Sunday, September 15, 2024
spot_img
spot_img
spot_img
spot_img
spot_img
spot_img
spot_img

Health : ಬೆಳಿಗ್ಗೆ ಲವಂಗ ನೆನೆಸಿದ ನೀರು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳಲ್ಲಿ ಲವಂಗ ಕೂಡ ಒಂದು. ಕೆಲವೊಂದು ಸಿಹಿ ಪದಾರ್ಥಗಳಲ್ಲಿ ಕಡ್ಡಾಯವಾಗಿ ಲವಂಗಗಳನ್ನು ಹಾಕಲಾಗುತ್ತದೆ. ಅದೇ ರೀತಿ ಮಸಾಲೆ ಹೊಂದಿರುವ ಅಡುಗೆಗಳಲ್ಲಿ ಲವಂಗ ಇದ್ದೇ ಇರುತ್ತದೆ.

ಅಪಾರವಾದ ವಿಟಮಿನ್ ಅಂಶಗಳು, ಖನಿಜಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ಒಳಗೊಂಡಿರುವ ಲವಂಗ ನಮಗೆ ವಿಧವಿಧವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಇದನ್ನು ಓದಿ : ‌ಸೀಮಂತದ ದಿನವೇ ಪತ್ನಿಯ ಅನೈತಿಕ ಸಂಬಂಧದ ವಿಡಿಯೋ ಅತಿಥಿಗಳ ಮುಂದೆ Leak ಮಾಡಿದ ಪತಿ.!

ಇನ್ನೂ ಲವಂಗ ನೀರಿನಲ್ಲಿ ನೆನೆಸಿ ಆ ನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ.

ನೀರಿನಲ್ಲಿ ನೆನೆಸಿದ ಲವಂಗಗಳನ್ನು ಸೇವನೆ ಮಾಡುವುದರಿಂದ ನಮ್ಮ ಚರ್ಮದ ಮೇಲಿನ ಮೊಡವೆಗಳು, ವಯಸ್ಸಾಗುವಿಕೆ ಪ್ರಕ್ರಿಯೆ ಮತ್ತು ಚರ್ಮದಲ್ಲಿನ ದದ್ದುಗಳು ನಿವಾರಣೆಯಾಗುತ್ತದೆ. ಮುಖ್ಯವಾಗಿ ಚರ್ಮದ ಆರೋಗ್ಯವನ್ನು ಹಾಳು ಮಾಡುವ ಬ್ಯಾಕ್ಟೀರಿಯಾವನ್ನು ಲವಂಗ ನಾಶಪಡಿಸುತ್ತೆ.

ಲವಂಗವು ನಮ್ಮ ರಕ್ತದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುವ ಗುಣ ಪಡೆದಿದ್ದು, ಗ್ಲುಕೋಸ್ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ. ಸಕ್ಕರೆ ಕಾಯಿಲೆಯ ನಿರ್ವಹಣೆಯಲ್ಲಿ ಸಹಾಯ ಮಾಡುವ ಲವಂಗಗಳು ಬ್ಲಡ್ ಶುಗರ್ ಹೆಚ್ಚಾಗದಂತೆ ನೋಡಿಕೊಳ್ಳುತ್ತವೆ.

ಇದನ್ನು ಓದಿ : Health : ಕಾಲಿನಲ್ಲಿ ಈ ಲಕ್ಷಣ ಕಾಣಿಸಿಕೊಳ್ಳುತ್ತಿವೆಯೇ? ಇವು ಈ ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು.?

ಲವಂಗದ ನೀರು ಬಾಯಲ್ಲಿನ ಬ್ಯಾಕ್ಟೀರಿಯಗಳನ್ನು ನಾಶಪಡಿಸುವಲ್ಲಿ ಸಹಾಯ ಮಾಡಿ ಬಾಯಿಯ ಸ್ವಚ್ಛತೆಯನ್ನು ನಿರ್ವಹಣೆ ಮಾಡುವ ಜೊತೆಗೆ ಕೆಟ್ಟ ಉಸಿರಾಟವನ್ನು ದೂರ ಮಾಡುತ್ತದೆ. ಹಲ್ಲುಗಳ ಮತ್ತು ವಸಡುಗಳ ಸಮಸ್ಯೆ ಯನ್ನು ಹೋಗಲಾಡಿಸುವ ಜೊತೆಗೆ ನಮ್ಮ ಸಂಪೂರ್ಣ ಆರೋಗ್ಯದ ರಕ್ಷಣೆಯಲ್ಲಿ ನೆರವಾಗುತ್ತವೆ.

ವಿಟಮಿನ್ ಮತ್ತು ಖನಿಜಾಂಶಗಳು ಹೆಚ್ಚು
ಲವಂಗಗಳನ್ನು ನೀರಿನಲ್ಲಿ ಹಾಕಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ವಿಟಮಿನ್ ಸಿ ಮತ್ತು ಮ್ಯಾಂಗನೀಸ್ ಪ್ರಮಾಣ ಹೆಚ್ಚಾಗಿ ಸಿಗುತ್ತದೆ. ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ವಿವಿಧ ಬಗೆಯ ಸೋಂಕುಗಳನ್ನು ಕಡಿಮೆ ಮಾಡಿ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.

ಇದನ್ನು ಓದಿ : ವಿದ್ಯುತ್‌ ಇಲಾಖೆ (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ) ಯಲ್ಲಿ ಖಾಲಿ ಇರುವ 1,000+ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಲವಂಗಗಳ ಸಾರ ಇರುವ ನೀರನ್ನು ಕುಡಿಯುವುದರಿಂದ ನಮ್ಮ ಉಸಿರಾಟ ವ್ಯವಸ್ಥೆ ಅಚ್ಚುಕಟ್ಟಾಗಿರುತ್ತದೆ. ಎದೆಯಲ್ಲಿನ ಕಫ ಕರಗುವುದರ ಜೊತೆಗೆ ಶ್ವಾಸ ಕೋಶದ ಆರೋಗ್ಯ ಕೂಡ ಚೆನ್ನಾಗಿ ಆಗುತ್ತದೆ. ಇದರಿಂದ ಉತ್ತಮ ಉಸಿರಾಟ ವ್ಯವಸ್ಥೆ ನಮ್ಮದಾಗುತ್ತದೆ.

ನೀರಿನಲ್ಲಿ ನೆನೆ ಹಾಕುವುದರಿಂದ ಲವಂಗಗಳಲ್ಲಿ ನೋವು ನಿವಾರಕ ಗುಣಗಳು ಹೆಚ್ಚಾಗುತ್ತವೆ. ಈ ರೀತಿ ನೀರಿನಲ್ಲಿ ನೆನೆಸಿದ ಲವಂಗಗಳನ್ನು ಸೇವಿಸುವುದರಿಂದ ತಲೆನೋವು, ಹಲ್ಲು ನೋವು ಮತ್ತು ಮಾಂಸಖಂಡಗಳ ನೋವು ಮತ್ತು ಸೆಳೆತ ದೂರವಾಗುತ್ತದೆ.

ಇದನ್ನು ಓದಿ : Onlineನಲ್ಲಿ ಖರೀದಿಸಿದ ಅಂಡರ್ವೇರ್ ಧರಿಸಿದ್ಮೇಲೆ ನನ್ನ ಮಗಳು ಪ್ರೆಗ್ನೆಂಟ್ ಆಗಿದ್ದಾಳೆ ಎಂದು ಕೋರ್ಟ್ ಮೆಟ್ಟಿಲೇರಿದ ತಾಯಿ.!

ನಮ್ಮ ದೇಹದ ಉರಿಯುತವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತವೆ. ನಮ್ಮ ಮೂಳೆಗಳಿಗೆ ಸಂಬಂಧಪಟ್ಟಂತೆ ಕಂಡುಬರುವ ಆರ್ಥ್ರೈಟಿಸ್ ಮತ್ತು ವಿವಿಧ ಬಗೆಯ ಕೀಲು ಹಾಗೂ ಮಾಂಸ ಖಂಡಗಳ ನೋವನ್ನು ಗುಣಪಡಿಸುವಲ್ಲಿ ನೆರವಿಗೆ ಬರುತ್ತವೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img