Friday, June 14, 2024
spot_img
spot_img
spot_img
spot_img
spot_img
spot_img

ಮಾರಕಾಸ್ತ್ರಗಳಿಂದ ಕೊಚ್ಚಿ ಹಿರಿಯ ಸ್ವಾಮೀಜಿಯ ಬರ್ಬರ ಹತ್ಯೆ.!

spot_img

ಜನಸ್ಪಂದನ ನ್ಯೂಸ್, ಮೈಸೂರು : ಮೈಸೂರಿನ ಸಿದ್ದಾರ್ಥ ನಗರದಲ್ಲಿ ಮಠದ ಹಿರಿಯ‌ ಸ್ವಾಮೀಜಿಯೊಬ್ಬರನ್ನು ಕೊಠಡಿಯಲ್ಲೇ ಮಾರಕಾಸ್ತ್ರಗಳಿಂದ ಇರಿದು ಕೊಲೆ (murder) ಮಾಡಿದ ಘಟನೆ ನಡೆದಿದೆ.

ಹತ್ಯೆಗೀಡಾದ ಸ್ವಾಮೀಜಿ ಸಿದ್ದಾರ್ಥ ನಗರದ ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ (90) ಎಂದು ತಿಳಿದು ಬಂದಿದೆ.

ಇದನ್ನು ಓದಿ : ಹಾವಿನ ವಿಷವನ್ನು ಈ ಗಿಡ-ಬಳ್ಳಿಯಿಂದ ತಕ್ಷಣವೇ ತೆಗೆದುಹಾಕಬಹುದು ; ಯಾವುದು ನಿಮಗೆ ಗೋತ್ತೇ.?

ಸ್ವಾಮೀಜಿ ಅವರ ಭದ್ರತಾ ಸಿಬ್ಬಂದಿ ಸಹಾಯಕನಾಗಿದ್ದ ರವಿ (60) ಎಂಬಾತ ಸ್ವಾಮೀಜಿಯವರನ್ನು ಹತ್ಯೆ ಮಾಡಿದ್ದಾನೆಂದು ಮಠದಲ್ಲಿದ್ದ‌ ಕೆಲವರು ಆರೋಪಿಸಿದ್ದಾರೆ.

ಶಿವಾನಂದ ಸ್ವಾಮೀಜಿಗಳ ಆಪ್ತ ಸಹಾಯಕ ರವಿ ಕುಡಿದ ಮತ್ತಿನಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹುಲ್ಲು ಕತ್ತರಿಸುವ ಆಯುಧದಲ್ಲಿ ಸ್ವಾಮೀಜಿ ಕೊಲೆ ಮಾಡಲಾಗಿದೆ.

ಮಠಕ್ಕೆ ನಜರ್‌ಬಾದ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ : ಹೃದಯವನ್ನು ಒಂದ್ ಸೆಕೆಂಡ್ ಸ್ತಬ್ಧಗೊಳ್ಳುವಂತೆ ಮಾಡುತ್ತದೆ ಈ Viral Video.!

ಅನ್ನದಾನೇಶ್ವರ ಮಠವು ಸುಮಾರು 9 ಎಕರೆ ವಿಸ್ತೀರ್ಣದಲ್ಲಿದೆ. ಮೈಸೂರು ರಾಜರು ದಾನವಾಗಿ ನೀಡಿದ್ದ ಈ ಮಠದ ಜಾಗದ ವಿಚಾರವಾಗಿ ಹಲವು ವಿವಾದಗಳಾಗಿದ್ದವು ಎಂದು ತಿಳಿದು ಬಂದಿದೆ.

ಅಲ್ಲದೇ ಶಿವಾನಂದ ಸ್ವಾಮೀಜಿಯವರು ನಿವೇಶನ ಮಾಡಿ ಸಂಬಂಧಿಕರಿಗೆ ಹಂಚಿದ್ದರು. 2011ರಲ್ಲಿ ಸ್ವಾಮೀಜಿ ವಿರುದ್ದ ಪ್ರಕರಣ ದಾಖಲಾಗಿತ್ತು. ನಿವೇಶನ ನೀಡುವುದಾಗಿ ಹಣ ಪಡೆದು ಮೋಸಕ್ಕೆ ಒಳಗಾಗಿದ್ದ ಪಾಟೀಲ್ ದಂಪತಿ ಸ್ವಾಮೀಜಿಯಿಂದ ವಂಚನೆ, ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿದ್ದರು.

spot_img
spot_img
- Advertisment -spot_img