಯೋಜನ ಆಗುವಂತಹ ರೀತಿಯ ರೀಚಾರ್ಜ್ ಪ್ಲಾನ್ ಗಳನ್ನು ಜಾರಿಗೆ ತರುತ್ತಿದೆ.
ಅದೇ ರೀತಿಯಲ್ಲಿ ಈ ಬಾರಿಯು ಸಹ ಬಿಎಸ್ಎನ್ಎಲ್ BSNL ಕಂಪನಿಯು ಅತೀ ಅಗ್ಗದ ರೀಚಾರ್ಜ್ ಪ್ಲಾನ್ ಗಳನ್ನು ಜಾರಿಗೊಳಿಸಿದೆ, ಇದರ ಬಗ್ಗೆ ಪೂರ್ತಿ ಮಾಹಿತಿ ಕೆಳಗೆ ವಿವರಿಸಲಾಗಿದೆ.
ಇದನ್ನು ಓದಿ : 10ನೇ ತರಗತಿ ಪಾಸಾದವರಿಗೆ ಯಾವುದೇ ಪರೀಕ್ಷೆ ಇಲ್ಲದೇ Railway ಇಲಾಖೆಯಲ್ಲಿ ಉದ್ಯೋಗಾವಕಾಶ.!
ಸದ್ಯ ಮೊಬೈಲ್ ಬಳಕೆದಾರರಿಗೆ ಗೊತ್ತಿರುವಂತೆ ರಿಲಾಯನ್ಸ್ ಜಿಯೋ ಸೇರಿ ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್ ಬೆಲೆಯನ್ನು ಏರಿಸಿವೆ.
ಬೆಲೆ ಏರಿಕೆಯ ಬಿಸಿಯಿಂದ ಬಳಕೆದಾರರು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ನತ್ತ ಮುಖ ಮಾಡಿದ್ದಾರೆ. ಮಾತ್ರವಲ್ಲದೆ ಉತ್ತಮ ರೀಚಾರ್ಜ್ಗಳನ್ನು ಆಯ್ಕೆ ಮಾಡುವ ಮೂಲಕ ರೀಚಾರ್ಜ್ ಮಾಡುತ್ತಿದ್ದಾರೆ.
ಬಿಎಸ್ಎನ್ಎಲ್ 229 ರೂಪಾಯಿಯ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಭಾರೀ ಜನಪ್ರಿಯತೆ ಪಡೆಯುತ್ತಿದೆ. ಇದರ ಮೂಲಕ 30 ದಿನಗಳವರೆಗೆ ಬಳಕೆದಾರರು ಯಾವುದೇ ನೆಟ್ವರ್ಕ್ಗೆ ಉಚಿತ ಕರೆ ಮಾಡಬಹುದಾಗಿದೆ.
ಇದನ್ನು ಓದಿ : Health : ಊಟದ ಬಳಿಕ ಅಥವಾ ಊಟದ ಮಧ್ಯದಲ್ಲಿ ನೀರು ಕುಡಿತೀರಾ? ಹಾಗಿದ್ರೆ ಈ ಸುದ್ದಿ ಓದಿ.!
229 ರೂ. ರೀಚಾರ್ಜ್ ಪ್ಲಾನ್ ಮೂಲಕ ಅನಿಯಮಿತ ಮತ್ತು ಸ್ಥಳೀಯ ಕರೆಗಳನ್ನು ಬಿಎಸ್ಎನ್ಎಲ್ ಉಚಿತವಾಗಿ ನೀಡುತ್ತಿದೆ. ಜೊತೆಗೆ ಡೇಟಾ ಪ್ರಯೋಜನ ಕೂಡ ಇದರಲ್ಲಿದೆ. ಈ ಯೋಜನೆಯನ್ನು ಅಳವಡಿಸಿಕೊಂಡವರು 60ಜಿಬಿ ಡೇಟಾ ಪಡೆಯುತ್ತಾರೆ. ಅಂದರೆ ಪ್ರತಿದಿನ 2ಜಿಬಿ ಡೇಟಾ ಒದಗಿಸುತ್ತದೆ. ಅಲ್ಲದೇ ಪ್ರತಿದಿನ 100 ಎಸ್ಎಮ್ಎಸ್ ಉಚಿತವಾಗಿ ಸಿಗುತ್ತದೆ.