ಜನಸ್ಪಂದನ ನ್ಯೂಸ್, ನೌಕರಿ : ರೈಲ್ವೆ ಇಲಾಖೆಯಲ್ಲಿ ಬರೋಬರಿ 31,228 ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದ್ದು, ಈ ಎಲ್ಲ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಈ ಹುದ್ದೆಗಳಲ್ಲಿ ಪ್ಯಾರಾ ಮೆಡಿಕಲ್, ಟೆಕ್ನೀಷಿಯನ್, ಜೆಇ, ಡಿಎಂಎಸ್, ಸಿಎಂಎ ಹುದ್ದೆಗಳ ಅಧಿಸೂಚನೆ ಮೂಲಕ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವೆಸ್ಟ್ ಸೆಂಟ್ರಲ್ ರೈಲ್ವೆ, ನಾರ್ಥನ್ ರೈಲ್ವೆ ಹುದ್ದೆಗಳನ್ನು ಅಪ್ರೆಂಟಿಸ್ ತರಬೇತುದಾರರನ್ನಾಗಿ ನೇಮಕ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ.
ಇದನ್ನು ಓದಿ : ರೂ.15,000 ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಕೆ ಆರಂಭ.!
14,298 ಟೆಕ್ನೀಷಿಯನ್ ನೇಮಕಕ್ಕೆ ಪರಿಷ್ಕೃತ ಅಧಿಸೂಚನೆ :
ಟೆಕ್ನೀಷಿಯನ್ ಗ್ರೇಡ್ -1 ಸಿಗ್ನಲ್, ಗ್ರೇಡ್ – 3 ಸೇರಿದಂತೆ 40 ಕೆಟಗರಿಯಲ್ಲಿ ಒಟ್ಟಾರೆ 14,298 ಹುದ್ದೆಗೆ ಈಗ ಪರಿಷ್ಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಕಳೆದ ಮಾರ್ಚ್‌ನಲ್ಲಿ ಸುಮಾರು 18 ಕೆಟಗರಿಗಳಲ್ಲಿ 9,144 ಟೆಕ್ನೀಷಿಯನ್ (ಗ್ರೇಡ್ 1, 3) ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನೇಮಕ ಅಧಿಸೂಚನೆ ಬಿಡುಗಡೆ ಮಾಡಿ ಅರ್ಜಿ ಸ್ವೀಕಾರ ಮಾಡಲಾಗಿತ್ತು.
ಆದರೆ ಈಗ ಹೆಚ್ಚುವರಿ 22 ಕೆಟಗರಿಗಳಲ್ಲಿ ಟೆಕ್ನೀಷಿಯನ್ ಹುದ್ದೆಗಳಿಗೆ ಬೇಡಿಕೆ ಸಲ್ಲಿಕೆಯಾದ ಕಾರಣ, ಇದೀಗ ಒಟ್ಟಾರೆ 40 ಕೆಟಗರಿಗಳಲ್ಲಿ 14,298 ಹುದ್ದೆ ನೇಮಕಾತಿಗೆ ತಿದ್ದುಪಡಿ ಅಧಿಸೂಚನೆ ಪ್ರಕಟಿಸಲಾಗಿದೆ. ಆದ್ದರಿಂದ ಈಗ ಮತ್ತೆ ಅರ್ಜಿ ಸ್ವೀಕಾರ ಮಾಡಲು ಶೀಘ್ರದಲ್ಲೇ ಆರ್‌ಆರ್‌ಬಿ ಅಪ್ಲಿಕೇಶನ್ ಲಿಂಕ್ ಬಿಡುಗಡೆ ಮಾಡಲಿದೆ.
ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್ ವಿಳಾಸ : https://shorturl.at/0mcb0
ಇದನ್ನು ಓದಿ : ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ SSLC ಪಾಸಾದವರಿಂದ ಅರ್ಜಿ ಆಹ್ವಾನ.!
ನೇಮಕಾತಿ ಪ್ರಾಧಿಕಾರ : ಭಾರತೀಯ ರೈಲ್ವೆ ಇಲಾಖೆ.
ಹುದ್ದೆಗಳ ಹೆಸರು : ರೈಲ್ವೆ ಜೆಇ, ಸೂಪರಿಂಟೆಂಡಂಟ್, ಅಸಿಸ್ಟಂಟ್, ಸೂಪರ್‌ವೈಸರ್.
ಕೆಮಿಕಲ್ ಸೂಪರ್‌ವೈಸರ್/ರಿಸರ್ಚ್ ಅಂಡ್ ಮೆಟಾಲರ್ಜಿಕಲ್ ಸೂಪರ್‌ವೈಸರ್ (ರಿಸರ್ಚ್) : 17 (ಆರ್‌ಆರ್‌ಬಿ ಗೋರಖ್‌ಪುರ್‌ನಲ್ಲಿ ಮಾತ್ರ).
ಜೂನಿಯರ್ ಇಂಜಿನಿಯರ್, ಡಿಪಾಟ್ ಮೆಟಾಲರ್ಜಿಕಲ್ ಸೂಪರಿಂಟೆಂಡಂಟ್ ಅಂಡ್ ಕೆಮಿಕಲ್ ಅಂಡ್ ಮೆಟಾಲರ್ಜಿಕಲ್ ಅಸಿಸ್ಟಂಟ್ : 7,934.
ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ : 506 ಜೆಇ ಹುದ್ದೆಗಳಿಗೆ, ಡಿಪಾಟ್ ಮೆಟೀರಿಯಲ್ ಸೂಪರಿಂಟೆಂಡಂಟ್ ಹುದ್ದೆ : 26.
ಪ್ರಮುಖ ದಿನಾಂಕ : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಅಗಸ್ಟ್ 29, 2024 ರ ರಾತ್ರಿ 11-59 ಗಂಟೆವರೆಗೆ.
ಅರ್ಜಿ ತಿದ್ದುಪಡಿ/ಅರ್ಜಿ ಶುಲ್ಕ ಮಾಹಿತಿ ತಿದ್ದುಪಡಿಗೆ ಆರ್‌ಆರ್‌ಬಿ ಅವಕಾಶ ನೀಡುವ ದಿನಾಂಕ : 30-08-2024 ರಿಂದ 08-09-2024 ರವರೆಗೆ.
ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್ ವಿಳಾಸ : https://rb.gy/156n2j
ಇದನ್ನು ಓದಿ : ಬಿಎಸ್ಎನ್ಎಲ್ ಗ್ರಾಹಕರಿಗೆ ಗುಡ್ ನ್ಯೂಸ್ : ʼಬಿಎಸ್ಎನ್ಎಲ್ʼನಿಂದ 4G ಸೇವೆ ಆರಂಭ ; ಎಂದಿನಿಂದ ಗೊತ್ತೇ.?
ಪ್ಯಾರಾ ಮೆಡಿಕಲ್ ಕೆಟಗರಿಯ 1,376 ಹುದ್ದೆ ನೇಮಕ :
ನೇಮಕಾತಿ ಪ್ರಾಧಿಕಾರ : ಭಾರತೀಯ ರೈಲ್ವೆ ಸಚಿವಾಲಯ.
ಹುದ್ದೆಗಳ ಹೆಸರು : ಪ್ಯಾರಾ ಮೆಡಿಕಲ್ ಕೆಟಗರಿ ವಿವಿಧ ಹುದ್ದೆಗಳು.
ಹುದ್ದೆಗಳ ಸಂಖ್ಯೆ : 1,376.
ಪದನಾಮಗಳ ಸಂಖ್ಯೆ : 20.
ಪ್ರಮುಖ ದಿನಾಂಕ : ಆನ್‌ಲೈನ್ ಮೂಲಕ ಅರ್ಜಿ ಸ್ವೀಕಾರ ಮಾಡುವ ಕೊನೆ ದಿನಾಂಕ : ಸಪ್ಟಂಬರ್ 16, 2024 ರ ರಾತ್ರಿ 11-59 ಗಂಟೆವರೆಗೆ.
ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್ ವಿಳಾಸ : https://rb.gy/udyynd
ವೆಸ್ಟ್ ಸೆಂಟ್ರಲ್ ರೈಲ್ವೆ ವಲಯದಲ್ಲಿ 3,317 ಹುದ್ದೆಗಳ ನೇಮಕ :
ನೇಮಕ ಪ್ರಾಧಿಕಾರ : ವೆಸ್ಟ್ ಸೆಂಟ್ರಲ್ ರೈಲ್ವೆ, ಆರ್‌ಆರ್‌ಸಿ.
ಹುದ್ದೆ ಹೆಸರು : ಅಪ್ರೆಂಟಿಸ್ ತರಬೇತುದಾರರು.
ಹುದ್ದೆಗಳ ಸಂಖ್ಯೆ : 3,317.
ಹುದ್ದೆ ಅವಧಿ : 1 ವರ್ಷ.
ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ, ಐಟಿಐ ಪಾಸ್.
ಪ್ರಮುಖ ದಿನಾಂಕ : ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : ಸಪ್ಟಂಬರ್ 04, 2024 ರ ರಾತ್ರಿ 11-59 ಗಂಟೆವರೆಗೆ.
ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್ ವಿಳಾಸ : https://rb.gy/up5ess
ಇದನ್ನು ಓದಿ : ದೀನ್ ದಯಾಳ್ ಸ್ಪರ್ಶ್ ಯೋಜನೆ : ವಿದ್ಯಾರ್ಥಿಗಳಿಗೆ ಸಿಗಲಿದೆ ರೂ. 6 ಸಾವಿರ ಸ್ಕಾಲರ್‌ಶಿಪ್.!
ಉತ್ತರ ರೈಲ್ವೆ ವಲಯದಲ್ಲಿ 4,096 ಹುದ್ದೆ ನೇಮಕ :
ನೇಮಕಾತಿ ಪ್ರಾಧಿಕಾರ : ಉತ್ತರ ರೈಲ್ವೆ, ರೈಲ್ವೆ ನೇಮಕಾತಿ ಮಂಡಳಿ.
ಹುದ್ದೆ ಹೆಸರು : ಆಕ್ಟ್ ಅಪ್ರೆಂಟಿಸ್ ಹುದ್ದೆ.
ಹುದ್ದೆಗಳ ಸಂಖ್ಯೆ : 4,096.
ಅಪ್ರೆಂಟಿಸ್ ಹುದ್ದೆ ಅವಧಿ : 1 ವರ್ಷ.
ಮಾಸಿಕ ಸ್ಟೈಫಂಡ್ : ಅಪ್ರೆಂಟಿಸ್ ಕಾಯ್ದೆ ಪ್ರಕಾರ.
ಪ್ರಮುಖ ದಿನಾಂಕ : ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಸಪ್ಟಂಬರ್ 16, 2024 ರ ರಾತ್ರಿ 11-59 ಗಂಟೆವರೆಗೆ.
ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್ ವಿಳಾಸ : https://rb.gy/o2to2e
Disclaimer : All information provided here is for reference purpose only. While we try to list all the jobs for the convenience of teenager, this information is available on the internet. Please refer official.