ಜನಸ್ಪಂದನ ನ್ಯೂಸ್, ಡೆಸ್ಕ್ : ಸ್ವೀಟ್ ಅಂಗಡಿಯಲ್ಲಿ ಖರೀದಿಸಿದ ಸಮೋಸಾದಲ್ಲಿ ಕಪ್ಪೆಯ ಕಾಲು ಪತ್ತೆಯಾದ ಆಘಾತಕಾರಿ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನು ಓದಿ : Special news : ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?
ಅಭಯ್ ಖಾಂಡ್‌ನಲ್ಲಿರುವ ಸ್ವೀಟ್ ಅಂಗಡಿಗೆ ಮೂವರು ಸಮೋಸಾ ಖರೀದಿಸಿದ್ದಾರೆ. ಆದರೆ ಓರ್ವನ ಸಮೋಸಾದಲ್ಲಿ ಕಪ್ಪೆಯ ಕಾಲು ಪತ್ತೆಯಾಗಿದೆ.
ಇದರಿಂದ ಗಾಬರಿಗೊಂಡ ವ್ಯಕ್ತಿ ಅಂಗಡಿ ಸಿಬ್ಬಂದಿಯ ಬಳಿ ಸಮೋಸಾ ತೋರಿಸಿ ಸಿಡಿಮಿಡಿಗೊಂಡಿದ್ದಾನೆ. ಇದನ್ನು ಕಂಡ ಅಂಗಡಿಯ ಸಿಬ್ಬಂದಿ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾನೆ.
ವ್ಯಕ್ತಿ ಸಮೋಸಾದಲ್ಲಿರುವ ಪತ್ತೆಯಾದ ಕಪ್ಪೆಯ ವಿಡಿಯೋ ಮೊಬೈಲ್ ನಲ್ಲಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಇದನ್ನು ಓದಿ : ಸಾಯಲು ಬಂದು ರೈಲು ಹಳಿಯಲ್ಲೇ ನಿದ್ರೆಗೆ ಜಾರಿದ ಯುವತಿ; ಮುಂದೆನಾಯ್ತು ಈ Video ನೋಡಿ.!
ಇದರಿಂದ ಆಕ್ರೋಶಗೊಂಡ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಆಹಾರ ಇಲಾಖೆಗೆ ಮಾಹಿತಿ ನೀಡಿದ್ದು, ಆಹಾರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮೋಸಾದ ಮಾದರಿಯನ್ನು ಪರೀಕ್ಷೆಗೆ ಕೊಂಡೊಯ್ದಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
गाजियाबाद, UP में समोसे के अंदर मेंढक की टांग निकली है। मामला बीकानेर स्वीट्स का है। पुलिस ने दुकानदार को कस्टडी में लिया। फूड विभाग ने सैंपल जांच को भेजे। pic.twitter.com/SBcsEs8nMr
— Sachin Gupta (@SachinGuptaUP) September 12, 2024