ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿಯೊಬ್ಬ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಹೆಲ್ಮೆಟ್ ನಲ್ಲಿದ್ದ ವಿಷಕಾರಿ ಹಾವು (Venomous snake) ಕಚ್ಚಿ ಸ್ಕೂಟಿಯಲ್ಲೇ ಆತ ಸಾವಿಗೀಡಾದ ಘಟನೆ ಬೆಳಕಿಗೆ ಬಂದಿದೆ.
ಇನ್ನೂ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ವ್ಯಾಪಕವಾಗಿ ಹರಡುತ್ತಿದೆ.
ಈ ವಿಡಿಯೋದಲ್ಲಿ ಕನ್ನಡದಲ್ಲಿ ಧ್ವನಿ ಕೇಳಿಬರುತ್ತಿದ್ದು, ಹೆಲ್ಮೆಟ್ ಒಳಗಿದ್ದ ಹಾವು ಕಚ್ಚಿ ವ್ಯಕ್ತಿ ಸಾವು (Man dies after being bitten by a snake inside his helmet) ಎಂದು ಶೀರ್ಷಿಕೆ ನೀಡಲಾಗಿದೆ. ಈ ಘಟನೆ ದಕ್ಷಿಣ ಭಾರತದಲ್ಲಿ ನಡೆದಿದೆ ಎಂದು MANOJ SHARMA LUCKNOW UP ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಆಗಿದೆ.
ಇದನ್ನು ಓದಿ : Special news : ಚಳಿಗಾಲದಲ್ಲಿ ನಿಮ್ಮ ಮುಖಕ್ಕೆ ಅಪ್ಪಿತಪ್ಪಿಯೂ ಇವುಗಳನ್ನು ಹಚ್ಚಿಕೊಳ್ಳಬೇಡಿ.!
ಬೈಕ್ (bike) ಮೇಲೆ ವ್ಯಕ್ತಿಯು ಬಿದ್ದಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ಸೆರೆಯಾಗಿದೆ. ಆತ ಬಿದ್ದಿರುವುದನ್ನು ಕಂಡ ಜನರು ವ್ಯಕ್ತಿಯನ್ನು ಆಂಬುಲೆನ್ಸ್ ಗೆ ಹಾಕ್ತಿದ್ದಾರೆ. ಇತ್ತ ಹೆಲ್ಮೆಟ್ ಒಳಗೆ ಹಾವಿನ ಮರಿ ಇದ್ದು, ಹೆಲ್ಮೆಟ್ ನ್ನು ಕೋಲಿನಿಂದ (stick) ಅಲ್ಲಾಡಿಸಿದಾಗ ಅದು ಹೊರಗೆ ಬರುವುದನ್ನು ಸಹ ನೀವು ನೋಡಬಹುದು.
ಈ ಘಟನೆ ನಡೆಯುವುದಕ್ಕಿಂತ ಮುಂಚೆ ವ್ಯಕ್ತಿಯು ತನ್ನ ಮನೆಯಿಂದ ಹೆಲ್ಮೆಟ್ ಧರಿಸಿ ಸ್ಕೂಟಿ ಹತ್ತಿದ್ದಾನೆ. ಈ ವೇಳೆ ಹೆಲ್ಮೆಟ್ ಒಳಗಿದ್ದ ಹಾವಿನ ಮರಿ ಈತನಿಗೆ ಕಚ್ಚಿದ್ದು, ಆತ ಸಾವಿಗೀಡಾಗಿದ್ದಾನೆ ಎನ್ನಲಾಗ್ತಿದೆ. ಆದರೆ ಆತ ಯಾರು? ಈ ವಿಡಿಯೋ ಎಲ್ಲಿಯದು? (Who is he? Where is this video from?) ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಇನ್ನೂ ನೆಟ್ಟಿಗರು ದಕ್ಷಿಣ ಭಾರತದ್ದು ಎಂದು ವೈರಲ್ ಆಗಿರುವ ಈ ವಿಡಿಯೋ ನಿಜವಾದ ವಿಡಿಯೋ ಅಲ್ಲ (Not a real video) ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸ್ಕೂಟಿಯಲ್ಲಿ ಇದ್ದ ವ್ಯಕ್ತಿಯ ವಿಡಿಯೋ ಹಾಗೂ ಹೆಲ್ಮೆಟ್ ನಲ್ಲಿ ಹಾವು ಇರುವ ವಿಡಿಯೋ ಎರಡೂ ಬೇರೆಬೇರೆ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನು ಓದಿ : ತೊಡೆ ಮೇಲೆ Girlfriend ಕೂರಿಸಿಕೊಂಡು ಲಿಪ್ ಲಾಕ್ ಮಾಡುತ್ತಾ ಕಾರು ಚಲಾಯಿಸಿದ ಯುವಕ.!
ಹಾಗೆಯೇ ಹಾವು ಕಚ್ಚಿದ ತಕ್ಷಣ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ. ಅಸಲಿಗೆ ಹಾವು ಕಚ್ಚಿದ ತಕ್ಷಣ ಮನುಷ್ಯ ಸಾಯುವುದಿಲ್ಲ. ಸುಮಾರು 8 ಗಂಟೆಗಳ ಕಾಲ ಆತ ಬದುಕುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.
ಆದರೆ ಈ ವಿಡಿಯೋ ಜನರಿಗೆ ಎಚ್ಚರಿಕೆ ಸಂದೇಶ ನೀಡಿದ್ದಂತೂ ಸುಳ್ಳಲ್ಲ. ಹೆಲ್ಮೆಟ್, ಬೂಟ್ ಗಳು ಬೆಚ್ಚಗಿರುವುದರಿಂದ (warm) ಹಾವಿನ ಮರಿಗಳು ಅವುಗಳಲ್ಲಿ ಇರಲು ಇಷ್ಟಪಡುತ್ತವೆ. ನೀವು ಪ್ರತಿ ಬಾರಿ ಹೆಲ್ಮೆಟ್ ಅಥವಾ ಬೂಟ್ ಧರಿಸುವ ಮುನ್ನ ಒಮ್ಮೆ ಪರಿಶೀಲಿಸುವುದು ಅಗತ್ಯ (Check before wearing helmet or boots).
ವ್ಯಕ್ತಿಗೆ ಹಾವು ಕಚ್ಚಿದ ವಿಡಿಯೋ ಇಲ್ಲಿದೆ :
यह दक्षिण भारत का वीडियो है एक कोबरा का बच्चा हेलमेट में छुपा हुआ था और व्यक्ति के सर में काट लिया !!
जब भी आप हेलमेट पहने तो एक बार हेलमेट को ठोक कर झाड़ कर ही पहने !!#ViralVideos #Helmet #Viral pic.twitter.com/8PnRKdMXjo— MANOJ SHARMA LUCKNOW UP🇮🇳🇮🇳🇮🇳 (@ManojSh28986262) December 24, 2024
ಹಿಂದಿನ ಸುದ್ದಿ : ಮತಾಂತರದ ಆರೋಪ : ಮರಕ್ಕೆ ಕಟ್ಟಿ ಹಾಕಿ ಮಹಿಳೆಯರಿಗೆ ಥಳಿತ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಒಡಿಶಾದ ಬಾಲಸೋರ್ ಜಿಲ್ಲೆಯ (Balasore district of Odisha) ರೆಮುನಾ ಪ್ರದೇಶದಲ್ಲಿ ಧಾರ್ಮಿಕ ಮತಾಂತರದ (Religious conversion) ಶಂಕೆಯ ಮೇಲೆ ಜನರ ಗುಂಪೊಂದು ಇಬ್ಬರು ಮಹಿಳೆಯರನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬಳಿಕ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು (Separate cases) ದಾಖಲಿಸಿದ್ದಾರೆ.
ಇದನ್ನು ಓದಿ : ಸಂಚಲನ ಸೃಷ್ಟಿಸಿದ ಒಂದೇ ಕೆರೆಯಲ್ಲಿ PSI, ಲೇಡಿ ಕಾನ್ಸ್‌ಟೇಬಲ್ ಮತ್ತು ಓರ್ವ ಯುವಕನ ಶವ ಪತ್ತೆ ಪ್ರಕರಣ.!
ಖರಿಮುಖ ಗ್ರಾಮದ ಜನರ ಬಳಿ ಇಬ್ಬರು ಬುಡಕಟ್ಟು ಮಹಿಳೆಯರು (Tribal women) ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಿ ಎಂದು ಮನವೊಲಿಸಲು ಹೋಗಿದ್ದರು.
ಈ ವಿಚಾರ ಇಡೀ ಗ್ರಾಮದಲ್ಲಿ ಹಬ್ಬಿದ್ದು, ಹಿಂದೂ ಸಂಘಟನೆಯ ಸದಸ್ಯರು (Members of the Hindu organization) ಮತ್ತು ಸ್ಥಳೀಯರನ್ನು ಒಳಗೊಂಡ ಗುಂಪೊಂದು ಸ್ಥಳಕ್ಕೆ ಭೇಟಿ ನೀಡಿ ಇಬ್ಬರು ಮಹಿಳೆಯರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದೆ ಎಂದು ರೆಮುನಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ (ಒಐಸಿ) ಸುಭಾಷ್ ಚಂದ್ರ ಮಲ್ಲಿಕ್ TNIE ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 9,871 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ Green signal.!
ಮಹಿಳೆಯರ ಮುಖವನ್ನು ವಿರೂಪಗೊಳಿಸಿದ (Facial deformity) ಗುಂಪು, ‘ಜೈ ಶ್ರೀ ರಾಮ್’ ಎಂದು ಕೂಗುವಂತೆ ಒತ್ತಾಯಿಸಿದೆ ಎಂದು ಆರೋಪಿಸಲಾಗಿದೆ. ಮಾಹಿತಿ ತಿಳಿದ ಕೂಡಲೇ ನೀಲಗಿರಿ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಸ್ಥಳೀಯರನ್ನು ಮತಾಂತರಗೊಳಿಸಲು ಗ್ರಾಮಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಮಹಿಳೆಯರು ಒಪ್ಪಿಕೊಂಡಿದ್ದಾರೆ ಎಂದು ರೆಮುನಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ (Officer-in-charge of the police station) ಸುಭಾಷ್ ಚಂದ್ರ ಮಲ್ಲಿಕ್ ತಿಳಿಸಿದ್ದಾರೆ.
ದೂರು ಆಧರಿಸಿ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ಮತ್ತು ಬಿಎನ್‌ಎಸ್‌ನ ವಿವಿಧ ವಿಭಾಗಗಳ ಅಡಿಯಲ್ಲಿ 15 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ