ಜನಸ್ಪಂದನ ನ್ಯೂಸ್, ಮಂಡ್ಯ : ಮಂಡ್ಯ (Mandya) ಜಿಲ್ಲೆಯ ನಾಗಮಂಗಲದಲ್ಲಿ ವಿಚಾರಣೆಗೆ ಕರೆದ ಎಎಸ್‌ಐ (ASI) ಮೇಲೆ ನಡುರಸ್ತೆಯಲ್ಲೇ ಹಲ್ಲೆಗೆ ಯತ್ನಿಸಿ ರಂಪಾಟ ನಡೆಸಿದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ನಾಗಮಂಗಲ ಗ್ರಾಮಾಂತರ ಎಎಸ್‌ಐ ರಾಜು (ASI Raju) ಮೇಲೆ ಮಜ್ಜನಕೊಪ್ಪಲು ಪೂಜಾರಿ ಕೃಷ್ಣ (Pujeri Krishna) ಹಲ್ಲೆಗೆ ಯತ್ನಿಸಿ ದರ್ಪ ತೋರಿದ್ದಾನೆ. ಹಣಕ್ಕೆ ಬೇಡಿಕೆ ಇಟ್ಟು ನಿತ್ಯ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿ ಕೃಷ್ಣನ ವಿರುದ್ಧ ಆತನ ತಾಯಿ ಠಾಣೆಗೆ ದೂರು ನೀಡಿದ್ದರು.
Read it : Health : ಉಗುರುಗಳು ಈ ರೀತಿ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.!
ASI ರಾಜು ದೂರಿನ ಹಿನ್ನೆಲೆ ಕೃಷ್ಣನನ್ನು ಠಾಣೆಗೆ ಕರೆತರಲು ತೆರಳಿದ್ದರು. ನಾಗಮಂಗಲದ ಕೋರ್ಟ್ ಬಳಿ ನಿಂತಿದ್ದ ಕೃಷ್ಣನನ್ನು ASI ರಾಜು ಠಾಣೆಗೆ ಕರೆದಿದ್ದರು. ಠಾಣೆಗೆ ಬರಲು ಒಪ್ಪದಿದ್ದಾಗ ಕೃಷ್ಣನ ಕಾಲರ್ ಹಿಡಿದು ಬಲವಂತವಾಗಿ Autoಗೆ ಹತ್ತಿಸಲು ASI ಯತ್ನಿಸಿದ್ದಾರೆ.
ಈ ವೇಳೆ ASI ರಾಜುವನ್ನು ಕೃಷ್ಣ ತಳ್ಳಿದ್ದಾನೆ. ತಳ್ಳಾಡಿದಾಗ ರಾಜು ಕೆಳಗೆ ಬಿದ್ದಿದ್ದಾರೆ. ಬಳಿಕ ಕೃಷ್ಣನನ್ನು ಬಂಧಿಸಿ ನ್ಯಾಯಾಲಯ (Court) ಕ್ಕೆ ಹಾಜರುಪಡಿಸಿದ್ದಾರೆ.
Read it : Lokayukta Raid : ಲೋಕಾಯುಕ್ತ ಬಲೆಗೆ ಬಿದ್ದ ASI.!
ಈ ಎಲ್ಲಾ ದೃಶ್ಯವನ್ನು ಸ್ಥಳೀಯರು ಮೊಬೈಲ್ (Mobile) ನಲ್ಲಿ ಸೆರೆ ಹಿಡಿದಿದ್ದಾರೆ.
ಹಿಂದಿನ ಸುದ್ದಿ : Health : ಉಗುರುಗಳು ಈ ರೀತಿ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.!
ಜನಸ್ಪಂದನ ನ್ಯೂಸ್, ಆರೋಗ್ಯ : ಮಾನವನಿಗೆ ದೇಹದ ಪ್ರತಿಯೊಂದು ಭಾಗವು ಮುಖ್ಯ. ಸ್ವಲ್ಪ ಕಡೆಗಣಿಸಿದರೆ ಆರೋಗ್ಯದ ಮೇಲೆ ದೊಡ್ಡ ಹಾನಿಯನ್ನು ಉಂಟು ಮಾಡಬಹುದು (Can cause great damage). ಕೆಲವರ ಉಗುರುಗಳು ಸುಮ್ಮಸುಮ್ಮನೆ ಉದುರುವುದು, ಬಣ್ಣ ಬದಲಾಗಿರುತ್ತವೆ. ಯಾಕೆ ಹೀಗೆ.? ಮುಂದೆ ಓದಿ.
ದುರ್ಬಲ ಉಗುರುಗಳು ಆಂತರಿಕ ಅಂಶಗಳಿಂದ, ಮುಖ್ಯವಾಗಿ ನಮ್ಮ ಆಹಾರದಿಂದ ಉಂಟಾಗಬಹುದು (Weak nails can be caused by internal factors, mainly our diet) ಎಂದು ತಜ್ಞರು ಹೇಳುತ್ತಾರೆ. ಪೋಷಕಾಂಶ ಕೊರತೆಯಿಂದ ಉಗುರುಗಳು ದುರ್ಬಲವಾಗುವುದು.
ಇದನ್ನು ಓದಿ : ಶಿಕ್ಷಕಿ ವರ್ಗಾವಣೆಗೆ ಲಂಚಕ್ಕೆ ಬೇಡಿಕೆ ; DDPI ಕಚೇರಿಯ ಅಧಿಕಾರಿ ಲೋಕಾಯುಕ್ತ ಬಲೆಗೆ.!
* ಕೆಲವರ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಹೀಗಾಗಲು ಅತಿಯಾದ ಧೂಮಪಾನ (smoking) ಸಾಮಾನ್ಯ ಕಾರಣವಾಗಿರಬಹುದು. ಅಲ್ಲದೇ ಹಳದಿ ಉಗುರುಗಳು ಮಧುಮೇಹದ ಚಿಹ್ನೆಯಾಗಿರಬಹುದು (A sign of diabetes). ಈ ರೀತಿಯ ಉಗುರುಗಳು ಥೈರಾಯ್ಡ್ ಕಾಯಿಲೆ, ಉಸಿರಾಟದ ಕಾಯಿಲೆ, ಶಿಲೀಂಧ್ರಗಳ ಸೋಂಕು, ರುಮಟಾಯ್ಡ್ ಮತ್ತು ಸಂಧಿವಾತ ಕಾಯಿಲೆಗಳನ್ನು ಸೂಚಿಸುತ್ತವೆ.
* ಕೆಲವರ ಉಗುರುಗಳು ಚಮಚದ ಆಕಾರದಲ್ಲಿರುತ್ತವೆ. ಇವರು ರಕ್ತಹೀನತೆ, ಹೈಪೋಥೈರಾಯ್ಡಿಸಮ್ ಅಥವಾ ಯಕೃತ್ತಿನ ಸಮಸ್ಯೆಗಳಿಗೆ ತುತ್ತಾಗಿರಬಹುದು. ಹೀಗಾಗಿ ಆಹಾರದಲ್ಲಿ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಸೇರಿಸುವುದು ಅತ್ಯಗತ್ಯ, ಮುಖ್ಯವಾಗಿ ಕಬ್ಬಿಣ ಭರಿತ ಆಹಾರಗಳ ಮೇಲೆ ಗಮನ ನೀಡಬೇಕು.
ಇದನ್ನು ಓದಿ : ರೊಮ್ಯಾಂಟಿಕ್ ಆಗಿ ಪತ್ನಿಗೆ ಹೂ ಮುಡಿಸುತ್ತಿರುವಾಗ ಹಸುವಿನ ಆಗಮನ ; ಮುಂದೆನಾಯ್ತು Video ನೋಡಿ.!
* ತೆಳುವಾದ ಮತ್ತು ಮೃದುವಾದ ಉಗುರುಗಳನ್ನು ಹೊಂದಿದ್ದರೆ ಅದು ವಿಟಮಿನ್ ಬಿ ಕೊರತೆಯನ್ನು ಸೂಚಿಸುತ್ತದೆ. ಇದನ್ನು ಪರಿಹರಿಸಿಕೊಳ್ಳಲು ಆಹಾರದಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಕೊಬ್ಬಿನಾಮ್ಲ ಇರುವ ಆಹಾರ ಸೇವಿಸುವುದು ಉತ್ತಮ.
* ಉಗುರುಗಳು ಕುಣಿಕೆಯ ರೀತಿ ಕಾಣಿಸಿಕೊಂಡರೆ, ಯಕೃತ್ತು ಅಥವಾ ಮೂತ್ರಪಿಂಡದ ಸಮಸ್ಯೆಗಳ ಸಂಕೇತ ಎಂದು ಪೌಷ್ಟಿಕತಜ್ಞರ (Nutritionist) ಅಭಿಪ್ರಾಯ. ಅಲ್ಲದೇ ಹೃದಯದ ಸಮಸ್ಯೆಯನ್ನು ಕೂಡ ಇರಬಹುದು.
ಇದನ್ನು ಓದಿ : ತಂದೆತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!
* ಉಗುರುಗಳ ಮೇಲಿನ ಬಿಳಿ ಚುಕ್ಕೆಗಳು ಕೇವಲ ಚುಕ್ಕೆಗಳಲ್ಲ, ಇವು ಸತು ಕೊರತೆ ಅಥವಾ ಶಿಲೀಂಧ್ರಗಳ ಸೋಂಕಿನ (Fungal infection) ಸಂಕೇತವಾಗಿರಬಹುದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.