ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ನಾಯಿ ಮೇಲೆ ಚಿರತೆ ದಾಳಿ ಮಾಡಿ ನಾಯಿಯನ್ನು ಹೊತ್ತೊಯ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ ಇಲ್ಲಾ ಸುದ್ದಿಗಳನ್ನು ಕೇಳಿರುತ್ತೇವೆ.
ಆದರೆ ಇಲ್ಲಿ ಅದಕ್ಕೆ ವಿರುದ್ಧವಾದ ಘಟನೆಯೊಂದು ಅಂದರೆ, ಚಿರತೆಯೊಂದನ್ನು ನಾಯಿಗಳ ಗುಂಪು ಬೇಟೆಯಾಡಿ ಕೊಂದಿರುವ ಬಗ್ಗೆ ವಿಡಿಯೊ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನು ಓದಿ : ರಾಜಕೀಯ ಮುಖಂಡ ಹಾಗೂ ಹಿರಿಯ Police ಅಧಿಕಾರಿಗಳಿಂದ ನಟಿಗೆ ಕಿರುಕುಳ.!
ಇದೀಗ ವೈರಲ್ ಆಗಿರುಗ ವಿಡಿಯೋದಲ್ಲಿ ನಾಯಿಗಳ ಗುಂಪು ಚಿರತೆಯನ್ನು ಸುತ್ತುವರೆದು ದಾಳಿ ಮಾಡುತ್ತಿರುವುದನ್ನು ಕಾಣಬಹುದು.
ಇಲ್ಲಿ ಚಿರತೆಯನ್ನು ಐದಾರು ನಾಯಿಗಳು ಕಚ್ಚಿ ಎಳೆದಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಆಘಾತಕಾರಿ ವಿಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.
ಇದನ್ನು ಓದಿ : ಶಾಸಕರ ಕಾರು ಸ್ವಚ್ಛಗೊಳಿಸಿದ ಪೊಲೀಸ್ ಅಧಿಕಾರಿ ; ವಿಡಿಯೋ Viral.!
ಈ ಘಟನೆಯನ್ನು ದೂರದಲ್ಲಿ ನಿಂತು ಜನರು ವಿಡಿಯೋ ಮಾಡಿದ್ದಾರೆ. ಒಂದು ಚಿರತೆಯನ್ನು ಐದಾರು ನಾಯಿಗಳು ಕಚ್ಚಿ ಎಳೆದಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ನಾಯಿಗಳ ದಾಳಿಯಿಂದ ಚಿರತೆಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಅಲ್ಲೇ ಪ್ರಾಣಬಿಟ್ಟಿದೆ.
@TheBrutalNature ಎಂಬ ಟ್ವಿಟರ್ ಖಾತೆಯಲ್ಲಿ ಈ ಚಿರತೆ ಮೇಲೆ ನಾಯಿಗಳ ದಾಳಿಯ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಇದನ್ನು ಓದಿ : Ayush : ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಈ ಆಘಾತಕಾರಿ ವಿಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದ್ದು, ತಮ್ಮದೇ ಆದ ಭಾವದಲ್ಲಿ ಕಾಮೆಂಟ್ ಮಾಡಿದ್ದಾರೆ.
— NATURE IS BRUTAL (@TheBrutalNature) August 27, 2024