ಜನಸ್ಪಂದನ ನ್ಯೂಸ್, ಡೆಸ್ಕ್ : BSNL ಗ್ರಾಹಕರಿಗೆಲ್ಲಾ ಕೂಡ ಇದೊಂದು ರೀತಿಯ ಸಂತಸದ ಸುದ್ದಿಯೇ ಸರಿ. ಬಿಎಸ್ಎನ್ಎಲ್ BSNL ಕಂಪನಿಯು ತನ್ನ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ಅವರಿಗೆ ಪ್ರಯೋಜನ ಆಗುವಂತಹ ರೀತಿಯ ರೀಚಾರ್ಜ್ ಪ್ಲಾನ್ ಗಳನ್ನು ಜಾರಿಗೆ ತರುತ್ತಿದೆ.
ಸದ್ಯ ಮೊಬೈಲ್ ಬಳಕೆದಾರರಿಗೆ ಗೊತ್ತಿರುವಂತೆ ರಿಲಾಯನ್ಸ್ ಜಿಯೋ ಸೇರಿ ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್ ಬೆಲೆಯನ್ನು ಏರಿಸಿವೆ. ಬೆಲೆ ಏರಿಕೆಯ ಬಿಸಿಯಿಂದ ಬಳಕೆದಾರರು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ನತ್ತ ಮುಖ ಮಾಡಿದ್ದಾರೆ.
ಇದನ್ನು ಓದಿ : Police ಪರೀಕ್ಷೆ ಬರೆಯಲು ಹೋದ ಪತಿ : ಬಾಯ್ ಫ್ರೆಂಡ್ ನನ್ನು ಮನೆಗೆ ಕರೆದ ಪತ್ನಿ; ಮುಂದೆನಾಯ್ತು ಗೊತ್ತಾ.?
ಮಾತ್ರವಲ್ಲದೆ ಉತ್ತಮ ರೀಚಾರ್ಜ್ಗಳನ್ನು ಆಯ್ಕೆ ಮಾಡುವ ಮೂಲಕ ರೀಚಾರ್ಜ್ ಮಾಡುತ್ತಿದ್ದಾರೆ. ಅದರಲ್ಲೂ 200 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುವ ಯೋಜನೆಗಳ ಮೊರೆ ಹೋಗುತ್ತಿದ್ದಾರೆ.
ಅದೇ ರೀತಿಯಲ್ಲಿ ಈ ಬಾರಿಯು ಸಹ ಬಿಎಸ್ಎನ್ಎಲ್ BSNL ಕಂಪನಿಯು ಅಗ್ಗದ ರೀಚಾರ್ಜ್ ಪ್ಲಾನ್ ಗಳನ್ನು ಜಾರಿಗೊಳಿಸಿದೆ. ಸದ್ಯ ಬಿಎಸ್ಎನ್ಎಲ್ನ ಕಡಿಮೆ ಬೆಲೆಯ ಯೋಜನೆಯೊಂದು ಗ್ರಾಹಕರ ಮನಗೆದ್ದಿದೆ. ಹಾಗಿದ್ರೆ ಆ ಯೋಜನೆ ಯಾವುದು?
ಇದನ್ನು ಓದಿ : ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಅಕ್ಬರ್ ಪಾಷಾ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್.!
ಇದರ ಬಗ್ಗೆ ಪೂರ್ತಿ ಮಾಹಿತಿ ಕೆಳಗೆ ವಿವರಿಸಲಾಗಿದೆ.
ಬಿಎಸ್ಎನ್ಎಲ್ನ 197 ರೂಪಾಯಿಯ ಪ್ರಿಪೇಯ್ಡ್ ಯೋಜನೆ ಗ್ರಾಹಕರ ಮನಗೆದ್ದ ಯೋಜನೆಗಳಲ್ಲಿ ಒಂದು. ಇದು 70 ದಿನಗಳ ಸಿಂಧುತ್ವ ಹೊಂದಿದೆ. ಯೋಗ್ಯ ಶ್ರೇಣಿಯ ಪ್ರಯೋಜನವನ್ನು ನೀಡುತ್ತಿದೆ.
197 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ ಮೂಲಕ ಪ್ರತಿ ದಿನ 2GB ಡೇಟಾದಂತೆ 15 ದಿನ ನೀಡುತ್ತದೆ. ಜೊತೆಗೆ ಪ್ರತಿದಿನ 100 ಎಸ್ಎಮ್ಎಸ್ನಂತೆ 15 ದಿನಗಳ ಕಾಲ ಈ ಸೌಲಭ್ಯ ಬಳಸಬಹುದಾಗಿದೆ. ರೀಚಾರ್ಜ್ ಪ್ಲಾನ್ ಅಳವಡಿಸಿಕೊಂಡ 15 ದಿನಗಳ ಬಳಿಕ ಡೇಟಾ ಸ್ಪೀಡ್ 40kbpsಗೆ ಇಳಿಯುತ್ತದೆ.
ಇದನ್ನು ಓದಿ : 1995ರಲ್ಲಿ ಹೇಗಿತ್ತು ಗೊತ್ತಾ ಬೆಂಗಳೂರು ನಗರ ; ಅಚ್ಚರಿ ಮೂಡಿಸುತ್ತದೆ ಈ Video.?
ಲೋಕಲ್ ಮತ್ತು ಎಸ್ಟಿಡಿ ಅನಿಯಮಿತ ಕರೆ ಆನಂದಿಸಬಹುದು. ಇದಲ್ಲದೆ ಜಿಂಗ್ ಮ್ಯೂಸಿಕ್ ಪ್ರವೇಶ ಪಡೆಯಬಹುದಾಗಿದೆ. ಸದ್ಯ ಬಜೆಟ್ ಬೆಲೆಯಲ್ಲಿ ಗಮನಿಸಿದರೆ ಈ ಪ್ಲಾನ್ ಉತ್ತಮ ಎನ್ನಬಹುದು.