ಜನಸ್ಪಂದನ ನ್ಯೂಸ್, ಡೆಸ್ಕ್ : ಕಾಡಿನ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಬುಸುಗುಡುತ್ತಾ ಕಚ್ಚಲು ಬಂದ ವಿಷಕಾರಿ ಹಾವೊಂದನ್ನು ಮುಸ್ಲಿಂ ಬಾಬಾ ಬೈದು ಬೆದರಿಕೆ ಹಾಕಿ ಮಾತುಗಳಿಂದಲೇ ಮಕಾಡೆ ಮಲಗಿಸಿರುವ ವಿಡಿಯೋ ವೈರಲ್ ಆಗುತ್ತಿದೆ.
ಇಲ್ಲೊಬ್ಬ ಮುಸ್ಲಿಂ ಬಾಬಾ ಕಾಡಿನಲ್ಲಿ ಬುಸುಗುಡುತ್ತಲೇ ಹೋಗುತ್ತಿದ್ದ ವಿಷಕಾರಿ ಹಾವನ್ನು ನೋಡಿ, ಅದನ್ನು ಅಡ್ಡಗಟ್ಟಿ ಸಂಭಾಷಣೆ ನಡೆಸುತ್ತಾ ಬೆದರಿಕೆ ಹಾಕಿ ಮಕಾಡೆ ಮಲಗಿಸುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನು ಓದಿ : ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳುಹಿಸಿದ್ದು ಎಷ್ಟು ಮೆಸೇಜ್.? ಸ್ಫೋಟಕ ಮಾಹಿತಿ.!
‘ಹಾವನ್ನು ಕಂಡರೆ ಭಯಪಡುವವರ ನಡುವೆ ಇಲ್ಲೊಬ್ಬ ಮುಸ್ಲಿಂ ಬಾಬಾ ಯಾವುದೇ ಸಾಧನವನ್ನೂ ಬಳಸದೇ ತನ್ನ ಮಾತಿನಿಂದಲೇ ಹಾವಿನೊಂದಿಗೆ ಸಂಭಾಷಣೆ ಮಾಡಿ ಅದನ್ನು ಮಲಗಿಸಿದ್ದಾನೆ. ಈ ಘಟನೆ ನಡೆದಿರುವುದು ಮೊರಕ್ಕೋದಲ್ಲಿ ಎಂದು ತಿಳಿದುವಂದಿದೆ. ಮೊರಾಕ್ಕೋದ ಇಸ್ಸಾವಾ ಎಂದು ಕರೆಯಲ್ಪಡುವ ಕೆಲ ಗುಂಪಿನ ಜನರು ಹಾವಿನ ಮೇಲೆ ಮಂತ್ರಹಾಕಿ ಸಂಭಾಷಣೆ ನಡೆಸಿ ಅವುಗಳನ್ನು ತಮ್ಮ ಕೈಗೊಂಬೆ ಮಾಡಿಕೊಳ್ಳುತ್ತಾರೆ.
ಹಾವುಗಳಿಗೆ ಬೆದರಿಗೆ ಹಾಕಿ ಅವುಗಳು ಪುನಃ ಅವರ ಮುಂದೆ ಕಾಣಿಸಿಕೊಳ್ಳದಂತೆ ಬೇರೆಡೆ ಹೋಗಲು ಸೂಚನೆ ನೀಡುತ್ತಾರೆ ಎಂದು ತಿಳಿದುಬಂದಿದೆ. ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಡಿನ ದಾರಿಯಲ್ಲಿ ಬುಸುಗುಡುತ್ತಾ ಸಿಟ್ಟಿನಿಂದ ಹೋಗುತ್ತಿದ್ದ ಹಾವು ಮುಸ್ಲಿಂ ಬಾಬಾನ ಎದುರಿಗೆ ಬಂದಿದೆ. ಆಗ ಹಾವನ್ನು ನೋಡಿ ತನ್ನೆಡೆಗೆ ಕರೆದಿದ್ದಾನೆ.
ಇದನ್ನು ಓದಿ : ಗಂಡಂದಿರಿಗೆ ಮನೆಯಲ್ಲಿ ಮದ್ಯ ಕುಡಿಯುವಂತೆ ಮಹಿಳೆಯರು ಹೇಳಿ ಎಂದು ಸಲಹೆ ನೀಡಿದ ಸಚಿವರು.
ಮುಸ್ಲಿಂ ಬಾಬಾನ ಹತ್ತಿರ ಹೋಗುತ್ತಿದ್ದಂತೆ ಹಾವಿನ ತಲೆಯ ಮೇಲೆ ಕೈ ಇಟ್ಟ ಬಾಬಾ ಅಲ್ಲಾಹುವಿನ ಕೆಲವು ಮಂತ್ರಗಳನ್ನು ಹೇಳುತ್ತಾ ಹಾವಿನ ಮೇಲೆ ಕೈ ಒತ್ತಿ ಹಿಡಿದು ಜೋರಾಗಿ ಒಂದೆರೆಡು ಮಾತನ್ನು ಹೇಳುತ್ತಾನೆ. ನಂತರ, ಹಾವು ಸಂಪೂರ್ಣವಾಗಿ ಮುದುಡಿಕೊಂಡು ಮಲಗಿಬಿಡುತ್ತದೆ. ಮಲಗಿದ್ದ ಹಾವಿಗೆ ನೀನು ಇಲ್ಲಿಯೇ ಇರು ನಾನು ಚೀಲ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ತನ್ನ ಬಳಿಯಿದ್ದ ಚೀಲ ತಂದು ಪುನಃ ಮಲಗಿದ್ದ ಹಾವಿನ ಬಳಿ ಮಾತನಾಡುತ್ತಾನೆ.
ನಂತರ, ತನ್ನ ಕೈಯಲ್ಲಿದ್ದ ಹರಿತವಾಗ ಖತ್ತಿಯನ್ನು ಕೆಳಗಿಟ್ಟು ಚೀಲದಲ್ಲಿ ಹಾಕಿಕೊಳ್ಳಲು ಮುಂದಾಗುತ್ತಾನೆ. ಆದರೆ, ಚೀಲದಲ್ಲಿ ಹಾಕಿಕೊಳ್ಳದೇ ‘ಮುಂದಿನ ಬಾರಿ ನಾನು ನಿನ್ನನ್ನು ಇಲ್ಲಿ ನೋಡಿದರೆ ನಾನು ನಿನ್ನ ತಲೆಯನ್ನು ಕತ್ತರಿಸಿ ನಿಮ್ಮ ಮಾಂಸವನ್ನು ತಿನ್ನುತ್ತೇನೆ ಎಂದು ಬೆದರಿಕೆ ಹಾಕುತ್ತಾನೆ. ಜನವಸತಿ ಪ್ರದೇಶದಲ್ಲಿ ನೀನು ಕಾಣಿಸಿಕೊಳ್ಳಬಾರದು ಎಂದು ಹೇಳಿ ಹಾವನ್ನು ಸಾಯಿಸದೇ ಹೊರಟು ಹೋಗುತ್ತಾನೆ.
View this post on Instagram