Saturday, July 12, 2025

Janaspandhan News

HomeAstrologyAstrology : ಹೇಗಿದೆ ಗೊತ್ತಾ.? ಜುಲೈ 03 ರ ದ್ವಾದಶ ರಾಶಿಗಳ ಫಲಾಫಲ.!
spot_img
spot_img

Astrology : ಹೇಗಿದೆ ಗೊತ್ತಾ.? ಜುಲೈ 03 ರ ದ್ವಾದಶ ರಾಶಿಗಳ ಫಲಾಫಲ.!

- Advertisement -

ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಜುಲೈ 03 ರ ಗುರುವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.

ದೈನಂದಿನ ದ್ವಾದಶ ರಾಶಿಗಳ ಫಲಾಫಲ (ಜಾತಕ) ದ ಮೂಲಕ ಭವಿಷ್ಯ (Astrology) ವನ್ನು ಊಹಿಸುವುದು ಪ್ರಾಚೀನ ಕಾಲದಿಂದಲೂ ಇಂದಿನವರೆಗೆ ಪ್ರಸ್ತುತವಾಗಿದೆ. ಗ್ರಹಗಳ ಸ್ಥಾನಗಳು, ನಕ್ಷತ್ರಗಳು, ತಿಥಿ ಮತ್ತು ಇತರ ಜ್ಯೋತಿಷ್ಯ (Astrology) ಅಂಶಗಳ ಆಧಾರದ ಮೇಲೆ ರಾಶಿಗಳ ಫಲಾಫಲ (ಜಾತಕ) ವು ವ್ಯಕ್ತಿಯ ಭವಿಷ್ಯ (Astrology) ವನ್ನು ಮುನ್ಸೂಚಿಸುತ್ತದೆ.

ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :

results of the twelve zodiac signs

*ಮೇಷ ರಾಶಿ*

ಮೇಷರಾಶಿಯವರಿಗೆ ಸೋಮವಾರದ ಹತಾಶೆಯು ಇಂದು ಚರ್ಚಿಸಿ ಫಲವಿಲ್ಲದ್ದು. ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಈ ದಿನ ಪೂರ್ತಿ ಹರ್ಷ, ನಗು ಮತ್ತು ನೆಮ್ಮದಿಯನ್ನು ಗಣೇಶ ನಿಮಗೆ ದಯಪಾಲಿಸುತ್ತಾರೆ. ಹಣಕಾಸು ವಿಚಾರಗಳಲ್ಲಿ ಒಲವು ಹೆಚ್ಚಾಗುವುದರೊಂದಿಗೆ ಇಂದು ಲಕ್ಷ್ಮೀದೇವಿಯು ನಿಮ್ಮನ್ನು ಅನುಗ್ರಹಿಸುತ್ತಾರೆ ಮತ್ತು ಪರಿಣಾಮವಾಗಿ ನೀವು ಏಳಿಗೆಯನ್ನು ಕಾಣಬಹುದು.

*ವೃಷಭ ರಾಶಿ*

ನಿಮ್ಮ ಮಾತಿನ ಸಿಹಿ, ಮತ್ತು ಉದ್ವೇಗಗಳು ನಿಮ್ಮ ಸುತ್ತಲಿನ ಜನರನ್ನು ಖುಷಿಗೊಳಿಸಲು ಮತ್ತು ಕಾಣುವಂತೆ ಪ್ರಭಾವ ಬೀರಲು ಸಾಕಾಗುತ್ತವೆ. ನಿಮ್ಮ ಮುಂಜೆ ಸಂದರ್ಶನ, ನಿರೂಪಣೆ ಅಥವಾ ತಂಡದ ಚಟುವಟಿಕೆ ಇದ್ದರೆ ನೀವು ಮತ್ತಷ್ಟು ಎತ್ತರಕ್ಕೇರುವಿರಿ. ನಿಮ್ಮ ಸಂಪರ್ಕಕ್ಕೆ ಬಂದ ವ್ಯಕ್ತಿಗಳೊಂದಿಗೆ ನಿಮ್ಮ ಸಂಬಂಧವನ್ನು ಬಲಗೊಳಿಸುವಿರಿ. ಬೌದ್ಧಿಕವಾಗಿ ನೀವು ಜ್ಞಾನ ಗಳಿಸುವಿರಿ ಮತ್ತು ಅದರಿಂದ ಮೇಲೇರಿದ ಅನುಭವ ಪಡೆಯುವಿರಿ.

*ಮಿಥುನ ರಾಶಿ*

ನಿಮ್ಮ ಮನದಲ್ಲಿ ಹರಿಯುತ್ತಿರುವ ಚಿಂತನೆಗಳಿಂದಾಗಬಲ್ಲ ಪ್ರತಿಫಲವನ್ನು ಒಮ್ಮೆಲೆ ಕಲ್ಪಿಸಿದಾಗ ಯೋಚನೆಗಳ ಉನ್ಮಾದಗಳು ನಿಮ್ಮನ್ನು ಗೊಂದಲಗೊಳಿಸುತ್ತದೆ ಅಥವಾ ಹಿಗ್ಗಿಸುತ್ತದೆ. ಬೌದ್ಧಿಕವಾಗಿ ಉತ್ತೇಜಿಸಲ್ಪಡುವ ಒಂದು ಯೋಜನೆ ನಿಮ್ಮ ಕೈಯಲ್ಲಿದೆ. ಆದರೆ ನೀವು ಹೋಗುವ ದಾರಿ ಅನಿರೀಕ್ಷಿತ ಚರ್ಚೆಗಳಿಂದ ಹೊರತಾಗಿರುತ್ತದೆ. ತಾಯಿ, ಸಹೋದರಿ ಮತ್ತು ಪತ್ನಿಯೊಂದಿಗಿನ ನಿಮ್ಮ ಸಂಬಂಧ ಬಾವನಾತ್ಮಕವಾಗಿರುತ್ತದೆ.

*ಕಟಕ ರಾಶಿ*

ನೀವು ಯೋಚಿಸುತ್ತಿದ್ದ ಹೊಸ ಯೋಜನೆಯನ್ನು ಪ್ರಾರಂಭಿಸಲು ಇಂದು ಸುದಿನ. ನೀವು ಹಳೆ ಸ್ನೇಹಿತರ ಬಳಗವನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಮತ್ತು ಇಂದಿನ ದಿನ ಮೊದಲ ಭೇಟಿಯ ದಿನವಾಗಬಹುದು. ಒಳ್ಳೆಯ ಗೆಳೆಯರ ಕೂಡುವಿಕೆ ಮತ್ತು ಅವರೊಂದಿಗಿನ ಮೋಜಿನ ಕ್ಷಣಗಳು ನಿಮ್ಮ ಹೃದಯ ಸೂರೆಗೊಳ್ಳುತ್ತದೆ ಮತ್ತು ನೀವು ಏನೋ ಸಾಧಿಸಿದ ಅನುಭವ ಪಡೆಯುವಿರಿ.

ಇದನ್ನು ಓದಿ : Hukkeri : ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ; ಪಿಎಸ್‌ಐ ಸಸ್ಪೆಂಡ್.!
*ಸಿಂಹ ರಾಶಿ*

ಖರ್ಚಗಳು ತಾತ್ಕಾಲಿಕವಾಗಿ ಸ್ವಲ್ಪ ಹೆಚ್ಚಾಗುವಂತಿದ್ದರೂ ಆರ್ಥಿಕವಾಗಿ ಎಲ್ಲವೂ ಸಮಸ್ಯಾರಹಿತವಾಗಿರುತ್ತದೆ. ಜನರೊಂದಿಗಿನ ಮಾತುಕತೆ, ಸಂವಹನದಿಂದ ಮತ್ತು ವಿದೇಶಿ ಸಂಬಂಧಗಳಿಂದ ಲಾಭವಿದೆ. ಕೌಟುಂಬಿಕ ಮತ್ತು ಪ್ರೀತಿಪಾತ್ರರ ಸಹಕಾರ ನಿಮ್ಮನ್ನು ಹಗುರವಾಗಿ ಹಾಗೂ ಸಂತೋಷವಾಗಿಡಬಲ್ಲದು. ಗೆಳತಿಯರು ಕೂಡಾ ಇಂದು ಹೆಚ್ಚು ಸಹಾಯ ಹಸ್ತ ಚಾಚಬಲ್ಲರು.

*ಕನ್ಯಾ ರಾಶಿ*

ನೀವು ತೊಡಗಿಸಿಕೊಳ್ಳುವ ಎಲ್ಲಾ ಉಪಯುಕ್ತ ಮತ್ತು ಆಸಕ್ತಿಯ ಮಾತುಕತೆಗಳಿಂದ ನಿಮ್ಮ ವಿಚಾರಗಳು ಪೋಷಿಸಲ್ಪಡುತ್ತವೆ ಮತ್ತು ಉತ್ಕೃಷ್ಟಗೊಳ್ಳುವುದನ್ನು ನೀವು ಕಾಣುವಿರಿ. ಇದು ನಿಮ್ಮನ್ನು ಖುಷಿಪಡಿಸುತ್ತದೆ ಮತ್ತು ಇತರರ ಮುಂದೆ ಸಂತಸದಿಂದ ಕಾಣುತ್ತೀರಿ. ಈ ದಿನವು ಆರ್ಥಿಕ ಮತ್ತು ಹಣಕಾಸಿನ ದೃಷ್ಟಿಯಿಂದ ಸುದಿನವಾಗಿದೆ. ಮತ್ತು ನಿಮ್ಮ ಪರಿಶ್ರಮಕ್ಕೆ ಫಲವನ್ನು ಬೇಗನೆ ಪಡೆಯುವಿರಿ.

*ತುಲಾ ರಾಶಿ*

ಇವತ್ತಿನ ದಿನದಲ್ಲಿ ನೀವು ನಿಮ್ಮ ದಿನಚರಿಯನ್ನು ಮತ್ತೆ ಪರೀಕ್ಷಿಸುವ ಮತ್ತು ದಿನಚರಿಯಲ್ಲಿ ಆರೋಗ್ಯ ಮತ್ತು ದೇಹ ದೃಢತೆಗಳನ್ನು ನೋಡುವುದು ಅಗತ್ಯವಾಗಿದೆ. ನಿಮ್ಮ ದಿನಚರಿಯಲ್ಲಿ ಇದು ಇದ್ದರೆ, ಸ್ವಲ್ಪ ನವೀಕರಣ ಮತ್ತು ಹೊಸರುಚಿ ಸೇರಿಸುವುದು ಅಗತ್ಯ. ಇಲ್ಲದಿದ್ದರೆ ಅದಕ್ಕೆ ಪ್ರಾಮುಖ್ಯ ಕೊಡಲು ಈಗ ಪ್ರಶಸ್ತ ಸಮಯ. ನೀವು ಸ್ವಲ್ಪ ಅನ್ಯಮನಸ್ಕರಂತೆ ವರ್ತಿಸುತ್ತೀರಿ. ಅದಕ್ಕೆ ನಿಮ್ಮ ಆರೋಗ್ಯವೇ ಕಾರಣ.

*ವೃಶ್ಚಿಕ ರಾಶಿ*

ನಿಮ್ಮ ಪ್ರಯತ್ನಗಳಿಂದ ನೀವು ಲಾಭ ಪಡೆಯುವಿರಿ. ಅದು ಕೆಲಸದಲ್ಲಾಗಿರಲಿ ಅಥವಾ ವ್ಯಾಪಾರ ಮತ್ತು ವ್ಯವಹಾರ ಸಂಬಂಧಗಳಲ್ಲಾಗಲಿ ಅಥವಾ ಮನೆ ಕುಟುಂಬ ಅಥವಾ ವೈಯಕ್ತಿಕ ವಿಷಯಗಳಲ್ಲಾಗಲಿ. ನೀವು ಗೆಳೆಯರು ಅಥವಾ ಪ್ರೀತಿಪಾತ್ರರನ್ನು ಭೇಟಿ ಮಾಡುವಿರಿ. ಮತ್ತು ಪ್ರಯಾಣ ಮತ್ತು ವಿಹಾರಗಳು ಆನಂದದಾಯಕವಾಗಿರುತ್ತದೆ. ಜನರೊಂದಿಗೆ ಬೆರೆಯಲು ಇಚ್ಛಿಸುವ ಏಕಾಂಗಿಗಳಿಗೆ ಇದು ಸಕಾಲ. ಅನೇಕರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೀರಿ.

ಇದನ್ನು ಓದಿ : Romance on bike : ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್‌ ಮೇಲೆ ಪ್ರೇಮಿಗಳ ರೋಮ್ಯಾನ್ಸ್.!
*ಧನುಸ್ಸು ರಾಶಿ*

ನಿಮ್ಮ ಗೃಹಜೀವನವು ಅತ್ಯಂತ ಹರ್ಷದಾಯಕವಾಗಿರುತ್ತದೆ ಮತ್ತು ನೀವು ಏನೇ ಮಾಡಿದರೂ ಉತ್ತಮ ರೀತಿಯಲ್ಲೇ ಮಾಡಿ ಎಂಬುದಾಗಿ ಗಣೇಶ ಹೇಳುತ್ತಾರೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಸಂತೋಷಪಡುತ್ತಾರೆ. ನಿಮ್ಮ ತಂದೆಯಿಂದ ಅಥವಾ ಮನೆಯ ಹಿರಿಯರಿಂದ ನಿಮಗೆ ಲಾಭ ದೊರೆಯುವ ಸಾಧ್ಯತೆಯಿದೆ. ವ್ಯವಹಾರ ಸಂಬಂಧ ಪ್ರಯಾಣ ಬೆಳೆಸುವ ಸಂಭವವಿದೆ.

*ಮಕರ ರಾಶಿ*

ನೀವು ಅತ್ಯಂತ ಸೃಜನಶೀಲ ಮತ್ತು ನಾವೀನ್ಯದಿಂದ ಕೂಡಿರುತ್ತೀರಿ. ಅಗತ್ಯವಿದ್ದಲ್ಲಿ ನಿಮ್ಮ ಈ ಸೃಜನಶೀಲತೆಯನ್ನು ಬಳಸಿಕೊಳ್ಳುತ್ತೀರಿ ಮತ್ತು ನಿಮ್ಮ ಕೆಲಸವು ಅತ್ಯುತ್ತಮ ರೀತಿಯಲ್ಲಿರುತ್ತದೆ. ಏನೇ ಆದರೂ ಮಾನಸಿಕವಾಗಿ ಅಸ್ವಸ್ಥರಾಗಬಹುದು. ಮಕ್ಕಳಿಗೆ ಸಂಬಂಧಿಸಿದ ಅಥವಾ ಅವರ ಕೊರತೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ದಿನವಿಡೀ ಕಾಡಬಹುದು. ದುಂದುವೆಚ್ಚವನ್ನು ತಪ್ಪಿಸಿ.

*ಕುಂಭ ರಾಶಿ*

ನಿಮ್ಮ ಪ್ರೀತಿಪಾತ್ರರೊಂದಿಗೆ ಮತ್ತು ಮುಖ್ಯವಾಗಿ ನಿಮ್ಮೊಂದಿಗೆ ಪ್ರಾಮಾಣಿಕರಾಗಿರಿ. ನಿಮ್ಮ ಸುತ್ತಲೂ ಸಂಭವಿಸುತ್ತಿರುವ ಎಲ್ಲಾ ವಿಚಾರಗಳ ಬಗ್ಗೆ ಗಮನವಿರಿಸಿ. ಇದು ಮನೆಯಲ್ಲಿ ಉಂಟಾದ ಗಂಭೀರ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ನೆರವಾಗಬಹುದು. ನಿಮ್ಮ ಖರ್ಚುವೆಚ್ಚಗಳನ್ನು ನಿಯಂತ್ರಿಸುವ ನಿಮ್ಮ ಅಸಾಮರ್ಥ್ಯವು ಹಣಕಾಸು ಬಿಕ್ಕಟ್ಟಿಗೆ ಕಾರಣವಾಗಬಹುದು.

*ಮೀನ ರಾಶಿ*

ನಿಮ್ಮ ಯೋಜನೆಯನ್ನು ಇನ್ನಷ್ಟು ಖುಷಿಗೊಳಿಸಲು ನಿಮ್ಮ ಕುಟುಂಬ ಸದಸ್ಯರನ್ನು ಮತ್ತು ಸ್ನೇಹಿತರನ್ನೂ ನಿಮ್ಮೊಂದಿಗೆ ಸೇರಿಸಿಕೊಳ್ಳುತ್ತೀರಿ. ಅವರು ನಿಮ್ಮ ಪ್ರಯತ್ನವನ್ನು ಗುರುತಿಸುತ್ತಾರೆ ಮತ್ತು ಶ್ಲಾಘಿಸುತ್ತಾರೆ. ಆರೋಗ್ಯಕ್ಕೆ ಸಂಬಂಧಿಸಿ ಉತ್ತಮ ದಿನ. ದೈಹಿಕವಾಗಿ ಅಥವಾ ಮಾನಸಿಕವಾಗಿ ಯಾವುದೇ ತೊಂದರೆಯಿಲ್ಲ. .

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ (Astrology) ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

ಸ್ವಯಂ ನಿವೃತ್ತಿ ಪಡೆಯಲು ಮುಂದಾದ ASP ಎನ್.ವಿ.ಭರಮನಿ.!

ಜನಸ್ಪಂದನ ನ್ಯೂಸ್‌, ಬೆಳಗಾವಿ/ಧಾರವಾಡ : ಧಾರವಾಡ ಹೆಚ್ಚುವರಿ ಎಸ್​​ಪಿ (ASP) ಎನ್.ವಿ. ಭರಮನಿ ಅವರು ಸ್ವಯಂ ನಿವೃತ್ತಿಗೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೆಲ ತಿಂಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆಯೇ ಸಿಎಂ ಸಿದ್ದರಾಮಯ್ಯ ಅವರಿಂದ ASP ಭರಮನಿಯವರು ಅಪಮಾನಕ್ಕೆ ಒಳಗಾಗಿದ್ದರು. ಅಂದು ಬೆಳಗಾವಿ ಸಮಾರಂಭದಲ್ಲಿ ಈ ಪೊಲೀಸ್ ಅಧಿಕಾರಿ ಮೇಲೆ ಸಿಎಂ ಕಪಾಳಮೋಕ್ಷಕ್ಕೆ ಮುಂದಾಗಿದ್ದರು.

ಈ ಸನ್ನಿವೇಶದಿಂದ ASP ಎನ್.ವಿ. ಭರಮನಿ ನೊಂದುಕೊಂಡಿದ್ದರು. ಅದೇ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

ಇದನ್ನು ಓದಿ : Forest guard Missing : 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಫಾರೆಸ್ಟ್ ಗಾರ್ಡ್.!

ಸ್ವಯಂಪ್ರೇರಿತ ನಿವೃತ್ತಿಗೆ ASP ಭರಮನಿ ಅವರು ಎರಡು ಪುಟಗಳ ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ಅಧಿಕಾರಿಗಳು ಸಿಎಂ ಸಮ್ಮುಖದಲ್ಲಿ ಅಧಿಕಾರಿಯ ಮನವೊಲಿಸಲು ಪ್ರಯತ್ನಿಸಿದ್ದಾರೆ. ಮನವೊಲಿಕೆಯಿಂದ ASP ಬರಮನಿ ಅವರು ಸ್ವಲ್ಪಮಟ್ಟಿಗೆ ಶಾಂತವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಅಂದು ಬೆಳಗಾವಿ ಸಮಾರಂಭದಲ್ಲಿ ತಮಗಾದ (ASP) ಅವಮಾನಕ್ಕೆ ನೊಂದುಕೊಂಡಿದ್ದರು. ಹೀಗಾಗಿ, ಕೆಲಸದಿಂದಲೇ ಸ್ವಯಂ ನಿವೃತ್ತಿಗೆ ಮುಂದಾಗಿದ್ದರು ಎಂಬ ಮಾಹಿತಿ ದೊರೆತಿದೆ.

ಬೆಳಗಾವಿಯಲ್ಲಿ ಅಂದು ಏನು ನಡೆದಿತ್ತು :

ಬಿಜೆಪಿ ಕಾರ್ಯಕರ್ತರು ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಭೆಯ ವೇಳೆದ ಸಿಎಂ ಭಾಷಣ ಮಾಡುತ್ತಿರುವಾಗಲೇ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಸಿಎಂ ಸಿದ್ದರಾಮಯ್ಯ, “ಏಯ್‌.. ಯಾರಿಲ್ಲಿ ಎಸ್‌ಪಿ?” ಬಾರಯ್ಯ ಇಲ್ಲಿ ಎಂದು ವೇದಿಕೆ ಮೇಲೆ ಕರೆದು ASP ನಾರಾಯಣ ಭರಮನಿ ಅವರ ಮೇಲೆ ಕೈ ಎತ್ತಿದ್ದರು.

ಇದನ್ನು ಓದಿ : Hukkeri : ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ; ಪಿಎಸ್‌ಐ ಸಸ್ಪೆಂಡ್.!

CM ಸಿದ್ದರಾಮಯ್ಯ ಅವರ ಈ ವರ್ತನೆಗೆ (ASP ಮೇಲೆ ಕೈ ಮಾಡಿದ್ದಕ್ಕೆ) ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವರ್ತನೆಗೆ ಸಾಕಷ್ಟು ಟೀಕೆ ಟಿಪ್ಪಣಿಗಳು ವ್ಯಕ್ತವಾಗಿದ್ದವು. ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಯನ್ನು ಅವಮಾನಿಸುವುದು, ಅವಹೇಳನ ಮಾಡುವುದು ಸರಿಯಲ್ಲ ಟೀಕಿಸಿದ್ದರು. (ಏಜೇನ್ಸಿಸ್)

Note : Visit Janaspandan News Link to see daily horoscope (astrology).

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments