Sunday, December 8, 2024
HomeBelagavi NewsBelagavi : ಹಾಡಹಗಲೇ ಯುವಕನ ಬರ್ಬರ ಹತ್ಯೆ.!
spot_img

Belagavi : ಹಾಡಹಗಲೇ ಯುವಕನ ಬರ್ಬರ ಹತ್ಯೆ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಸವದತ್ತಿ (Savadatti) ತಾಲೂಕಿನ ಮುರಗೋಡ (Muragod) ಗ್ರಾಮದ ಹೊರ ವಲಯದಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆಯಾದ ಘಟನೆ ನಡೆದಿದೆ.

ಎಗ್ ರೈಸ್ ಅಂಗಡಿ (egg rice shop) ಇಟ್ಟುಕೊಂಡಿದ್ದ ಸೋಹಿಲ್ ಅಹ್ಮದ್ ಕಿತ್ತೂರು ಮೃತ ಯುವಕ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಹೆತ್ತಮ್ಮ, ಮಡದಿ, ಮಕ್ಕಳನ್ನು ಕೊಂದ ಅಪರಾಧಿಗೆ ಮರಣದಂಡನೆ ವಿಧಿಸಿದ Court.!

ದುಷ್ಕರ್ಮಿಗಳು (criminals) ಚಾಕುವಿನಿಂದ ಮನಸೋಇಚ್ಛೆ ಎಲ್ಲೆಂದರಲ್ಲಿ ಇರಿದು ಕೊಲೆ ಮಾಡಿದ್ದಾರೆ.

ಐವರು ಯುವಕರು ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದ್ದು, ಈ ಹಿಂದೆ ಸೋಹಿಲ್ ನಿಗೆ ಈ ಯುವಕರು ಕೊಲೆ ಬೆದರಿಕೆ (Death threats) ಹಾಕಿದ್ದರು ಎನ್ನಲಾಗಿದೆ.

ಇದನ್ನು ಓದಿ : Health : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?

ಸ್ಥಳಕ್ಕೆ ಮುರಗೋಡ ಪೊಲೀಸರು (Muragod police station) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು (Dog Guard, Fingerprint Specialist) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಎಂದು ತಿಳಿದು ಬಂದಿದೆ.

ಹಿಂದಿನ ಸುದ್ದಿ : ಹೆತ್ತಮ್ಮ, ಮಡದಿ, ಮಕ್ಕಳನ್ನು ಕೊಂದ ಅಪರಾಧಿಗೆ ಮರಣದಂಡನೆ ವಿಧಿಸಿದ ಕೋರ್ಟ್.!

ಜನಸ್ಪಂದನ ನ್ಯೂಸ್, ಮೈಸೂರು : ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು (5th Additional District and Sessions Court, Mysore), ತನ್ನ ಹೆತ್ತ ತಾಯಿ, ಮಡದಿ ಮತ್ತು ಮಕ್ಕಳನ್ನು ಕೊಂದ ಅಪರಾಧಿಗೆ ಮರಣ ದಂಡನೆ (death penalty) ವಿಧಿಸಿ ತೀರ್ಪು ನೀಡಿದೆ.

ಇದನ್ನು ಓದಿ : Video : ಬೇರೊಬ್ಬನೊಂದಿಗೆ ಸಿಕ್ಕಿಬಿದ್ದ ಪ್ರೇಯಸಿ ; ಗಿಪ್ಟ್ ಕೊಟ್ಟ ಸ್ಕೂಟಿ ವಾಪಸ್ ಕಿತ್ತುಕೊಂಡ ಬಾಯ್‌ಫ್ರೆಂಡ್‌.!

ಸರಗೂರು ಪೊಲೀಸ್ ಠಾಣಾ (Saraguru Police Station) ವ್ಯಾಪ್ತಿಯಲ್ಲಿ 2021ರಲ್ಲಿ ನಡೆದಿದ್ದ ಪ್ರಕರಣದಲ್ಲಿ ಪೊಲೀಸರು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (Charge List) ಸಲ್ಲಿಸಿದ್ದರು.

ಪ್ರಕರಣದ ವಿವರ :
ಶಿಕ್ಷೆಗೊಳಗಾದ ಅಪರಾಧಿ (A convicted felon) ಮಣಿಕಂಠಸ್ವಾಮಿ ಎಂದು ತಿಳಿದು ಬಂದಿದೆ. ಸರಗೂರು ತಾಲೂಕು ಚಾಮೇಗೌಡನಹುಂಡಿ ಗ್ರಾಮದ ನಿವಾಸಿಯಾದ ಮಣಿಕಂಠಸ್ವಾಮಿ ಅಲಿಯಾಸ್ ಕುಂಟ ವಿಶಿಷ್ಟ ಚೇತನನಾಗಿದ್ದು, ಈತ 2014ರಲ್ಲಿ ಮದುವೆಯಾಗಿದ್ದ (marriage). ದಂಪತಿಗೆ 4 ವರ್ಷದ ಮತ್ತು ಒಂದೂವರೆ ವರ್ಷದ ಇಬ್ಬರು ಗಂಡು ಮಕ್ಕಳಿದ್ದು, ಈತನ ಹೆಂಡತಿ 9 ತಿಂಗಳ ಗರ್ಭಿಣಿಯಾಗಿದ್ದಳು (pregnant).

ಇದನ್ನು ಓದಿ : Video : ಚಂಡಮಾರುತದ ಹೊಡೆತಕ್ಕೆ ಉರುಳಿ ಬಿದ್ದ ಬೃಹದಾಕಾರದ ಮೊಬೈಲ್ ಟವರ್.!

ಆರೋಪಿ ಮಣಿಕಂಠಸ್ವಾಮಿ ಪತ್ನಿ ಮೇಲೆ ಸಂಶಯಗೊಂಡು (Suspicious) ಆಗಾಗ ಜಗಳ ಮಾಡುತ್ತಿದ್ದ. ಆತನಿಗೆ ಸಮಾಧಾನ ಹೇಳುತ್ತಿದ್ದ ತಾಯಿ ಜೊತೆಗೂ ಜಗಳ ಮಾಡುತ್ತಿದ್ದ.

2021ರ ಏ. 28ರಂದು ಸಂಜೆ ಮಣಿಕಂಠಸ್ವಾಮಿಯು ತನ್ನ ಹೆಂಡತಿಯ ಶೀಲವನ್ನು ಶಂಕಿಸಿ ಆಕೆ ಮತ್ತು ತಾಯಿಯೊಂದಿಗೆ ಗಲಾಟೆ ಮಾಡಿದ್ದ. ಬೆಳಿಗ್ಗೆ ಜಾವ 4ಗಂಟೆ ವೇಳೆ ಎಲ್ಲರೂ ಮಲಗಿದ್ದ ಸಮಯದಲ್ಲಿ ತಾನು ನಡೆದಾಡಲು ಉಪಯೋಗಿಸುತ್ತಿದ್ದ ಅಂಗವಿಕಲರ ಸಾಧನವಾದ ಕಬ್ಬಿಣದ ಊರುಗೋಲಿನಿಂದ (iron crutch) ತಾಯಿ, ಹೆಂಡತಿ, ಓರ್ವ ಮಗನನ್ನು ಹೊಡೆದು ಕೊಂದಿದ್ದ. ಬಳಿಕ ಇನ್ನೋರ್ವ ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಅಲ್ಲದೇ ಪತ್ನಿಯ ಗರ್ಭದಲ್ಲಿದ್ದ ಮಗುವಿನ ಸಾವಿಗೂ ಕಾರಣನಾಗಿದ್ದ ಈ ಪಾಪಿ.

ಇದನ್ನು ಓದಿ : Health : ಮಾನವನ ಮೆದುಳಿನ ನರ ಸಿಡಿಯುವಂತೆ ಮಾಡುತ್ತದೆ ಈ ತರಕಾರಿಯಲ್ಲಿನ ಹುಳು.!

ಇನ್ನೂ ಘಟನೆಯ ಬಗ್ಗೆ ಸರಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮೈಸೂರಿನ ಐದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ, ಆರೋಪಿಯ ವಿರುದ್ಧ ಆಪಾದಿಸಲಾದ ಆರೋಪವು ಸಾಬೀತಾದ ಹಿನ್ನೆಲೆ ಮರಣದಂಡನೆ ವಿಧಿಸಿ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments