ಜನಸ್ಪಂದನ ನ್ಯೂಸ್, ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಥಳಿ -ಕುಪ್ಪಾನವಾಡಿ ಶಾಂತಿಗಿರಿ ಟ್ರಸ್ಟ್ ಮತ್ತು ಬೇಡಕಿಹಾಳ ಗ್ರಾಮದ ಪ್ರೀತಿಯ ಆನೆ ತನ್ನ 55 ನೇ ವಯಸ್ಸಿಗೆ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗದ ಅರಣ್ಯ ಪ್ರದೇಶದಿಂದ 1977ರಲ್ಲಿ 3 ವರ್ಷದ ಮರಿ ಇದ್ದಾಗ ತಂದಿದ್ದ ಆನೆಗೆ 1978ರಲ್ಲಿ ಉಷಾರಾಣಿ ಎಂದು ನಾಮಕರಣ ಮಾಡಲಾಗಿತ್ತು.
ಇದನ್ನು ಓದಿ : ಪ್ರಿಯಕರನೊಂದಿಗೆ ಚೆಲ್ಲಾಟವಾಡುತ್ತಿದ್ದ ವೇಳೆ Entry ಕೊಟ್ಟ ಪತಿ; ಮುಂದಾಗಿದ್ದೇನು ಗೊತ್ತಾ.?
ಕಳೆದ 4 ದಶಕಗಳಿಂದ ಉಷಾರಾಣಿ ಆನೆಯನ್ನು ತ್ರಿಲೋಕ ವಿಧಾನ ಪೂಜಾ ಕಾರ್ಯಕ್ರಮ, ಪಂಚ ಕಲ್ಯಾಣ ಮೆರವಣಿಗೆ, ವಿವಿಧ ಜಾತ್ರಾ ಮಹೋತ್ಸವಗಳ ಮೆರವಣಿಗೆಯಲ್ಲಿ ಬಳಸಲಾಗುತ್ತಿತ್ತು.
ರಾಜ್ಯದ ಬೆಳಗಾವಿ, ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ ಜಿಲ್ಲೆ ಸೇರಿದಂತೆ ಹಲವು ಕಡೆಗೆ ಉಷಾರಾಣಿ ಆನೆಯು ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.
ಇದನ್ನು ಓದಿ : ಗೂಗಲ್‌ನಲ್ಲಿ ಈ ವಿಷಯಗಳನ್ನು ಹುಡುಕಲೇಬೇಡಿ ; ಇಲ್ಲಾಂದ್ರೆ ಜೈಲುವಾಸ Guarantee.!
ಚಿಕ್ಕೋಡಿ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು .ಈ ವೇಳೆ ಸಂಜೆ 6 ಗಂಟೆಯ ನಂತರ ಕ್ರೇನ್ ಮೂಲಕ ಅರಣ್ಯ ಇಲಾಖೆಯ ವಾಹನದಲ್ಲಿ ಪಾರ್ಥಿವ ಶರೀರವನ್ನು ಹಾಕಿ ಬೆಡಕಿಹಾಳ ವೃತ್ತದಿಂದ ಹಳೆ ಬಸ್ ನಿಲ್ದಾಣದವರೆಗೆ ಅಂತಿಮ ಯಾತ್ರೆ ನಡೆಸಿ ಕೋಥಳಿ ಶಾಂತಿಗಿರಿಯ ಬೆಟ್ಟಕ್ಕೆ ಪಾರ್ಥಿವ ಶರೀರವನ್ನು ಸ್ಥಳಾಂತರಿಸಲಾಯಿತು.
ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಮತ್ತು ಸರ್ಕಾರಿ ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ ಮಾಡಿ ವಿಧಿವಿಧಾನದ ನಂತರ ಅಂತ್ಯಸಂಸ್ಕಾರ ನಡೆಯಿತು.