Saturday, November 9, 2024
spot_imgspot_img
spot_img
spot_img
spot_img
spot_img
spot_img

Belagavi : ಬೆಳಗಾವಿ- ಮೀರಜ್​ ವಿಶೇಷ ರೈಲು ಸೇವೆ ಇನ್ನಷ್ಟು ದಿನ ವಿಸ್ತರಣೆ.!

WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಳಗಾವಿ : ಪ್ರಯಾಣಿಕರ ಆಗ್ರಹದ ಮೇರೆಗೆ ಬೆಳಗಾವಿಯಿಂದ-ಮೀರಜ್​ ಮತ್ತು ಮೀರಜ್​ನಿಂದ ಬೆಳಗಾವಿ ಮಧ್ಯೆ ಸಂಚರಿಸುವ ವಿಶೇಷ ರೈಲು ಸೇವೆ ವಿಸ್ತರಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಯಲ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಎಷ್ಟು ದಿನಗಳ ಕಾಲ ವಿಸ್ತರಿಸಲಾಗಿದೆ ಎಂಬ ವಿವರ ಈ ಕೆಳಗಿನಂತಿದೆ.

ಬೆಳಗಾವಿ- ಮೀರಜ್ (ರೈಲು ಸಂಖ್ಯೆ 07301),
ಮೀರಜ್​ -ಬೆಳಗಾವಿ (07302),
ಬೆಳಗಾವಿ- ಮೀರಜ್​ (07303),
ಮೀರಜ್- ಬೆಳಗಾವಿ (07304) ವಿಶೇಷ ರೈಲು ಓಡಾಟವನ್ನು ಆಗಸ್ಟ್​ 5 ರಿಂದ 10ರವರೆಗೆ ವಿಸ್ತರಿಸಲಾಗಿದೆ.

ಸಮಯ ಬದಲಾಣೆ
ರೈಲು ಸಂಖ್ಯೆ. 07657 ತಿರುಪತಿ- ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ರೈಲು ಆಗಸ್ಟ್ 5 ಮತ್ತು 7, 2024 ರಂದು ತಿರುಪತಿಯಿಂದ 180 ನಿಮಿಷ ತಡ ಅಥವಾ ಬೇಗ ಹೊರಡುವ ಸಾಧ್ಯತೆ ಇದೆ.

ರೈಲುಗಳ ನಿಯಂತ್ರಣ
ರೈಲು ಸಂಖ್ಯೆ 07658 ಎಸ್‌ಎಸ್‌ಎಸ್ ಹುಬ್ಬಳ್ಳಿ- ತಿರುಪತಿ ಡೈಲಿ ಪ್ಯಾಸೆಂಜರ್ ವಿಶೇಷ, ಆಗಸ್ಟ್ 4, 5 ಮತ್ತು 7, 2024 ರಂದು ಪ್ರಾರಂಭವಾಗುವ ಪ್ರಯಾಣವನ್ನು ರೇಣಿಗುಂಟಾ- ಗೂಟಿ ನಿಲ್ದಾಣಗಳ ನಡುವೆ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ಮಾರ್ಗ ಬದಲಾವಣೆ:
ಜುಲೈ 29, ಆಗಸ್ಟ್ 5 ಮತ್ತು 12 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 11013 ಲೋಕಮಾನ್ಯ ತಿಲಕ್ ಟರ್ಮಿನಸ್ ಕೊಯಮತ್ತೂರು ಡೈಲಿ ಎಕ್ಸ್ ಪ್ರೆಸ್ ರೈಲು ಗೌರಿಬಿದನೂರು, ಬೈಯಪ್ಪನಹಳ್ಳಿ, ಎಸ್‌ಎಂವಿಟಿ ಬೆಂಗಳೂರು, ಬೈಯಪ್ಪನಹಳ್ಳಿ, ಹೊಸೂರು ಮಾರ್ಗದ ಮೂಲಕ ಸಂಚರಿಸಲಿದೆ.

ಹೀಗಾಗಿ ಬೆಂಗಳೂರು ಪೂರ್ವ, ಬೆಂಗಳೂರು ಕಂಟೋನ್ಸೆಂಟ್, ಕೆಎಸ್‌ಆರ್ ಬೆಂಗಳೂರು ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ. ಬೆಂಗಳೂರಿನ ಎಸ್‌ಎಂವಿಟಿಯಲ್ಲಿ ಹೆಚ್ಚುವರಿ ನಿಲುಗಡೆ ಇರಲಿದೆ.

ಆಗಸ್ಟ್ 6 ಮತ್ತು 13 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 06270 ಎಸ್‌ಎಂವಿಟಿ ಬೆಂಗಳೂರು- ಮೈಸೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಎಸ್‌ಎಂವಿಟಿ ಬೆಂಗಳೂರು, ಬಾಣಸವಾಡಿ, ಹೆಬ್ಬಾಳ, ಯಶವಂತಪುರ, ಕೆಎಸ್‌ಆರ್ ಬೆಂಗಳೂರು ಮೂಲಕ ಸಂಚರಿಸಲಿದೆ. ಹೀಗಾಗಿ ಬೆಂಗಳೂರು ಕ್ಯಾಂಟ್ ನಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img