ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಹೆಬ್ಬಾಳ ಠಾಣೆಯ ಪೊಲೀಸರು, ಜಾರಿ ನಿರ್ದೇಶನಾಲಯ (ED) ಮತ್ತು ಆರ್ಬಿಐ ಹೆಸರು ಹೇಳಿ ಹಣ ಡಬಲ್ ಮಾಡಿಕೊಡುತ್ತೇವೆ ಅಂತ ಕೋಟ್ಯಾಂತರ ರೂಪಾಯಿ ವಂಚಿಸಿದ್ದ ಆಂಟಿ ಸೇರಿದಂತೆ ಏಳು ಜನರನ್ನು ಅರೆಸ್ಟ್ ಮಾಡಿದ ಘಟನೆ ನಡೆದಿದೆ.
ಚನ್ನರಾಯಪಟ್ಟಣ ಮೂಲದ ಆರೋಪಿ ಕಲ್ಪನಾ (47) ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ.
ಇದನ್ನು ಓದಿ : ಗೂಗಲ್‌ನಲ್ಲಿ ಈ ವಿಷಯಗಳನ್ನು ಹುಡುಕಲೇಬೇಡಿ ; ಇಲ್ಲಾಂದ್ರೆ ಜೈಲುವಾಸ Guarantee.!
ನಿವೃತ್ತ ಬ್ಯಾಂಕ್ ಮ್ಯಾನೇಜರ್ ನಾಗೇಶ್ವರ ರಾವ್ ಹಾಗೂ ಸುಜರಿತ ಎಂಬುವರು ತಮ್ಮ ಸಂಬಂಧಿಕರಾದ ಮಾಲಾ ಮತ್ತು ರಮೇಶ್ (ಹೆಸರು ಬದಲಾಯಿಸಾಗಿದೆ) ಎಂಬುವರನ್ನು ಕೊರೊನಾ ಸಮಯದಲ್ಲಿ ಕಲ್ಪನಾಗೆ ಪರಿಚಯ ಮಾಡಿಕೊಟ್ಟಿದ್ದರು.
ನಂತರ ಕಲ್ಪನಾ, ಕುಡುಮುಡಿ ಎಂಬಲ್ಲಿ 100 ಕೋಟಿ ಆಸ್ತಿ ಇದೆ, ಕೋರ್ಟಿನಲ್ಲಿ ಕೇಸ್ ನಮ್ಮ ಪರವಾಗಿ ಆಗಿದೆ. ದಾಖಲೆಗಳನ್ನು ತೆಗೆದುಕೊಳ್ಳಲು ನನಗೆ ಹಣದ ಅವಶ್ಯಕತೆ ಇದೆ.
ಹೀಗಾಗಿ ತುರ್ತಾಗಿ 15 ಲಕ್ಷ ಬೇಕು ಶೇಕಡ 3ರಷ್ಟು ಬಡ್ಡಿ ಸೇರಿಸಿ 15 ದಿನಗಳ ಒಳಗಡೆ ಹಣ ವಾಪಸ್ ಕೊಡುತ್ತೇನೆಂದು ಮಾಲಾ ಮತ್ತು ರಮೇಶ್ಗೆ ಹೇಳಿದ್ದಾಳೆ. ಮಾಲಾ ಮತ್ತು ರಮೇಶ್ ಸಂಬಂಧಿಯಾದ ನಾಗೇಶ್ವರ ರಾವ್ ಹಾಗೂ ಸುಜರಿತ, ಹಾಗೂ ಡ್ರೈವರ್ ಮಂಜುರವರ ಸಮಕ್ಷಮ ಹಣ ಪಡೆದುಕೊಂಡಿದ್ದಾಳೆ.
ಇದನ್ನು ಓದಿ : ನಿಮ್ಮ ಹೃದಯ ರೇಖೆಯಿಂದ ತಿಳಿಯಬಹುದು ನಿಮ್ಮ personality ; ನಿಮ್ಮ ಅಂಗೈ ರೇಖೆ ಯಾವ ರೀತಿ ಇದೆ.!
ಮಾಲಾ ಮತ್ತು ರಮೇಶ್ 15 ದಿನಗಳ ನಂತರ ಕಲ್ಪನಾಗೆ ಹಣ ಕೇಳಿದ್ದಾರೆ. ಆಗ ಕಲ್ಪನಾ ನಾವು ಕಪ್ಪು ಹಣವನ್ನು ಕಾನೂನು ಬದ್ಧ ಹಣವನ್ನಾಗಿ ಪರಿವರ್ತಿಸಲು ನೂರು ಕೋಟಿ ರೂಗಳಿಗೆ ಶೇ 30ರಂತೆ 30 ಕೋಟಿ ರೂಗಳನ್ನು ಕಟ್ಟಬೇಕು, ನೀವು ನಮಗೆ ಕೊಟ್ಟಿರುವ ಹಣಕ್ಕೆ, ಅದರ ಹತ್ತು ಪಟ್ಟು ಹಣವನ್ನು ಹೆಚ್ಚುವರಿ ಕೊಡುತ್ತೇನೆ.
ಅಲ್ಲದೇ 2 ಕೆಜಿ ಚಿನ್ನ ಮತ್ತು 20 ಕೆಜಿ ಬೆಳ್ಳಿ ವಿಗ್ರಹಗಳನ್ನು ನಿಮಗೆ ಕೊಡುತ್ತೇನೆ. ಆರ್ಬಿಐ ಉನ್ನತ ಅಧಿಕಾರಿಗಳು ನಮ್ಮ ಜೊತೆ ಇರುತ್ತಾರೆ, ಅಲ್ಲದೆ ವರುಣ್ ಎಂಬುವವನು ಇಡಿ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆಂದು ನಂಬಿಸಿದ್ದಾಳೆ.
ಮಾಲಾ ಮತ್ತು ರಮೇಶ್ ಒಟ್ಟು 4 ಕೋಟಿ ರೂ. ಹಣವನ್ನು ನಾಗೇಶ್ವರ ರಾವ್ ಹೆಂಡತಿ ಸುಜರಿತ, ಕಲ್ಪನಾ, ದಿಲೀಪ್, ತರುಣ, ಗೌತಮ್, ಚಾಲಕ ಮಂಜು ಅವರಿಗೆ ನೀಡಿದ್ದಾರೆ.
ಇದನ್ನು ಓದಿ : Health : ಸೋಡಾ ಕುಡಿಯುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಗೊತ್ತಾ.?
ನಂತರ ಮಾಲಾ ಮತ್ತು ರಮೇಶ್ ಹಣವನ್ನು ವಾಪಸ್ ಕೇಳಿದಾಗ ನಾವು ಹಣವನ್ನು ಕೊಡುವುದಿಲ್ಲ. ನೀವು ನಮ್ಮ ತಂಟೆಗೆ ಬಂದರೆ ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.