Saturday, January 18, 2025
HomeNewsLokayukta Raid : ಲೋಕಾಯುಕ್ತ ಬಲೆಗೆ ಬಿದ್ದ ASI.!
spot_img

Lokayukta Raid : ಲೋಕಾಯುಕ್ತ ಬಲೆಗೆ ಬಿದ್ದ ASI.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಸಂಜಯ್ ನಗರ ಠಾಣೆಯ (Sanjay Nagar Police Station, Bangalore) ಎಎಸ್‌ಐ ಅಧಿಕಾರಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬೆಲೆಗೆ ಬಿದ್ದಿರುವ ಘಟನೆ ನಡೆದಿದೆ.

ಸಂಜಯ್ ನಗರ ಠಾಣೆಯ ASI ವಿಜಯ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ (Lokayukta has fallen into the trap) ಎನ್ನಲಾಗಿದೆ.

ಇದನ್ನು ಓದಿ : ರೊಮ್ಯಾಂಟಿಕ್‌ ಆಗಿ ಪತ್ನಿಗೆ ಹೂ ಮುಡಿಸುತ್ತಿರುವಾಗ ಹಸುವಿನ ಆಗಮನ ; ಮುಂದೆನಾಯ್ತು Video ನೋಡಿ.!

ಜಪ್ತಿ ಮಾಡಿದ್ದ (Confiscated) ಆಟೋವನ್ನು ಬಿಡುಗಡೆಗೊಳಿಸಲು ಆಟೋ ಚಾಲಕರೊಬ್ಬರ ಬಳಿ ASI 50 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.

ಕೊನೆಗೆ 40 ಸಾವಿರ ರೂ. ಗೆ ಒಪ್ಪಿಕೊಂಡು ಲಂಚ ಪಡೆಯುತ್ತಿದ್ದ ವೇಳೆ ಎಎಸ್‌ಐ ವಿಜಯಕುಮಾರ್ ಲೋಕಾಯುಕ್ತ ಅಧಿಕಾರಿಗಳ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ.

ಇದನ್ನು ಓದಿ : ತಂದೆತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!

ಸದ್ಯ ASI ವಿಜಯಕುಮಾರ್ ಅವರನ್ನು ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಹಿಂದಿನ ಸುದ್ದಿ : ತಂದೆತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ ; ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಸುಪ್ರೀಂ ಕೋರ್ಟ್‌, ವಯಸ್ಸಾದ ತಂದೆ- ತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ (Children who do not take care of elderly parents do not get property) ಎಂದು ಮಹತ್ವದ ತೀರ್ಪು ನೀಡಿದೆ.

ಇದನ್ನು ಓದಿ : ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (DCC) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಉಡುಗೊರೆ ರೂಪದಲ್ಲಿ ಮಗನಿಗೆ ನೀಡಿದ್ದ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸಿ (cancel), ತಾಯಿಗೆ ಆಸ್ತಿಯನ್ನು ವಾಪಸ್ಸು ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಸಿ. ಟಿ. ರವಿಕುಮಾರ್ ಅವರ ನ್ಯಾಯಪೀಠವು ಈ ತೀರ್ಪು ನೀಡಿದೆ. ಮಕ್ಕಳು ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಲು ವಿಫಲರಾದರೆ (If children fail to cope with their responsibilities), ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007 ರ ಅಡಿಯಲ್ಲಿ ರಚಿಸಲಾದ ನ್ಯಾಯ ಮಂಡಳಿಗಳು ಪೋಷಕರನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳು ಆಸ್ತಿಯನ್ನು ಹಿಂದಿರುಗಿಸಬೇಕು ಎಂದು ತಿಳಿಸಿದೆ.

ಇದನ್ನು ಓದಿ : ಸಂಚಲನ ಸೃಷ್ಟಿಸಿದ ಒಂದೇ ಕೆರೆಯಲ್ಲಿ PSI, ಲೇಡಿ ಕಾನ್ಸ್‌ಟೇಬಲ್ ಮತ್ತು ಓರ್ವ ಯುವಕನ ಶವ ಪತ್ತೆ ಪ್ರಕರಣ.!

ವ್ಯಕ್ತಿಯೋರ್ವ, ತನ್ನ ತಂದೆ ಹಾಗೂ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂಬ ಷರತ್ತಿನೊಂದಿಗೆ (condition) ಆಸ್ತಿ ವರ್ಗಾವಣೆ ಮಾಡಿಸಿಕೊಂಡಿದ್ದ. ಆದರೆ ಆತ ತನ್ನ ತಾಯಿಯೊಂದಿಗೆ ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದಾನೆ.

ಹೀಗಾಗಿ ಸಂತ್ರಸ್ತೆ ಡಿಸೆಂಬರ್ 24, 2020 ರಂದು ಛತ್ತರ್‌ಪುರದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ಗೆ ಕಾಯಿದೆಯ ಸೆಕ್ಷನ್ 22 ಮತ್ತು 23 ರ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

ಇದನ್ನು ಓದಿ : ಸಚಿವ ಖರ್ಗೆ ಆಪ್ತನಿಂದ ಜೀವ ಬೆದರಿಕೆ ಆರೋಪ ; ಗುತ್ತಿಗೆದಾರ ರೈಲಿಗೆ ತಲೆ ಕೊಟ್ಟು Suicide.!

ಮಕ್ಕಳು ತಮ್ಮ ತಂದೆತಾಯಿಯನ್ನು ನೋಡಿಕೊಳ್ಳಲು ವಿಫಲವಾದರೆ ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆಯಡಿ (Parents and Senior Citizens Welfare Act) ಪೋಷಕರು ನೀಡಿದ ಆಸ್ತಿ ಮತ್ತು ಉಡುಗೊರೆಗಳನ್ನು ಹಿಂತೆಗೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಸುಪ್ರೀಂ ಕೋರ್ಟ್ ಆದೇಶಿಸಿರುವ ಈ ತೀರ್ಪು, ಮಕ್ಕಳು ಪೋಷಕರಿಂದ ಪಡೆದ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳದಂತೆ (Do not abuse), ಅವರ ಹಿತಾಸಕ್ತಿಗಳ ಪಾಲನೆಯನ್ನು ಖಚಿತಪಡಿಸಲು, ಹಿರಿಯ ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!