ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಜೂನ 29 ರ ಭಾನುವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.
ದೈನಂದಿನ ದ್ವಾದಶ ರಾಶಿಗಳ ಫಲಾಫಲ (ಜಾತಕ) ದ ಮೂಲಕ ಭವಿಷ್ಯ (Astrology) ವನ್ನು ಊಹಿಸುವುದು ಪ್ರಾಚೀನ ಕಾಲದಿಂದಲೂ ಇಂದಿನವರೆಗೆ ಪ್ರಸ್ತುತವಾಗಿದೆ. ಗ್ರಹಗಳ ಸ್ಥಾನಗಳು, ನಕ್ಷತ್ರಗಳು, ತಿಥಿ ಮತ್ತು ಇತರ ಜ್ಯೋತಿಷ್ಯ (Astrology) ಅಂಶಗಳ ಆಧಾರದ ಮೇಲೆ ರಾಶಿಗಳ ಫಲಾಫಲ (ಜಾತಕ) ವು ವ್ಯಕ್ತಿಯ ಭವಿಷ್ಯ (Astrology) ವನ್ನು ಮುನ್ಸೂಚಿಸುತ್ತದೆ.
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :
*ಮೇಷ ರಾಶಿ*
ನಿರುದ್ಯೋಗಿಗಳಿಗೆ ಅಪ್ರಯತ್ನ ಕಾರ್ಯ ಸಿದ್ಧಿ ಉಂಟಾಗುತ್ತದೆ. ಸಹೋದರರೊಂದಿಗಿನ ದೀರ್ಘಕಾಲದ ವಿವಾದಗಳು ಬಗೆಹರಿಯುತ್ತವೆ. ಉದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ. ಆಸ್ತಿ ವಿವಾದಗಳಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ.
*ವೃಷಭ ರಾಶಿ*
ಕೈಗೆತ್ತಿಕೊಂಡ ಕೆಲಸಗಳು ಅಡೆತಡೆಗಳಿದ್ದರೂ ಸಕಾಲದಲ್ಲಿ ಪೂರ್ಣಗೊಳಿಸುತ್ತೀರಿ. ಸ್ನೇಹಿತರಿಂದ ಆಸಕ್ತಿದಾಯಕ ವಿಷಯಗಳು ತಿಳಿದು ಬರುತ್ತವೆ. ಹಳೆ ಸಾಲಗಳನ್ನು ವಸೂಲಿ ಮಾಡಲಾಗುತ್ತದೆ. ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ. ವ್ಯಾಪಾರ ಉದ್ಯೋಗಗಳು ಹೆಚ್ಚು ಉತ್ಸಾಹದಾಯಕವಾಗಿರುತ್ತದೆ . ಪ್ರಯಾಣ ಅನುಕೂಲಕರವಾಗಿರುತ್ತದೆ.
*ಮಿಥುನ ರಾಶಿ*
ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ವೃತ್ತಿಪರ ಉದ್ಯೋಗಗಳಲ್ಲಿ ಹೆಚ್ಚುವರಿ ಕೆಲಸದ ಹೊರೆಯಿಂದ ವಿಶ್ರಾಂತಿ ಇರುವುದಿಲ್ಲ. ಮನೆಯ ಹೊರಗೆ ಒತ್ತಡ ಹೆಚ್ಚಾಗುತ್ತದೆ. ವ್ಯಾಪಾರಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುವುದಿಲ್ಲ. ನಿರುದ್ಯೋಗಿಗಳಿಗೆ ನಿರಾಸೆ ಹೆಚ್ಚಾಗುತ್ತದೆ . ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ.
*ಕಟಕ ರಾಶಿ*
ವ್ಯಾಪಾರ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಪ್ರಮುಖ ವಿಷಯಗಳಲ್ಲಿ ಆತ್ಮೀಯರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಶ್ರಮಶೀಲತೆ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಪ್ರಯತ್ನದ ಕೊರತೆಯಿಂದ ಸಿಕ್ಕ ಅವಕಾಶಗಳು ಕೈ ಜಾರುತ್ತವೆ. ಹಣದ ವಿಚಾರದಲ್ಲಿ ಜಾಗರೂಕರಾಗಿರಿ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 28 ರ ದ್ವಾದಶ ರಾಶಿಗಳ ಫಲಾಫಲ.!
*ಸಿಂಹ ರಾಶಿ*
ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಅಗತ್ಯಕ್ಕೆ ಕೈಗೆ ಹಣ ದೊರೆಯುತ್ತದೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ವಿಯಾಗುತ್ತೀರಿ. ಸ್ನೇಹಿತರೊಂದಿಗೆ ಚರ್ಚೆಗಳು ಉಂಟಾಗುತ್ತದೆ. ವ್ಯಾಪಾರದಲ್ಲಿನ ನಷ್ಟವನ್ನು ಸರಿದೂಗಿಸಲಾಗುತ್ತದೆ. ಉದ್ಯೋಗದಲ್ಲಿನ ಸಮಸ್ಯೆಗಳಿಂದ ಹೊರಬರುತ್ತೀರಿ.
*ಕನ್ಯಾ ರಾಶಿ*
ಆತ್ಮೀಯರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಹೊಸ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ಬರಬೇಕಾದ ಹಣ ಕೈ ಸೇರುತ್ತದೆ. ಕೌಟುಂಬಿಕ ಸಮಸ್ಯೆಗಳು ಪರಿಹಾರದತ್ತ ಸಾಗುತ್ತವೆ. ಹೊಸ ವಾಹನ ಖರೀದಿಸುತ್ತೀರಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವೃತ್ತಿ ಮತ್ತು ಉದ್ಯೋಗಗಳು ಉತ್ಸಾಹದಿಂದ ಸಾಗುತ್ತವೆ.
*ತುಲಾ ರಾಶಿ*
ಕುಟುಂಬ ಸದಸ್ಯರೊಂದಿಗೆ ದೂರ ಪ್ರಯಾಣಗಳನ್ನು ಮಾಡುತ್ತೀರಿ. ಸಾಲಗಾರರ ಒತ್ತಡದಿಂದ ಹೊರಬರಲು ಹೊಸ ಸಾಲಗಳನ್ನು ಮಾಡಲಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಸ್ವಲ್ಪ ಅಡೆತಡೆಗಲಿರುತ್ತವೆ. ಸಂಗಾತಿಯೊಂದಿಗೆ ದೇವಸ್ಥಾನಗಳಿಗೆ ಭೇಟಿ ನೀಡುತ್ತೀರಿ. ವ್ಯಾಪಾರ-ವ್ಯವಹಾರಗಳಲ್ಲಿ ಆರ್ಥಿಕ ನಷ್ಟಗಳಿರುತ್ತವೆ. ಉದ್ಯೋಗಗಳು ಸುಗಮವಾಗಿ ಸಾಗುತ್ತವೆ.
*ವೃಶ್ಚಿಕ ರಾಶಿ*
ವ್ಯಾಪಾರಗಳು ನಿಧಾನವಾಗಿ ಸಾಗುತ್ತವೆ, ನಿರುದ್ಯೋಗ ಪ್ರಯತ್ನಗಳು ನಿರುತ್ಸಾಹಗೊಳ್ಳುತ್ತವೆ. ಕುಟುಂಬ ಸದಸ್ಯರಿಂದ ಒತ್ತಡ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ನಿಯೋಜಿಸಲಾದ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾಗುತ್ತವೆ. ಕೈಗೆತ್ತಿಕೊಂಡ ಕೆಲಸ ನಿಧಾನಗತಿಯಲ್ಲಿ ಸಾಗುತ್ತವೆ. ಆಸ್ತಿ ವಿಷಯಗಳಲ್ಲಿ ವಿವಾದಗಳು ಉದ್ಭವಿಸುತ್ತವೆ.
ಇದನ್ನು ಓದಿ : Romance on bike : ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್ ಮೇಲೆ ಪ್ರೇಮಿಗಳ ರೋಮ್ಯಾನ್ಸ್.!
*ಧನುಸ್ಸು ರಾಶಿ*
ಸಮಾಜದಲ್ಲಿ ಪ್ರಮುಖ ವ್ಯಕ್ತಿಗಳಿಂದ ವಿಶೇಷ ಒಲವು ಸಿಗುತ್ತದೆ. ವ್ಯಾಪಾರಿಗಳು ಹೊಸ ಹೂಡಿಕೆಗಳನ್ನು ಪಡೆಯುತ್ತಾರೆ. ವಿವಾದಗಳಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಯನ್ನು ಪಡೆಯಲಾಗುತ್ತದೆ. ಸ್ನೇಹಿತರ ನೆರವಿನಿಂದ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ಉದ್ಯೋಗದಲ್ಲಿ ಜಾಣತನದಿಂದ ಸಮಸ್ಯೆಗಳಿಂದ ಹೊರಬರುತ್ತೀರಿ.
*ಮಕರ ರಾಶಿ*
ವ್ಯಾಪಾರ ಮತ್ತಷ್ಟು ನಿಧಾನವಾಗುತ್ತದೆ. ಕೌಟುಂಬಿಕ ವಾತಾವರಣ ಕಿರಿಕಿರಿಯುಂಟು ಮಾಡುತ್ತದೆ. ಆಕಸ್ಮಿಕ ಧನ ವ್ಯಯದ ಸೂಚನೆಗಳಿವೆ. ಉದ್ಯೋಗಿಗಳು ಸಹೋದ್ಯೋಗಿಗಳೊಂದಿಗೆ ವಿವಾದಗಳು ಉಂಟಾಗುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಪ್ರಯಾಣದಲ್ಲಿ ವಾಹನ ತೊಂದರೆಗಳಿರುತ್ತವೆ. ಸಾಲದ ಪ್ರಯತ್ನಗಳು ಕೂಡಿ ಬರುವುದಿಲ್ಲ.
*ಕುಂಭ ರಾಶಿ*
ಮನೆಯ ಹೊರಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು ಲಾಭಪಡೆಯುತ್ತೀರಿ. ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ವೃತ್ತಿಪರ ವ್ಯವಹಾರದಲ್ಲಿ ವ್ಯಾಪಾರ ಅನುಕೂಲತೆ ಉಂಟಾಗುತ್ತದೆ. ಹಳೆಯ ಘಟನೆಗಳನ್ನು ನೆನಪಿಸಿಕೊಂಡು ಬೇಸರವಾಗುತ್ತದೆ. ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆಗಳು ಕಂಡುಬರುತ್ತವೆ. ಗೃಹೋಪಯೋಗಿ ಉಪಕರಣಗಳನ್ನು ಖರೀದಿಸಲಾಗುತ್ತದೆ.
*ಮೀನ ರಾಶಿ*
ವ್ಯವಹಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಆಧ್ಯಾತ್ಮಿಕ ಚಿಂತನೆ ಮೂಡುತ್ತದೆ. ಕೈಗೆತ್ತಿಕೊಂಡ ಕಾರ್ಯಗಳು ನಿಧಾನವಾಗಿ ಪೂರ್ಣಗೊಳ್ಳುತ್ತವೆ. ಪ್ರಮುಖ ವಿಚಾರದಲ್ಲಿ ಆಪ್ತ ಸ್ನೇಹಿತರಿಂದ ಮಹತ್ವದ ಮಾಹಿತಿ ದೊರೆಯುತ್ತದೆ. ಉದ್ಯೋಗಗಳಲ್ಲಿ, ಶ್ರಮಕ್ಕೆ ತಕ್ಕ ಫಲಿತಾಂಶಗಳನ್ನು ಪಡೆಯುವುದಿಲ್ಲ. ಮಕ್ಕಳ ಶೈಕ್ಷಣಿಕ ಫಲಿತಾಂಶಗಳು ಕಳಪೆಯಾಗಿರುತ್ತವೆ.
Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ (Astrology) ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.
ನೀರು ಮಿಶ್ರಿತ ಡಿಸೇಲ್ ; ರಸ್ತೆಯಲ್ಲಿಯೇ ನಿಂತ 19 CM ಬೆಂಗಾವಲು ವಾಹನ.!
ಜನಸ್ಪಂದನ ನ್ಯೂಸ್, ಡೆಸ್ಕ್ : ನೀರು ಮಿಶ್ರಿತ ಡಿಸೇಲ್ ಹಾಕಿದ ಪರಿಣಾಮ ಸಿಎಂ (CM) ಬೆಂಗಾವಲು ವಾಹನಗಳು ರಸ್ತೆಯಲ್ಲಿಯೇ ಕೆಟ್ಟು ನಿಂತ ಘಟನೆಯೊಂದು ಶುಕ್ರವಾರ ನಡೆದಿದೆ. ಸಿಎಂ ಬೆಂಗಾವಲು ಪಡೆಯ 19 ಕಾರುಗಳಿಗೆ ಡಿಸೇಲ್ ಬದಲು ನೀರು ಮಿಶ್ರಿತ ಡಿಸೇಲ್ ಹಾಕಲಾಗಿದೆ. ಪರಿಣಾಮವಾಗಿ ಬೆಂಗಾವಲು ವಾಹನ ಇದ್ದಕ್ಕಿದ್ದಂತೆ ಒಂದರ ನಂತರ ಒಂದರಂತೆ ರಸ್ತೆಯಲ್ಲಿ ಕೆಟ್ಟು ನಿಂತಿದ್ದರಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.
ಹೌದು, ಮಧ್ಯಪ್ರದೇಶ ಮುಖ್ಯಮಂತ್ರಿ (CM) ಡಾ. ಮೋಹನ್ ಯಾದವ್ ರತ್ಲಂನಲ್ಲಿ ಅವರ ಕಾರ್ಯಕ್ರಮಕ್ಕೆ ಒಂದು ದಿನ ಮೊದಲು, ಭೋಪಾಲ್‌ನಿಂದ ಇಂದೋರ್ ತಲುಪಿದ ವಾಹನಗಳ ಬೆಂಗಾವಲು ವಾಹನಗಳಲ್ಲಿ ಡೀಸೆಲ್ (diesel) ತುಂಬಿಸಲಾಯಿತು. ಡಿಸೇಲ್ ತುಂಬಿಸಿಕೊಂಡು ಸ್ವಲ್ಪ ಮುಂದೆ ಸಾಗುತ್ತಿದಂತೆಯೇ 19 ಬೆಂಗಾವಲು ವಾಹನಗಳು ಕೆಟ್ಟು ನಿಲ್ಲಲು (Starting Truble) ಬೀಳಲು ಪ್ರಾರಂಬಿಸಿದವು.
ಇದನ್ನು ಓದಿ : Plane : ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ 159 ಜನರಿದ್ದ ವಿಮಾನದಲ್ಲಿ ಬೆಂಕಿ ; ವಿಡಿಯೋ.!
ಹೀಗೆ ಕೆಟ್ಟು ನಿಂತ ವಾಹನಗಳನ್ನು ಆರಾಮವಾಗಿ ಒಳಗೆ ಕುಳಿತಿದ್ದ ಸಿಬ್ಬಂದಿ ಅನಿವಾರ್ಯಾವಾಗಿ ಕೆಳಗಿಳಿದು ರಸ್ತೆಯಲ್ಲಿ ಕೆಟ್ಟು ನಿಂತ ವಾಹನಗಳನ್ನು ಪಕ್ಕಕ್ಕೆ ತಳ್ಳಬೇಕಾಯಿತು. ಇದ್ಯ ಇದರ ವಿಡಿಯೋ ಸಾಮಾಜಿಕ ಜಳತಾಣದಲ್ಲಿ ವೈರಲ್ ಆಗಿದೆ.
ಶುಕ್ರವಾರ ರತ್ಲಂನಲ್ಲಿ ಪ್ರಾದೇಶಿಕ ಕೈಗಾರಿಕಾ ಸಮಾವೇಶ ನಡೆಯುತ್ತಿರುವ ಹಿನ್ನಲೆಯಲ್ಲಿ CM ಡಾ. ಮೋಹನ್ ಯಾದವ್ ಈ ಕಾರ್ಯಕ್ರಮಕ್ಕೆ ಬರುತ್ತಿದ್ದರು. ಈ ಭೇಟಿಯ ಹಿನ್ನಲೆಯಲ್ಲಿ ಮುಖ್ಯಮಂತ್ರಿಯ ಬೆಂಗಾವಲು ಸೇರಲು ಗುರುವಾರ ಭೋಪಾಲ್‌ನಿಂದ ಸುಮಾರು 19 ವಾಹನಗಳು ಇಂದೋರ್ ತಲುಪಿದವು. ಮುಖ್ಯಮಂತ್ರಿ (CM) ಯ ಭೇಟಿಗೆ ಮೊದಲು, ಕಾರ್ಕೇಡ್‌ನ ಪೂರ್ವಾಭ್ಯಾಸ ಮಾಡಲಾಗುವ ಹಿನ್ನಲೆಯಲ್ಲಿ ಈ ಬೆಂಗಾವಲು ವಾಹನಗಳನ್ನು ಕಾರ್ಯಕ್ರಮದ ಸ್ಥಳಕ್ಕೆ ಕರೆದೊಯ್ಯಲಾಗಿತ್ತು.
ಇದನ್ನು ಓದಿ : Lady : ರೈಲು ಹಳಿ ಮೇಲೆ 7KM ಕಾರು ಚಲಾಯಿಸಿದ ಯುವತಿ ; ಮುಂದೆನಾಯ್ತು.?
ದೋಸಿಗಾಂವ್‌ನಲ್ಲಿರುವ ಪೆಟ್ರೋಲ್ ಪಂಪ್‌ಗೆ ಡೀಸೆಲ್ ತುಂಬಿಸಲು ವಾಹನಗಳು ಬಂದವು. ಇಲ್ಲಿನ ಎಲ್ಲಾ ವಾಹನಗಳಲ್ಲಿ ನೀರಿನೊಂದಿಗೆ ಬೆರೆಸಿದ ಡೀಸೆಲ್ ತುಂಬಿಸಲಾಗಿತ್ತು ಎಂದು ಶಂಕಿಸಲಾಗಿದೆ. ಡೆಸೇಲ್ ತುಂಬಿದ ನಂತರ ಬೆಂಗಾವಲು ಪಡೆ ಮುಂದೆ ಸಾಗಿದ ತಕ್ಷಣ, ಎಲ್ಲಾ ವಾಹನಗಳು ಒಂದರಿಂದೇ ಮತ್ತೊಂದು ಎಂಬಂತೆ ಕೆಟ್ಟು ನಿಲ್ಲತೊಡಗಿದವು.
ಈ ಬೆಂಗಾವಲು ವಾಹನಗಳು ಸ್ವಲ್ಪ ಮುಂದೆ ಸಾಗಿ ರಸ್ತೆಯಲ್ಲಿ ಕೆಟ್ಟು ನಿಂತರೆ, ಇನ್ನು ಕೆಲವು ವಾಹನಗಳು ಪೆಟ್ರೋಲ್ ಪಂಪ್‌ನಲ್ಲಿಯೇ ಸ್ಟಾರ್ಟ್ ಆಗದೇ ನಿಂತು ಬಿಟ್ಟಿವೇ. ಈ ವಾಹನಗಳಲ್ಲಿ ಸಂಚರಿಸುತ್ತಿದ್ದ ಭದ್ರತಾ ಸಿಬ್ಬಂದಿ ಮತ್ತು ಆಡಳಿತ ಅಧಿಕಾರಿಗಳು ಕೆಟ್ಟು ನಿಂತಿ ವಾಹನಗಳನ್ನು ತಳ್ಳಿ ಪಕ್ಕಕ್ಕೆ ಸಾಗಿಸಿದರು.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 27 ರ ದ್ವಾದಶ ರಾಶಿಗಳ ಫಲಾಫಲ.!
ವಿಷಯ ತಿಳಿಯುತ್ತಿದಂತೆಯೇ ನಯಬ್ ತಹಶೀಲ್ದಾರ್ ಆಶಿಶ್ ಉಪಾಧ್ಯಾಯ ಮತ್ತು ಆಹಾರ ಮತ್ತು ಸರಬರಾಜು ಅಧಿಕಾರಿ ಸೇರಿದಂತೆ ಅನೇಕ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿದರು. ಅವರು ವಾಹನಗಳ ಡೀಸೆಲ್ ಟ್ಯಾಂಕ್‌ಗಳನ್ನು ತೆರೆದು ಪರಿಶೀಲಿಸಿದರು. 20 ಲೀಟರ್ ಡೀಸೆಲ್‌ನಲ್ಲಿ ಸುಮಾರು 10 ಲೀಟರ್ ನೀರು ಇತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಎಲ್ಲಾ ಕಾರುಗಳಲ್ಲಿಯೂ ಇದೇ ಸ್ಥಿತಿ ಇತ್ತು.
ಬೆಂಗಾವಲು ವಾಹನಕ್ಕಷ್ಟೆ ಈ ಬಿಸಿ ತಟ್ಟಿಲ್ಲ, ಈ ಪೆಟ್ರೋಲ್ ಪಂಪ್‌ನಿಂದ ಒಂದು ಟ್ರಕ್ ಕೂಡ ಸುಮಾರು 200 ಲೀಟರ್ ಡೀಸೆಲ್ ತುಂಬಿಸಿತ್ತು. ಸ್ವಲ್ಪ ದೂರ ಹೋದ ನಂತರ ಆ ಟ್ರಕ್ ಕೂಡ ನಿಂತಿತು. ಅಧಿಕಾರಿಗಳು ತಕ್ಷಣ ಭಾರತ್ ಪೆಟ್ರೋಲಿಯಂನ ಪ್ರದೇಶ ವ್ಯವಸ್ಥಾಪಕರಿಗೆ ಕರೆ ಮಾಡಿದ್ದಾರೆ. ಮಳೆಯಿಂದಾಗಿ ಟ್ಯಾಂಕ್‌ನಲ್ಲಿ ನೀರು ಸೋರಿಕೆಯಾಗುವ ಸಾಧ್ಯತೆಯಿದೆ ಎಂದು ಪ್ರದೇಶ ವ್ಯವಸ್ಥಾಪಕರು ಹೇಳಿದರು.
ಇದನ್ನು ಓದಿ : Savadatti ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ; ರೂ. 1.04 ಕೋಟಿ ಕಾಣಿಕೆ ಸಂಗ್ರಹ.!
ವಾಹನಗಳು ಕೈ ಕೊಟ್ಟ ಪರಿಣಾಮವಾಗಿ ಅಧಿಕಾರಿಗಳು ಬೆಳಗಿನ ಜಾವ 1 ಗಂಟೆಯವರೆಗೆ ಪೆಟ್ರೋಲ್ ಪಂಪ್‌ನಲ್ಲಿಯೇ ಇದ್ದರು. ಆಹಾರ ಮತ್ತು ಸರಬರಾಜು ಇಲಾಖೆ ತಕ್ಷಣವೇ ಪೆಟ್ರೋಲ್ ಪಂಪ್ ಅನ್ನು ಸೀಲ್ ಮಾಡಿತು.
ಇನ್ನು ಮುಖ್ಯಮಂತ್ರಿಗಳ (CM) ಬೆಂಗಾವಲು ಪಡೆಗಾಗಿ ಇಂದೋರ್‌ನಿಂದ ಇತರ ವಾಹನಗಳನ್ನು ಕರೆಯಿಸಿ ಸಿಎಂ ಕಾರ್ಯಕ್ರಮಕ್ಕೆ ಅನಿವು ಮಾಡಿಕೊಡಲಾಯಿತು. ಮುಖ್ಯಮಂತ್ರಿ (CM) ಗಳೊಂದಿಗೆ ಅನೇಕ ಹಿರಿಯ ಅಧಿಕಾರಿಗಳು ಮತ್ತು ನಾಯಕರು ಸಹ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ಕೆಟ್ಟು ನಿಂತ ಸಿಎಂ (CM) ಬೆಂಗಾವಲು ವಾಹನಗಳ ವಿಡಿಯೋ :
VIDEO | Ratlam, Madhya Pradesh: As many as 19 vehicles of CM Mohan Yadav's convoy had to be towed after water was reportedly filled instead of diesel in them. The petrol pump was later sealed over fuel contamination.#MPNews #MadhyaPradeshNews
(Full video available on PTI… pic.twitter.com/IQV9aE2Jfc
— Press Trust of India (@PTI_News) June 27, 2025