ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವ ಅಂಗನವಾಡಿ ಕೇಂದ್ರಕ್ಕೆ (Anganwadi Centre) ನುಗ್ಗಿ ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದೆ.
ಶಿಕ್ಷಕಿಯು ಅಂಗನವಾಡಿ ಕೇಂದ್ರದಲ್ಲಿರುವ ಅಡುಗೆ ಸಿಬ್ಬಂದಿಗೆ ಶೌಚಾಲಯ ಸ್ವಚ್ಛ ಮಾಡಿ (Clean the toilet) ಎಂದು ಹೇಳಿದ್ದಾರೆ. ಆದರೆ ಆ ಸಿಬ್ಬಂದಿ ಈ ವಿಚಾರವನ್ನ ತನ್ನ ಗಂಡನಿಗೆ ಹೇಳಿದ್ದಾರೆ.
ಇದನ್ನು ಓದಿ : ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಇದರಿಂದ ಕೋಪಗೊಂಡ ವ್ಯಕ್ತಿ ಅಂಗನವಾಡಿಗೆ ಬಂದು ತನ್ನ ಹೆಂಡತಿಗೆ ಶೌಚಾಲಯ ಸ್ವಚ್ಛ ಮಾಡು ಅಂತ ಹೇಳ್ತಿಯಾ? ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ (verbal abuse). ಅಲ್ಲದೇ ಶಿಕ್ಷಕಿ ಸೀರೆ ಎಳೆದು ಮಾನಭಂಗ ಪಡಿಸಲು ಯತ್ನಿಸಿರುವುದಾಗಿ ಆರೋಪಿಸಲಾಗಿದೆ.
ಇನ್ನು ಶಿಕ್ಷಕಿ ಬ್ರೈನ್ ಟ್ಯೂಮರ್ದಿಂದ ಬಳಲುತ್ತಿದ್ದು, ಮಾನಸಿಕ ಕಿರುಕುಳ (Mental harassment) ತಾಳಲಾರದೇ ಆತ್ಮಹತ್ಯೆಗೂ ಯತ್ನಿಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : Health : ಚಳಿಗಾಲದಲ್ಲಿ ಹಸಿರು ಕಡಲೆಕಾಯಿ ತಿನ್ನುವುದಕ್ಕಿಂತ ಮುಂಚೆ ಈ ಸುದ್ದಿಯನ್ನೊಮ್ಮೆ ಓದಿ.!
ರಾಯಬಾಗ ಪೊಲೀಸ್ ಠಾಣಾ (Raibag Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
Health : ಚಳಿಗಾಲದಲ್ಲಿ ಹಸಿರು ಕಡಲೆಕಾಯಿ ತಿನ್ನುವುದಕ್ಕಿಂತ ಮುಂಚೆ ಈ ಸುದ್ದಿಯನ್ನೊಮ್ಮೆ ಓದಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ಕೆಲವು ಆಹಾರ ಪ್ರದಾರ್ಥಗಳನ್ನು ಉತ್ತಮ ಆರೋಗ್ಯಕ್ಕಾಗಿ ವರ್ಷವಿಡೀ ಸೇವಿಸಬಹುದು. ಅದರಲ್ಲೂ ಚಳಿಗಾಲದಲ್ಲಿ (Winter) ಮಾರ್ಕೆಟ್ ಗಳಲ್ಲಿ ಕೆಲವು ತರಕಾರಿಗಳು ಹೇರಳವಾಗಿ ಲಭ್ಯವಿರುತ್ತವೆ. ಅಂತಹ ಕೆಲವು ವಸ್ತುಗಳಲ್ಲಿ ಹಸಿ ಕಡಲೆಯೂ (Green chickpeas) ಸಹ ಒಂದಾಗಿದೆ.
ಇದನ್ನು ಓದಿ : ಕರ್ತವ್ಯದ ವೇಳೆ ದುರ್ನಡತೆ ; ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ Suspend.!
ಹಸಿರು ಕಡಲೆಕಾಯಿಯಲ್ಲಿ ಸಸ್ಯ ಆಧಾರಿತ ಪ್ರೋಟೀನ್ (Plant -based protein) ಇದೆ. ರಂಜಕ, ಸೋಡಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ (Phosphorus, sodium, magnesium, potassium), ಕ್ಯಾಲ್ಸಿಯಂ, ಕ್ಯಾಲೋರಿಗಳು, ಕೊಬ್ಬುಗಳು, ಕಾರ್ಬೋಹೈಡ್ರೇಟ್ ಗಳು, ಫೈಬರ್, ಕಬ್ಬಿಣ, ಫೋಲೇಟ್, ಸೆಲೆನಿಯಮ್, ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳು ಇದರಲ್ಲಿ ಕಂಡು ಬರುತ್ತವೆ.
ಪ್ರಯೋಜನಗಳು :
ಹಸಿರು ಕಡಲೆಯು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳ ಮೂಲವಾಗಿದ್ದು, ಲಘು ಆಹಾರವಾಗಿ (Light food) ಸೇವಿಸುವುದರಿಂದ ಶಕ್ತಿಯ ಕುಸಿತವನ್ನು (Energy collapse) ತಡೆದು, ಶಕ್ತಿಯ ಮಟ್ಟವನ್ನು ಸ್ಥಿರವಾಗಿಡಬಹುದು.
ಇದನ್ನು ಓದಿ : South Central Railway ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಇದು ಆರೋಗ್ಯಕರ ಕರುಳಿನ ಸೂಕ್ಷ್ಮ ಜೀವಿಯನ್ನು ಕಾಪಾಡಿಕೊಳ್ಳಲು (To maintain gut microbiota) ಸಹಾಯ ಮಾಡುತ್ತದೆ.
ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಿಂದ ಸಮೃದ್ಧವಾಗಿರುವ ಹಸಿರು ಕಡಲೆಯು, ಆರೋಗ್ಯಕರ ಮೂಳೆಗಳು ಮತ್ತು ಹಲ್ಲುಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನು ಓದಿ : ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಅಂದ್ರೆ ನೀವು ನಂಬುತ್ತಿರಾ.? ಈ Video ನೋಡಿ.!
ರಕ್ತದೊತ್ತಡವನ್ನು ನಿಯಂತ್ರಿಸಲು (To control blood pressure) ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಸಹಾಯಕ. ಯಾಕೆಂದರೆ ಹಸಿರು ಕಡಲೆಯು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ.
ಹಸಿರು ಕಡಲೆಯಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು (High fiber content), ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸಿ, ಮಲಬದ್ಧತೆಯನ್ನು ತಡೆಯುತ್ತದೆ.
ಇದನ್ನು ಓದಿ : ಕರ್ನಾಟಕಕ್ಕೂ ಕಾಲಿಟ್ಟ `HMPV’ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ.!
ಜೀವಸತ್ವಗಳು, ಖನಿಜಗಳು, ಪ್ರೋಟೀನ್ ಮತ್ತು ನಾರಿನ ಉತ್ತಮ ಮೂಲವೆಂದರೆ (Good source of fiber) ಅದು ಹಸಿರು ಕಡಲೆ.
ಇದು ತೂಕ ನಿರ್ವಹಣೆಗೆ ಉತ್ತಮ ಆಯ್ಕೆಯಾಗಿದ್ದು, ಹೊಟ್ಟೆ ತುಂಬಿದ ಭಾವನೆಗಳನ್ನು ಉತ್ತೇಜಿಸಲು ಮತ್ತು ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡಲು (To reduce overeating) ಸಹಾಯ ಮಾಡುತ್ತದೆ.
ಇದನ್ನು ಓದಿ : ರೊಮ್ಯಾಂಟಿಕ್ ಆಗಿ ಪತ್ನಿಗೆ ಹೂ ಮುಡಿಸುತ್ತಿರುವಾಗ ಹಸುವಿನ ಆಗಮನ ; ಮುಂದೆನಾಯ್ತು Video ನೋಡಿ.!
ಮಧುಮೇಹ ಹೊಂದಿರುವ ವ್ಯಕ್ತಿಗಳು ಅಥವಾ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಬಯಸುವವರಿಗೆ ಇದು ಪ್ರಯೋಜನಕಾರಿ.
ಸ್ನಾಯುಗಳ ಬೆಳವಣಿಗೆ ಮತ್ತು ದುರಸ್ತಿಗೆ ಸಹಾಯ ಮಾಡುತ್ತದೆ (Helps in muscle growth and repair) ಹಸಿರು ಕಡಲೆಯಲ್ಲಿರುವ ಪ್ರೋಟೀನ್ ಅಂಶ.