ಜನಸ್ಪಂದನ ನ್ಯೂಸ್, ಮಂಗಳೂರು : ಮಂಗಳೂರು ಕಮಿಷನರೇಟ್ ನ ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯ ಜಂಕ್ಷನ್‌ನ ಭಜನ ಮಂದಿರದ ಸಮೀಪ ಮನೆಯೊಂದರಲ್ಲಿ ಬಾಲಕಿಯನ್ನು ಬಟ್ಟೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ನಡೆದಿದೆ.
ಬೆಳಗಾವಿ ಮೂಲದ ಬಾಲಕಿ ಜೋಕಟ್ಟೆಯ ಚಿಕ್ಕಪ್ಪ ಹನುಮಂತ ಅವರ ಮನೆಗೆ ಬಂದಿದ್ದಳು. ಕೂಲಿ ಕೆಲಸ ಮಾಡಿಕೊಂಡಿರುವ ಹನುಮಂತ ಮಂಗಳವಾರ ಎಂದಿನಂತೆ ಕೆಲಸಕ್ಕೆ ಹೋಗಿದ್ದರು.
ಇದನ್ನು ಓದಿ : Health : ಎಳನೀರಿನ ಜೊತೆ ಈ ಸೊಪ್ಪನ್ನು ಸೇವಿಸಿ ; ಒಂದೇ ದಿನದಲ್ಲಿ ಕಿಡ್ನಿಯಲ್ಲಿರುವ ನೋವು ಮಾಯ.!
ಬಾಲಕಿಯ ಚಿಕ್ಕಪ್ಪ ಹನುಮಂತನ ಮಗ ಶಾಲೆಗೆ ಹೋಗಿದ್ದು, ಪತ್ನಿ ಊರಿಗೆ ಹೋಗಿದ್ದರು. ಹೀಗಾಗಿ ಬಾಲಕಿ ಒಬ್ಬಳೇ ಮನೆಯಲ್ಲಿದ್ದಳು. ಬಾಲಕಿ ಕೈ ನೋವಿಗೆ ಚಿಕಿತ್ಸೆ ಪಡೆದು ನಾಲ್ಕು ದಿನಗಳ ಹಿಂದೆಯಷ್ಟೇ ಚಿಕ್ಕಪ್ಪನ ಮನೆಗೆ ಬಂದಿದ್ದಳು.
ಮಗಳ ಜೊತೆ ಮಾತನಾಡಬೇಕೆಂದು ತಾಯಿ ಪಕ್ಕದ ಮನೆಯವರಿಗೆ ಕರೆ ಮಾಡಿ ಮಾತನಾಡಲು ಫೋನ್ ಕೊಡುವಂತೆ ಹೇಳಿದ್ದಾರೆ. ಈ ವೇಳೆ ಪಕ್ಕದ ಮನೆಯವರು ಪೋನ್ ಕೊಡಲು ಮನೆಗೆ ಬಂದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ.
ಇದನ್ನು ಓದಿ : PUC ಪಾಸಾದವರಿಗೆ ಗುಡ್ ನ್ಯೂಸ್ : ರೈಲ್ವೆ ಇಲಾಖೆಯಲ್ಲಿ 10,884 ಹುದ್ದೆಗಳ ನೇಮಕಾತಿ.!
ಈ ವಿಚಾರ ಬಾಲಕಿಯ ಚಿಕ್ಕಪ್ಪನಿಗೆ ಗೊತ್ತಾಗಿ, ಆತ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ ಮೇರೆಗೆ ಪಣಂಬೂರು ಪೊಲೀಸರು, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನು ಓದಿ : ಪ್ರಧಾನಿ ನಿವಾಸದಲ್ಲಿ ಸಿಕ್ಕಿದೆಲ್ಲ ದೋಚಿದ ಪ್ರತಿಭಟನಾಕಾರರು ; ವಿಡಿಯೋ viral.!
ಪಣಂಬೂರು ಉಪವಿಭಾಗ ಎಸಿಪಿ, ಪಣಂಬೂರು ಪೊಲೀಸ್ ಠಾಣೆಯ ಆಧಿಕಾರಿಗಳು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೊಲೆಗಾರ ಲೈಂಗಿಕ ದೌರ್ಜನ್ಯ ಎಸಗಿರಬಹುದು ಅಥವಾ ದೌರ್ಜನ್ಯಕ್ಕೆ ಯತ್ನಿಸಿದಾಗ ಬಾಲಕಿ ಬೇರೆಯವರಿಗೆ ಹೇಳಬಹುದು ಎಂಬ ಭಯದಿಂದ ಕೊಲೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನು ಓದಿ : Astrology : ಪ್ರೀತಿ – ಪ್ರೇಮ ಅಂತ ಹೆಚ್ಚು ತಲೆ ಕೆಡಿಸಿಕೊಳ್ತಾರಂತೆ ಈ ರಾಶಿಯವರು.!
ಘಟನೆ ನಡೆದ ಮನೆಯ ಸಮೀಪ ಮೂರ್‍ನಾಲ್ಕು ಮನೆಗಳಿದ್ದು, ಕಿರುಚಾಟ, ಬಡಿದಾಟದ ಯಾವುದೇ ಶಬ್ದ ಕೇಳಿಸಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಹೀಗಾಗಿ ಪರಿಚಯಸ್ಥರೇ ಈ ಕೃತ್ಯ ಎಸಗಿರಬಹುದು ಎನ್ನುವ ಶಂಕೆ ಬಲವಾಗಿ ಇದೆ.
ಪಣಂಬೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.